ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸುವ ಆಸೆ ಈಡೇರಿದೆ- ಐಶಾನಿ ಶೆಟ್ಟಿ
ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸಬೇಕೆಂದುಕೊಂಡಿದ್ದ ಐಶಾನಿ ಶೆಟ್ಟಿ ಆಸೆ 'ನಮ್ ಗಣಿ ಬಿ. ಕಾಂ. ಪಾಸ್ 'ಚಿತ್ರದ ಪಾತ್ರದ ಮೂಲಕ ಈಡೇರಿದೆ. ಈ ಚಿತ್ರದ ಮೂಲಕ ಹೊಸ ಗೆಟಪ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸಬೇಕೆಂದುಕೊಂಡಿದ್ದ ಐಶಾನಿ ಶೆಟ್ಟಿ ಆಸೆ 'ನಮ್ ಗಣಿ ಬಿ. ಕಾಂ. ಪಾಸ್ 'ಚಿತ್ರದ ಪಾತ್ರದ ಮೂಲಕ ಈಡೇರಿದೆ. ಈ ಚಿತ್ರದ ಮೂಲಕ ಹೊಸ ಗೆಟಪ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಶಾಲಾ ದಿನಗಳ ನೆನಪು ಖುಷಿಯ ಅನುಭವ ನೀಡುತ್ತಿದೆ ಎನ್ನುತ್ತಾರೆ.
ಅಭಿಷೇಕ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಅವರೇ ನಾಯಕರಾಗಿದ್ದಾರೆ. ಕಳೆದ ವಾರ ಚಿತ್ರೀಕರಣ ಮುಕ್ತಾಯಗೊಂಡಿದೆ. ಡಬ್ಬಿಂಗ್ ನಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ.
ಬೃಂದಾವನ ಎಂಟರ್ ಪ್ರೈಸಸ್ ಅಡಿಯಲ್ಲಿ ಮೂಡಿಬರುತ್ತಿರುವ ನಮ್ ಗಣಿ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ, ಜಹಂಗೀರ್ ಮತ್ತಿತರರ ತಾರಾಗಣವಿದೆ. ಸಂಗೀತ ನಿರ್ದೇಶಕ ವಿಕಾಸ್ ವಶಿಷ್ಠ ಅವರನ್ನು ಈ ಚಿತ್ರ ಪರಿಚಯಿಸಿದ್ದು, ನಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ.