ನಟ ವಿಜಿ ಜಾಮೀನು ಅರ್ಜಿ ತೀರ್ಪು ಮುಂದೂಡಿಕೆ

ಜಿಮ್ ತರಬೇತುದಾರ ಮಾರುತಿಗೌಡ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಬಂಧಿಯಾಗಿರುವ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಜಾಮೀನು ಅರ್ಜಿ ತೀರ್ಪ ಮತ್ತೆ ಮುಂದೂಡಿಕೆಯಾಗಿದೆ.
ನಟ ವಿಜಿ ಜಾಮೀನು ಅರ್ಜಿ ತೀರ್ಪು ಮುಂದೂಡಿಕೆ
ನಟ ವಿಜಿ ಜಾಮೀನು ಅರ್ಜಿ ತೀರ್ಪು ಮುಂದೂಡಿಕೆ
ಬೆಂಗಳೂರು: ಜಿಮ್ ತರಬೇತುದಾರ ಮಾರುತಿಗೌಡ  ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಬಂಧಿಯಾಗಿರುವ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಜಾಮೀನು ಅರ್ಜಿ ತೀರ್ಪ ಮತ್ತೆ ಮುಂದೂಡಿಕೆಯಾಗಿದೆ.
ಬೆಂಗಳೂರು ನಗರದ 70ನೇ ಸೆಷನ್ಸ್ ಕೋರ್ಟ್ ವಿಜಯ್ ಸೇರಿ ನಾಲ್ವರ ಜಾಮೀನು ಅರ್ಜಿ ತೀರ್ಪನ್ನು ಅಕ್ಟೋಬರ್ 1ಕ್ಕೆ ಕಾಯ್ದಿರಿಸಿದೆ. ಇದರಿಂದ ನಟ ವಿಜಿ ಮತ್ತೆರಡು ದಿನ ಜೈಲಿನಲ್ಲೇ ಕಳೆಯಬೇಕಾಗಿದೆ.
ವಿಜಿಗೆ ಜಾಮೀನು ಸಿಕ್ಕರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಹಾಗಾಗಿ ಜಾಮೀನು ನಿರಾಕರಿಸಬೇಕು ಎಂದು ಸರ್ಕಾರಿ ವಕೀಲರು ಆಕ್ಷೇಪ ಸಲ್ಲಿಸಿದ್ದಾರೆ. ಇದೇ ವೇಳೆ ನಟನ ವಿರುದ್ಧ ಪೋಲೀಸರು ವಿನಾಕಾರಣ ಪ್ರಕರಣ ದಾಖಲಿಸಿದ್ದಾರೆ. ತಮ್ಮ ಕಷಿದಾರರಿಗೆ ಜಾಮೀನು ನೀಡಬೇಕುಯ್ ಎಂದು ವಿಜಿ ಪರ ವಕೀಲರು ವಾದ ಮಂಡಿಸಿದ್ದಾರೆ.
ಬೆಂಗಳೂರು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಟಿಪಿ ರಾಮಲಿಂಗೇಗೌಡ ಅವರೆದುರು ಈ ಜಾಮೀನು ಅರ್ಜಿ ವಿಚಾರಣೆ ನಡೆದಿದೆ.
ಅಪಹರಣ ಹಾಗೂ ಹಲ್ಲೆ ಪ್ರಕರಣದಡಿ  ಜಾಮೀನು ನೀಡುವಂತೆ ವಿಜಯ್ ಹಾಗೂ ಇತರೆ ಮೂವರು ಸಲ್ಲಿಸಿದ್ದ ಅರ್ಜಿಗಳನ್ನು 8ನೇ ಎಸಿಎಂಎಂ ನ್ಯಾಯಾಲಯ ವಜಾ ಮಾಡಿದ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು.
ಇನ್ನೊಂದೆಡೆ ಹಲ್ಲೆಗೊಳಗಾದ ಮಾರುತಿಗೌಡ ಶುಕ್ರವಾರ ಆಸ್ಪತ್ರೆಯಿಂದ  ಡಿಸ್​ಚಾರ್ಜ್.ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com