ಶ್ರೀನಿಧಿ ಶೆಟ್ಟಿ
ಸಿನಿಮಾ ಸುದ್ದಿ
'ಕೆಜಿಎಫ್ 2'ಗೆ ಶ್ರೀನಿಧಿ ಶೆಟ್ಟಿ ಸಿದ್ಧ, ನಿಜವಾದ ಪರೀಕ್ಷೆ ಈಗ ಆರಂಭ!
ರಾಖಿ ಭಾಯ್ ಯಶ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಬುಹು ನಿರೀಕ್ಷಿತ 'ಕೆಜಿಎಫ್ 2'ಚಿತ್ರಕ್ಕೆ ನಾಯಕಿ ಶ್ರೀನಿಧಿ ಶೆಟ್ಟಿ ಅವರು...
ರಾಖಿ ಭಾಯ್ ಯಶ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಬುಹು ನಿರೀಕ್ಷಿತ 'ಕೆಜಿಎಫ್ 2'ಚಿತ್ರಕ್ಕೆ ನಾಯಕಿ ಶ್ರೀನಿಧಿ ಶೆಟ್ಟಿ ಅವರು ಸಿದ್ಧರಾಗಿದ್ದು, ಮೇ ಮೊದಲ ವಾರದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಕೆಜಿಎಫ್ 1ರಲ್ಲಿ ರೀನಾ ಪಾತ್ರದಲ್ಲಿ ಪರಿಚಿತರಾಗಿದ್ದ ಮಾಜಿ ಸುಪ್ರಾನ್ಯಾಷನಲ್ ಶ್ರೀನಿಧಿ ಶೆಟ್ಟಿ ಅವರು ಈಗ ಕೆಜಿಎಫ್ ಭಾಗ ಒಂದರ ಅಂತ್ಯದಿಂದ ನನ್ನ ಪಾತ್ರ ಶುರುವಾಗಲಿದ್ದು, ಎರಡನೇ ಭಾಗದಲ್ಲಿ ನನ್ನ ರೋಲ್ ದೊಡ್ಡದಿದೆ. ನಿಜವಾದ ಪರೀಕ್ಷೆ ಈಗ ಆರಂಭವಾಗಿದೆ ಎಂದು ಹೇಳಿದ್ದಾರೆ.
ನಾನು ಕೆಜಿಎಫ್ ಮೇಲೆ ಹೆಚ್ಚು ಗಮನ ಹರಿಸುವುದಕ್ಕಾಗಿ ಇತರೆ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಕೆಜಿಎಫ್ ನನಗೆ ತಂಬಾ ಮುಖ್ಯವಾದ ಚಿತ್ರ. ಇದಾದ ನಂತರ ಬೇರೆ ಚಿತ್ರಗಳ ಕಡೆ ಗಮನ ನೀಡುತ್ತೇನೆ ಎಂದು ಶ್ರೀನಿಧಿ ತಿಳಿಸಿದ್ದಾರೆ.
ಕನಿಷ್ಠ ನಾಲ್ಕು ಕನ್ನಡ, ಮೂರು ತೆಲುಗು ಹಾಗೂ ಮೂರು ತಮಿಳು ಚಿತ್ರಗಳಿಂದ ನನದೆ ಆಫರ್ ಬಂದಿತ್ತು. ಆದರೆ ಕೆಲವು ಚಿತ್ರಗಳ ಸ್ಕ್ರಿಪ್ಟ್ ಇಷ್ಟವಾಗಲಿಲ್ಲ. ಇನ್ನು ಕೆಲವು ಚಿತ್ರಗಳ ಡೇಟ್ ಹೊಂದಾಣಿಕೆಯಾಗಲಿಲ್ಲ. ಆದಾಗ್ಯೂ ನಾನು ಅಕ್ಟೋಬರ್ ನಂತರವೇ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳುವುದಾಗಿ ಅವರಿಗೆ ತಿಳಿಸಿದ್ದೇನೆ. ಕೆಜಿಎಫ್ 2 ಗಾಗಿ ಮಾಡಬೇಕಿರುವುದು ಬಹಳಷ್ಟು ಇದೆ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ