ನಡುವೆ ಅಂತರವಿರಲಿ: ಕಾಲೇಜಿನ ಯುವ ಪ್ರೇಮಿಗಳ ಕಥೆ!

ನಡುವೆ ಅಂತರವಿರಲಿ ಸಿನಿಮಾದ ಟ್ರೇಲರ್ ಅನ್ನು ಪುನೀತ್ ರಾಜ್ ಕುಮಾರ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ...
ನಡುವೆ ಅಂತರವಿರಲಿ ಸಿನಿಮಾ ಸ್ಟಿಲ್
ನಡುವೆ ಅಂತರವಿರಲಿ ಸಿನಿಮಾ ಸ್ಟಿಲ್
Updated on
ಬೆಂಗಳೂರು: ನಡುವೆ ಅಂತರವಿರಲಿ ಸಿನಿಮಾದ ಟ್ರೇಲರ್ ಅನ್ನು ಪುನೀತ್ ರಾಜ್ ಕುಮಾರ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೆ ಅಕ್ಟೋಬರ್ 5 ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ, ರೋಮ್ಯಾಂಟಿಕ್ ಕಥೆಯುಳ್ಳ ಸಿನಿಮಾದಲ್ಲಿ ಐಶಾನಿ ಶೆಟ್ಟಿ,  ಪ್ರಖ್ಯಾತ್ ಪರಮೇಶ್, ನಟಿಸಿದ್ದಾರೆ, ಟೀನೇಜ್ ಯುವಕ ಯವತಿಯರ  ಕೇಂದ್ರಿತ ಸಿನಿಮಾವಾಗಿದೆ,
ಹದಿಹರೆಯದ ತಲ್ಲಣಗಳ ಸುತ್ತ ಹೆಣೆದಿರುವ ಕಥೆ ಸಿನಿಮಾದಲ್ಲಿದೆ. ಲವ್‌ಸ್ಟೋರಿಯ ಸುತ್ತ ಚಿತ್ರಕಥೆ ಹೆಣೆದಿದ್ದರೂ, ಮಾಮೂಲಿಯಾಗಿ ಹೇಳಿಲ್ಲ. ಕಾಲೇಜು ಯುವ ಮನಸ್ಸುಗಳು ಭಾವೋದ್ವೇಗ, ತಲ್ಲಣಗಳನ್ನು ಚಿತ್ರಿಸಲಾಗಿದೆ,.
ಕಾಲೇಜು ಅವಧಿಯಲ್ಲಿ ಪ್ರೀತಿ ಪ್ರೇಮಕ್ಕೆ ಸಿಲುಕಿ  ನಂತರ ಹೇಗೆ ದೂರಾಗುತ್ತಾರೆ, ಎಂಬುದನ್ನು ವಿವರಿಸಲಾಗಿದೆ,  ಕಳೆದ 10 ವರ್ಷಗಳಿಂದ ಸಿನಿಮಾ ಇಂಡಸ್ಚ್ರಿಯಲ್ಲಿರುವ ರವೀಣ್ ಜೊತೆಗೆ ಮಂಜು ಮಾಂಡವ್ಯ ಕೂಡ ಸಾಥ್ ನೀಡಿದ್ದಾರೆ, 
ರವೀಣ್  ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ಕೂಡ ಮಾಡಿದ್ದಾರೆ, ಈ ಸಿನಿಮಾದ ಶಾಕುಂತಲೇ ಸಿಕ್ಕಳು ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಸಂಜಿತ್ ಹೆಗ್ಡೆ ಹಿನ್ನೆಲೆ ಗಾಯನ ನೀಡಿದ್ದಾರೆ, 
ಬೃಂದಾ ಪ್ರೊಡಕ್ಷನ್ ನಲ್ಲಿ  ನಿರ್ಮಾಣವಾಗಿರುವ ಸಿನಿಮಾದಲ್ಲಿ ಟಿನೇಜ್‌ ಹುಡುಗ ಹುಡುಗಿಯರ ಕಥೆಯ ಜತೆಗೆ ಪೋಷಕರಿಗೂ ಒಂದಷ್ಟು ಮಾಹಿತಿಯನ್ನು ಹೇಳುವ ಪ್ರಯತ್ನ ಆಗಿದೆ. ಹದಿ ಹರೆಯದ ಪ್ರೀತಿಗೆ ಎಂತಹ ಶಕ್ತಿ ಇರಲಿದೆ, ಈ ಸಂದರ್ಭದಲ್ಲಿ ಹುಡುಗ ಹುಡುಗಿ ಹೇಗಿರಬೇಕು ಎಂದು ಹೇಳಲಾಗಿದೆ. ಈ ಎಲ್ಲವನ್ನೂ ಸಿನಿಮಾದ ಶೀರ್ಷಿಕೆ ಹೇಳಲಿದೆ. 
ಅಚ್ಯುತ್‌ ಕುಮಾರ್‌, ಅರುಣಾ ಬಾಲರಾಜ್‌, ಶ್ರೀನಿವಾಸ್‌ ಪ್ರಭು, ಚಿಕ್ಕಣ್ಣ, ರಿಷಿಕಾ ಶರ್ಮಾ ಹೀಗೆ ಅನುಭವಿ ಕಲಾವಿದರು ತಾರಾಗಣದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com