ಜನರು ನಿಮ್ಮ ಕೆಲಸವನ್ನು ಗಮನಿಸುತ್ತಾರೆಯೆ ಹೊರತು ನಿಮ್ಮ ಹಿನ್ನೆಲೆಯನ್ನಲ್ಲ: ನಿಶ್ವಿಕಾ ನಾಯ್ಡು

"ಅಮ್ಮ ಐ ಲವ್ ಯು" ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಮಾಡೆಲ್ ಕಂ ಹೀರೋಯಿನ್ ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದಲ್ಲಿ ಇದಾಗಲೇ ಒಂದು ವರ್ಷ ಪೂರೈಸಿದ್ದಾರೆ.
ನಿಶ್ವಿಕಾ ನಾಯ್ಡು
ನಿಶ್ವಿಕಾ ನಾಯ್ಡು
ಬೆಂಗಳೂರು: "ಅಮ್ಮ ಐ ಲವ್ ಯು" ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಮಾಡೆಲ್ ಕಂ ಹೀರೋಯಿನ್ ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದಲ್ಲಿ ಇದಾಗಲೇ ಒಂದು ವರ್ಷ ಪೂರೈಸಿದ್ದಾರೆ. ಇದೀಗ ಅವರ ಮೂರನೇ ಚಿತ್ರ "ಪಡ್ಡೆಹುಲಿ" ಬಿಡುಗಡೆಗೆ ಸಿದ್ದವಾಗಿದ್ದು ಚಿತ್ರರಂಗದಲ್ಲಿ ಇಂತಹಾ ಉತ್ತಮ ಅವಕಾಶ ಸಿಕ್ಕಿರುವುದು ಅವರ ಅದೃಷ್ಟ ಎಂದೇ ಭಾವಿಸಿದ್ದಾರೆ.
"ನನ್ನ ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ನನಗೆ ಈ ಚಿತ್ರದ ಅವಕಾಶ ಸಿಕ್ಕಿತು. ಅಮ್ಮ ಐ ಲವ್ ಯು ನನ್ನ ಚೊಚ್ಚಲ ಪ್ರಯತ್ನವಾಗಿದ್ದು ನನಗೆ ಪಡ್ಡೆಹುಲಿ ಚಿತ್ರ ನಿರ್ಮಾಪಕರಿಂದ ಆಡಿಷನ್ ಗೆ ಕರೆ ಬಂದಿತ್ತು. ಮತ್ತು ಹಾಗೆ ಆಡಿಷನ್ ಮಾಡಿದ ಕೆಲವೇ ದಿನಗಳಲ್ಲಿ ಣಾನು ಆ ಪಾತ್ರಕ್ಕೆ ಆಯ್ಕೆಯಾಗಿದ್ದೆ." ನಿಶ್ವಿಕಾ ತಮ್ಮ ನೆನಪನ್ನು ಬಿಚ್ಚಿಟ್ಟಿದ್ದಾರೆ.
"ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಸೆಟ್ ನಲ್ಲಿದ್ದಾಗಲೇ ನನಗೆ ಅಮ್ಮ ಐ ಲವ್ ಯು ಚಿತ್ರಕ್ಕೆ ಕರೆ ಬಂದಿದೆ, ಅಮ್ಮ ಐ ಲವ್ ಯು ಚಿತ್ರದ ಶೂಟಿಂಗ್ ನಡೆಯುವಾಗಲೇ ಪಡ್ಡೆಹುಲಿಗೆ ನಾನು ಆಯ್ಕೆಯಾಗಿದ್ದೆ. ಮೊದಲ ಚಿತ್ರದಲ್ಲಿನ ನನ್ನ ಅಭಿನಯ ಕಂಡಿದ್ದ ಗುರು ದೇಶಪಾಂಡೆ ತಮ್ಮ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ ನನ್ನನ್ನೇ ಆಯ್ಕೆ ಮಾಡಿದ್ದರು.
"ಈ ವರ್ಷ ನನ್ನ ಮೂರು ಚಿತ್ರಗಳು ತೆರೆಕಾಣಲಿದೆ. ಇದು ಪ್ರಾರಂಭವಷ್ಟೆ, ಇಲ್ಲಿ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಬೇಕಿದೆ. ನಾನು ಚಿತ್ರನಿರ್ಮಾಪಕರು ಹಾಗೂ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪುತ್ತೇನೆ ಎನ್ನುವ ಭರವಸೆ ನನಗಿದೆ." ನಟಿ ಹೇಳಿದ್ದಾರೆ.
ಪಡ್ಡೆಹುಲಿ ಮೂಲಕ ನಿಶ್ವಿಕಾ ಚಿತ್ರದ ಹಿನ್ನೆಲೆಯ ಪ್ರಾಮುಖ್ಯತೆಯನ್ನು ಅರ್ಥೈಸಿಕೊಂಡಿದ್ದಾರೆ. "ನಾನು ಮುಂಬೈನಲ್ಲಿ ನನ್ನ ತರಬೇತಿ ಸಮಯದಲ್ಲಿ ಈ ಹಿನ್ನಲೆ ಬಗ್ಗೆ ಕಲಿತಿದ್ದೇನೆ.ಗುರು ನನಗೆ ಈ ವಿಚಾರವನ್ನು ತಿಳಿಸಿಕೊಟ್ಟದ್ದಕ್ಕೆ ನನಗೆ ಸಂತಸವಾಗಿದೆ.ವಾಸ್ತವದಲ್ಲಿ ನಾವು ಸೆಟ್ ಗೆ ತೆರಳುವ ಮುನ್ನ 2 ದಿನಗಳವರೆಗೆ ನಾವು ಪೂರ್ವಾಭ್ಯಾಸ ಮಾಡಿದ್ದೇವೆ. ಇದು ನಮ್ಮ ನಡುವೆ ಇರುವವರ ಸಾಮರ್ಥ್ಯವನ್ನು ತಿಳಿಯಲು ಸಹಾಯವಾಗಿದೆ.
ಶ್ರೇಯಸ್ ಮಂಜು ಪಾಲಿಗೆ ಇದು ಚೊಚ್ಚಲ ಚಿತ್ರ. ಆದರೆ ಚಿತ್ರದ ಕಥಾವಸ್ತು ಅವರಿಗೇನೂ ಹೊಸದಲ್ಲ. ಇವರ ತಂದೆ ಖ್ಯಾತ ನಿರ್ಮಾಪಕ ಕೆ. ಮಂಜು ಅವರಾಗಿದ್ದರೂ ಶ್ರೇಯಸ್ ತಮ್ಮ ತಂದೆ ಹೆಸರಿನಿಂದ ಪ್ರಸಿದ್ದರಾಗುವುದಕ್ಕೆ ಬಯಸುವುದಿಲ್ಲ. ಅವರು ಚಿತ್ರತಂಡದ ಎಲ್ಲಾ ವಿಭಾಗಗಳ ಕಡೆಗೆ ಸಮಾನ ಒಲವು ಪ್ರದರ್ಶಿಸಿದ್ದಾರೆ ಎಂದು ನಟಿ ಹೇಳಿದ್ದಾರೆ.
"ಒಮ್ಮೆ ಚಿತ್ರೋದ್ಯಮದಲ್ಲಿ ಅವಕಾಶ ಸಿಕ್ಕುವವರೆಗೆ ಮಾತ್ರ ನಿಮಗೆ ಗಾಡ್ ಫಾರ್ದರ್ ಅವಶ್ಯಕ ಎನಿಸುತ್ತದೆ. ಆದರೆ ಸಿಕ್ಕಿದ ಅವಕಾಶವನ್ನು ಹೇಗೆ ನೀವು ಬಳಸಿಕೊಳ್ಳುತ್ತೀರಿ, ಇದನ್ನು ಹೇಗೆ ಮುಂದುವರಿಸಿಕೊಂಡು ಹೋಗುವಿರಿ ಎನ್ನುವುದು ನಿಮ್ಮ ಕೈಯಲ್ಲೇ ಇರುತ್ತದೆ. ಪ್ರೇಕ್ಷಕರು ನಿಮ್ಮ ಅಭಿನಯದ ಮೂಲಕವಷ್ತೇ ನಿಮ್ಮನ್ನು ಗುರುತಿಸುತ್ತಾರೆ, ನೀವೆಲ್ಲಿಂದ ಬಂದವರು ಎನ್ನುವುದರಿಂದಲ್ಲ." ನಿಶ್ವಿಕಾ ವಿವರಿಸಿದರು.
ಈ ಚಿತ್ರದಲ್ಲಿ ನಾನು ಶಾಲಾ ಬಾಲಕಿಯಾಗಿಯೂ ಕಾಣಿಸಿಕೊಳ್ಳುತ್ತೇನೆ, ಶಾಲಾ ದಿನಗಳನ್ನು ಮತ್ತೆ ನೆನೆಪು ಮಾಡಿಕೊಳ್ಲಲು ಗುರು ಅವರು ನನಗ ಅವಕಾಶ ಕೊಟ್ಟರು. ಚಿತ್ರದ ಆ ಭಾಗವು ನನಗೆ ಅತ್ಯಂತ ಪ್ರಿಯವಾಗಿದೆ ಎಂದು ನಟಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com