ಶರಣ್
ಸಿನಿಮಾ ಸುದ್ದಿ
ಕನ್ನಡ ರಾಜ್ಯೋತ್ಸವಕ್ಕೆ ವಿಕ್ಟರಿ ಭಾಗ 2 ರಿಲೀಸ್
ನಟ ಶರಣ್ ಆಭಿನಯದ ರ್ಯಾಂಬೋ 2 ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಂಡಿದೆ, ಇದೇ ಹೊತ್ತಲ್ಲಿ ವಿಕ್ಟರಿ ಮುಂದುವರಿಗ ಭಾಗ ಬಿಡುಗಡೆಗೆ ಸಿದ್ಧವಾಗುತ್ತಿದೆ....
ಬೆಂಗಳೂರು: ನಟ ಶರಣ್ ಆಭಿನಯದ ರ್ಯಾಂಬೋ 2 ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಂಡಿದೆ, ಇದೇ ಹೊತ್ತಲ್ಲಿ ವಿಕ್ಟರಿ ಮುಂದುವರಿಗ ಭಾಗ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಹರಿ ಸಂತೋಷ್ ನಿರ್ದೇಶನದ ವಿಕ್ಟರಿ-2 ಜಯಣ್ಣ ಬ್ಯಾನರ್ ನಲ್ಲಿ ನವೆಂಬರ್ 1 ರಿಂದ ಎಲ್ಲಾ ಚಿತ್ರ ಮಂದಿರಗಳಲ್ಲೂ ಪ್ರದರ್ಶನ ಕಾಣಲಿದೆ, ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿರುವ ವಿಕ್ಟರಿ 2013 ರಲ್ಲಿ ಬಿಡುಗಡೆ ಯಾಗಿತ್ತು.
ವಿಕ್ಟರಿ ಪಾರ್ಟ್ 2 ನಲ್ಲಿ ಬಾಲಿವುಡ್ ಬೆಡಗಿ ಅಸ್ಮಿತಾ ಸಬಜ್ ನಟಿಸಿದ್ದಾರೆ, ಜೊತೆಗೆ ಅಪೂರ್ವ ಅಭಿನಯಿಸಿದ್ದಾರೆ, ತರುಣ್ ಶಿವಪ್ಪ ಸಿನಿಮಾ ನಿರ್ಮಾಣ ಮಾಡಿದ್ದು , ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ