ಸುಜಯ್ ಶಾಸ್ತ್ರೀ ಚೊಚ್ಚಲ ನಿರ್ದೇಶನದ ' ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ' ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಕವಿತಾ ಗೌಡ

ರಂಗಕರ್ಮಿ, ನಟ ಸುಜಯ್ ಶಾಸ್ತ್ರೀ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕರಾಗಿದ್ದಾರೆ. ರಾಜ್ ಬಿ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ.
ಕವಿತಾ ಗೌಡ, ರಾಜ್ ಬಿ ಶೆಟ್ಟಿ
ಕವಿತಾ ಗೌಡ, ರಾಜ್ ಬಿ ಶೆಟ್ಟಿ
Updated on

ರಂಗಕರ್ಮಿ, ನಟ ಸುಜಯ್ ಶಾಸ್ತ್ರೀ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕರಾಗಿದ್ದಾರೆ. ರಾಜ್ ಬಿ ಶೆಟ್ಟಿ  ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ.

ರಂಗಭೂಮಿಯಲ್ಲಿನ ಕೆಲಸ ಸಿನಿಮಾ ನಿರ್ದೇಶನದತ್ತ ತಳ್ಳಿದೆ. ಆದರೆ, ಚಿತ್ರ ನಿರ್ದೇಶನ ಕೆಲಸ ಹೆಚ್ಚು ಶ್ರಮ ಬೇಡುತ್ತದೆ ಎಂಬುದು ಅನಿಸುತ್ತಿದೆ. 1991ರಲ್ಲಿ ರಂಗಕರ್ಮಿಯಾಗಿ ವೃತ್ತಿ ಆರಂಭಿಸಿದ್ದೆ. ಈಗ ಚಿತ್ರ ನಿರ್ದೇಶನ ಮಾಡಿರುವುದರಿಂದ ಎಕ್ಸೈಟ್ ಆಗಿರುವುದಾಗಿ ಸುಜಯ್ ಹೇಳಿದರು.

ವೆಂಕಟ ಕೃಷ್ಣ ಗುಬ್ಬಿ ಹಾಗೂ ಪರ್ಪಲ್ ಪ್ರಿಯಾ ಪಾತ್ರದ ಮೂಲಕ  ರಾಜ್ ಬಿ ಶೆಟ್ಟಿ ಹಾಗೂ ಕವಿತಾ ಗೌಡ,  ಹಾಸ್ಯದೊಂದಿಗೆ ಈ ಚಿತ್ರ ರೋಮ್ಯಾಂಟಿಕ್ ಕಥಾ ಹಂದರವನ್ನು ಹೊಂದಿದೆ.
ರಾಜ್ ಸಾಪ್ಟ್ ವೇರ್ ಎಂಜಿನಿಯರ್ ಪಾತ್ರದಲ್ಲಿ ಅಭಿನಯಿಸಿದ್ದು, ಮದುವೆ ಆಗಲು ಉತ್ಸಾಹ ಹೊಂದಿರುತ್ತಾರೆ. ಅವರ ತಂದೆ ನಿವೃತ್ತಿ ಐಟಿ ನೌಕರ ಎಲ್ಲ ಹುಡುಗರಿಗೂ ಹುಡುಗಿಯನ್ನ ತೋರಿಸುತ್ತಾರೆ ಆದರೆ, ಅವರ ಮಗನಿಗೆ  ಹುಡುಗಿ ಹುಡುಕುವುದಕ್ಕೆ ಆಗಿರುವುದಿಲ್ಲ ಎಂದು ಸುಜಯ್ ಕಥೆಯನ್ನು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com