ವರನಟ ರಾಜ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್: ರಾಜ್‍ಕುಮಾರ್ ಪುಣ್ಯಸ್ಮರಣೆಯಂದು ರಾಘಣ್ಣ ಘೋಷಣೆ

ಇಂದು ಕನ್ನಡದದ ವರನಟ ಡಾ. ರಾಜ್‍ಕುಮಾರ್ ಪುಣ್ಯಸ್ಮರಣೆ. ಈ ದಿನ ರಾಜ್ ಕುಟುಂಬದ ಎಲ್ಲಾ ಸದಸ್ಯರೂ ಬೆಂಗಳುರು ಕಂಠೀರವ ಸ್ಟುಡಿಯೋದಲ್ಲಿನ ರಾಜ್ ಸಮಾಧಿಗೆ ಆಗಮಿಸಿ ಪೂಜೆ ಸಲಿಸಿದ್ದಾರೆ
ರಾಜ್‍ಕುಮಾರ್ ಪುಣ್ಯಸ್ಮರಣೆ
ರಾಜ್‍ಕುಮಾರ್ ಪುಣ್ಯಸ್ಮರಣೆ
ಬೆಂಗಳೂರು: ಇಂದು ಕನ್ನಡದದ ವರನಟ ಡಾ. ರಾಜ್‍ಕುಮಾರ್ ಪುಣ್ಯಸ್ಮರಣೆ. ಈ ದಿನ ರಾಜ್ ಕುಟುಂಬದ ಎಲ್ಲಾ ಸದಸ್ಯರೂ ಬೆಂಗಳುರು ಕಂಠೀರವ ಸ್ಟುಡಿಯೋದಲ್ಲಿನ ರಾಜ್ ಸಮಾಧಿಗೆ ಆಗಮಿಸಿ ಪೂಜೆ ಸಲಿಸಿದ್ದಾರೆ. ಈ ವೇಳೆ ಮಾತನಾಡಿದ ರಾಜ್‍ಕುಮಾರ್ ಪುತ್ರ ರಾಘವೇಂದ್ರ ರಾಜ್‍ಕುಮಾರ್ "ಅಪ್ಪಾಜಿಯ ಹುಟ್ಟುಹಬ್ಬವಾದ ಏ.24ರಂದು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡುತ್ತಿದ್ದೇವೆ" ಎಂದು ಘೋಷಿಸಿದ್ದಾರೆ.
ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಮೂವರೂ ಕುಟುಂಬ ಸಮೇತರಾಗಿ ಆಗಮಿಸಿ ತಂದೆ-ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. 
"ಏಪ್ರಿಲ್ ಬಂತೆಂದರೆ ರಾಜಣ್ಣನವರ ಮಾಸವಾಗಿದೆ.ಆ ದಿನ ನೆನೆದರೆ ಮೈ ಝುಂ ಎನ್ನುತ್ತದೆ. ಕಳೆದ ವರ್ಷ "ಅಮ್ಮನ ಮನೆ" ಚಿತ್ರಮಾಡಿ ಅಮ್ಮನಿಗೆ ಅರ್ಪಿಸಿದ್ದೆ, ಈ ಬಾರಿ "ಅಪ್ಪನ ಅಂಗಿ" ಚಿತ್ರ ಮಾಡಲಿದ್ದೇನೆ, ಇದನ್ನು ಅಪ್ಪಾಜಿಗೆ ಸಮರ್ಪಿಸಲಿದ್ದೇನೆ" ರಾಘವೇಂದ್ರ ರಾಜ್‍ಕುಮಾರ್ ಹೇಳಿದ್ದಾರೆ.
"ಮಾಧ್ಯಮದವರ ಜತೆ ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ" ಎಂದು ಅವರು ಹೇಲೀದರು.
"ಕಳೆದ ಎರಡು ವರ್ಷಗಳಿಂಡ ನನ್ನ ದೇಹದ ಒಂದು ಬಾಗ ಕೆಲಸ ಮಾಡುತ್ತಿಲ್ಲ, ಆದರೆ ಅಪ್ಪಾಜಿ ಆಶೀರ್ವಾದದಿಂಡ ಮೂರು ಚಿತ್ರಗಳನ್ನು ಮಾಡುತ್ತಿದ್ದೇನೆ"
"ಈವರೆಗೆ ನಾವು ಅಣ್ಣತಮ್ಮಂದಿರು ಮೂವರೂ ಒಟ್ತಾಗಿ ಚಿತ್ರವೊಂದರಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅಂತಹಾ ಒಂದು ಚಿತ್ರ ಮಾಡುವುದು ಖಚಿತ, ಶಿವಣ್ಣ, ನಾನು ಹಾಗೂ ಅಪ್ಪು ಮೂವರೂ ಒಟ್ತಾಗಿ ತೆರೆ ಮೇಲೆ ಕಾಣಿಸಿಕೊಳ್ಲಬೇಕಿದೆ, ಅದಕ್ಕಾಗಿ ಉತ್ತಮ ಕತೆ ಹುಡುಕಾಟ ನಡೆಸಿದ್ದೇನೆ. ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ..
ನಟ ಪುನೀತ್ ರಾಜ್‍ಕುಮಾರ್ ಮಾತನಾಡಿ "ನನಗೆ ಅಪ್ಪನ ಅಂಗಿ ಎಂದರೆ ಬಿಳಿ ಬಣ್ಣ ನೆನಪಾಗುತ್ತದೆ. ಅವರು ಆ ಬಣ್ಣ ಬಿಟ್ಟು ಬೇರೆ ಧರಿಸುತ್ತಿರಲಿಲ್ಲ. ಅಲ್ಲದೆ ಜಾಸ್ತಿ ಬೆಲೆ ಬಾಳುವ ಬಟ್ಟೆ, ವಸ್ತುಗಳನ್ನು ಬಳಸುತ್ತಿರಲಿಲ್ಲ" ಎಂದರು. :ಅಪ್ಪಾಜಿ ಕುರಿತು ಬಯೋಪಿಕ್ ಮಾಡೋದು ಬಹಳ ಕಷ್ತ" ಎಂದು ಪುನೀತ್ ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com