ಶ್ರೀಮುರುಳಿ
ಸಿನಿಮಾ ಸುದ್ದಿ
ಮದಗಜದಲ್ಲಿ ಎನ್ ಆರ್ ಐ ಆಗಿ ಶ್ರೀಮುರುಳಿ!
ಅಯೋಗ್ಯ ಯಶಸ್ಸಿನ ನಂತರ ನಿರ್ದೇಶಕ ಮಹೇಶ್ ಕುಮಾರ್ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಮುಂದಿನ ಸಿನಿಮಾದಲ್ಲಿ ಘಟಾನುಘಟಿಗಳ ಜೊತೆ ಕೆಲಸ ...
ಬೆಂಗಳೂರು: ಅಯೋಗ್ಯ ಯಶಸ್ಸಿನ ನಂತರ ನಿರ್ದೇಶಕ ಮಹೇಶ್ ಕುಮಾರ್ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮುಂದಿನ ಸಿನಿಮಾದಲ್ಲಿ ಘಟಾನುಘಟಿಗಳ ಜೊತೆ ಕೆಲಸ ಮಾಡಲಿದ್ದಾರೆ, ಮದಗಜ ಸಿನಿಮಾ ನಿರ್ದೇಶನ ಮಾಡುತ್ತಿರುವ ಮಹೇಶ್ ಶ್ರೀಮುರುಳಿ ನಟನೆಯ ಮದಗಜ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಹೆಬ್ಬುಲಿ ನಿರ್ಮಾಪಕ ಉಮಾಪತಿ, ಮದಗಜ ಸಿನಿಮಾ ಸಂಬಂಧ ಬುಧವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ, ಫೆಬ್ರವರಿ 2019 ರಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಿದ್ದಾರೆ, ಸದ್ಯ ಶ್ರೀಮುರುಳಿ ಭರಾಟೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಕಥೆಯ ಬಗ್ಗೆ ಸಿನಿಮಾ ಆರಂಭವಾಗುವ ಸಮಯಕ್ಕೆ ಹೇಳುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ, ಸಿನಿಮಾದಲ್ಲಿ ಶ್ರೀಮುರುಳಿ ಎನ್ ಆರ್ ಐ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ, ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ವಿಶೇಷ ಅನುಭವ ಹೊಂದಿರುವ ಅಲೆಕ್ಸ್ ಅವರನ್ನು ಸಿನಿಮಾಗೆ ತರಲಾಗುತ್ತದೆ.
ನಿರ್ದೇಶಕ ಮಹೇಶ್ ಸಂಪೂರ್ಣವಾಗಿ ಕಥೆ ನೀಡಿದ ನಂತರ ಹಾಗೂ ಶ್ರೀಮುರುಳಿ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳು ಪೂರ್ಣಗೊಂಡ ನಂತರ ಮದಗಜ ಆರಂಭಿಸಲಾಗುವುದು ಎಂದು ಉಮಾಪತಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ