ಭಟ್ಟರ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್, ಬರಲಿದೆ ಪಂಚತಂತ್ರ-2

ಯೋಗರಾಜ ಭಟ್ಟರ ಹೊಸ ಚಿತ್ರ "ಪಂಚತಂತ್ರ"ಗೆ ಕನ್ನಡ ಸಿನಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಬಂದಿದೆ. ಮೂರನೇ ವಾರದತ್ತ ಮುನ್ನುಗ್ಗಿತ್ತಿರುವ ಈ ಚಿತ್ರ ಕರ್ನಾಟಕದ ಸುಮಾರು 80 ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ.
ಭಟ್ಟರ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್, ಬರಲಿದೆ ಪಂಚತಂತ್ರ 2
ಭಟ್ಟರ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್, ಬರಲಿದೆ ಪಂಚತಂತ್ರ 2
Updated on
ಬೆಂಗಳೂರು: ಯೋಗರಾಜ ಭಟ್ಟರ ಹೊಸ ಚಿತ್ರ "ಪಂಚತಂತ್ರ"ಗೆ ಕನ್ನಡ ಸಿನಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಬಂದಿದೆ. ಮೂರನೇ ವಾರದತ್ತ ಮುನ್ನುಗ್ಗಿತ್ತಿರುವ ಈ ಚಿತ್ರ ಕರ್ನಾಟಕದ ಸುಮಾರು 80 ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ.
"ಪಂಚತಂತ್ರ" ಈ ಪರಿ ಯಶಸ್ಸನ್ನು ಕಂಡ ಚಿತ್ರತಂಡ ಇದೀಗ ಚಿತ್ರದ ಮುಂದಿನ ಭಾಗ "ಪಂಚತಂತ್ರ-2" ತಯಾರಿಗೆ ನಿರ್ಧರಿಸಿದೆ. ಇದು ಮೊದಲ ಭಾಗಕ್ಕಿಂತ ಹೆಚ್ಚು ದೊಡ್ಡ ಪ್ರಮಾಣದ ತಾರಾ ಬಳಗವನ್ನು ಹೊಂದಿರಲಿದೆ, ಹಾಗೆಯೇ ದೊಡ್ಡ ಬಜೆಟ್ ಚಿತ್ರವಾಗಿರಲಿದೆ.  ಈ ಚಿತ್ರ ಸಹ ಯೋಗರಾಜ್ ಭಟ್ ಗರಡಿಯಲ್ಲೇ ಮೂಡಿಬರಲಿದ್ದು  ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ  ತಯಾರಾಗಲಿದೆ. ಹರಿಪ್ರಸಾದ್ ಜಯಣ್ಣ ಮತ್ತು ಹೆಮಂತ್ ಪರಾದ್ಕರ್  ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಭಟ್ಟರ "ಗಾಳಿಪಟ-2" ಹಾಗೂ ಶಿವರಾಜ್ ಕುಮಾರ್ ಜತೆಗಿನ ಯೋಜನೆ ಪೂರ್ಣಗೊಂಡ ನಂತರ "ಪಂಚತಂತ್ರ 2" ಚಿತ್ರೀಕರಣ ಪ್ರಾರಂಭಿಸಲು ಚಿತ್ರನಿರ್ಮಾಪಕರು ನಿರ್ಧರಿಸಿದ್ದಾರೆ. ಇದಕ್ಕಾಗಿಚಿತ್ರಕಥೆ ರಚನೆ ಸಧ್ಯವೇ ಪ್ರಾರಂಬವಾಗ್ಲಿದೆ.ಇದೇ ವೇಳೆ ಚಿತ್ರತಂಡ ಮೊದಲ ಭಾಗದ ಕುರಿತಂತೆ ಪ್ರೇಕ್ಷಕರ ಆಸಕ್ತಿಯನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದು ಮೊದಲ ಬಾಗದಲ್ಲಿರುವುದಕ್ಕೆ ಪೂರಕವಾಗಿಯೇ ಕಥೆ ಹೆಣೆಯಲು ತೀರ್ಮಾನಿಸಿದೆ.
ಪಂಚತಂತ್ರದಲ್ಲಿ ವರುಣ್ ಹಾಗೂ ಸೋನು ಮೊಂಟಾರಿಯೋ ಮುಖ್ಯ ಭುಮಿಕೆಯಲ್ಲಿದ್ದಾರೆ. ಇದರೊಡನೆ ರಂಗಾಯಣ ರಘು ಸಹ ಕಾಣಿಸಿಕೊಂಡಿದ್ದು ಅರ್ಜುನ್ ಜನ್ಯ ಚಲನಚಿತ್ರಕ್ಕಾಗಿ ಸಂಗೀತವನ್ನು ನೀಡಿದ್ದರೆ ಸುಗ್ನಾನ್ ಛಾಯಾಗ್ರಹಣ ಮಾಡಿದ್ದಾರೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com