ಕುದುರೆಮುಖದ ಸುಂದರ ಪರಿಸರದಲ್ಲಿ 'ಕಾರ್ಮೋಡ ಸರಿದು' ಸಿನಿಮಾ ಚಿತ್ರೀಕರಣ

ಕಾರ್ಮೋಡ ಸರಿದು ಎಂಬ ಸಿನಿಮಾ ಮೂಲಕ ಉದಯ್ ಕುಮಾರ್ ಪಿಎಸ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾಗೂ ಕುದುರೆಮುಖಕ್ಕೂ ಬಿಡಿಸಲಾಗದ ನಂಟಿದೆ...
ಕಾರ್ಮೋಡ ಸರಿದು ಚಿತ್ರತಂಡ
ಕಾರ್ಮೋಡ ಸರಿದು ಚಿತ್ರತಂಡ
ಕಾರ್ಮೋಡ ಸರಿದು ಎಂಬ ಸಿನಿಮಾ ಮೂಲಕ ಉದಯ್ ಕುಮಾರ್  ಪಿಎಸ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾಗೂ ಕುದುರೆಮುಖಕ್ಕೂ ಬಿಡಿಸಲಾಗದ ನಂಟಿದೆ.
ಮಂಜು ರಾಮಣ್ಣ ಮತ್ತು ನಾನು ಕುದುರೆ ಮುಖದಲ್ಲೇ ಹುಟ್ಟಿ ಬೆಳೆದದ್ದದು, ಹುಡುಗನೊಬ್ಬನ ಬದುಕಿನಲ್ಲಿ ಕಾರ್ಮೋಡ ಕವಿದಾಗ ಅದನ್ನು ಹೇಗೆ ತಿಳಿಗೊಳಿಸುತ್ತಾನೆ ಎನ್ನುವುದೇ ಸಿನಿಮಾ ಕಥೆ ಎಂದು ನಿರ್ದೇಶಕ ಉದಯ್‌ ಕುಮಾರ್‌ ಹೇಳಿದ್ದಾರೆ. 
'ಹದಿನೆಂಟು ವರ್ಷಗಳ ಕೆಳಗೆ ನಾನು ಕುದುರೆಮುಖ ಬೆಟ್ಟಕ್ಕೆ ಹೋಗಿದ್ದೆ. ಅಲ್ಲಿನ ವಾತಾವರಣ ಕಂಡು ಇಲ್ಲೊಂದು ಸಿನಿಮಾ ಮಾಡಬೇಕು ಅನಿಸಿತು. ಆ ಪರಿಸರಕ್ಕೆ ಹೊಂದುವಂಥ ಕಥೆ ಹೆಣೆಬೇಕು ಎಂಬ ಉತ್ಸಾಹ ಬಂತು. ತುಂಬಾ ವರ್ಷಗಳ ನಂತರ ಕಾರ್ಮೋಡ ಸರಿದಾಗ ಕಥೆ ಸಿಕ್ಕಿತು. ನನ್ನ ಮೊದಲ ಚಿತ್ರಕ್ಕೆ ಇಂಥದ್ದೊಂದು ಕಥೆ ಸಿಕ್ಕಿದ್ದು, ಖುಷಿ ಕೊಟ್ಟಿದೆ' ಎಂದು ನಿರ್ದೇಶಕ ಹೇಳಿದ್ದಾರೆ.. 
ಈ ಸಿನಿಮಾಗೆ ಅದ್ವಿತಿ ನಾಯಕಿ. ಮಲೆನಾಡಿನಲ್ಲಿ ವೈದ್ಯಯಾಗಿ ಸೇವೆ ಸಲ್ಲಿಸುವ ಪಾತ್ರದಲ್ಲಿ ಇವರು ನಟಿಸಿದ್ದಾರೆ. 
ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾದ ಎಲ್ಲಾ ಹಾಡುಗಳು ನನಗೆ ಇಷ್ಟ. ಅದರಲ್ಲೂ 'ಕಾರ್ಮೋಡ ಸರಿದು..' ಹಾಡು ನನ್ನ ಸದಾ ಕಾಲದ ಫೇವರಿಟ್ ಹಾಡು. ಇದೀಗ ಅದೇ ಹಾಡಿನ ಶೀರ್ಷಿಕೆಯ ಸಿನಿಮಾದಲ್ಲಿ ನಟಿಸುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ" ಎಂದಿದ್ದಾರೆ. 
"ಕುದುರೆಮುಖ ಸೇರಿದಂತೆ ಮಲೆನಾಡ ಹಲವು ಕಡೆ ಸಿನಿಮಾದ ಬಹುತೇಕ ಚಿತ್ರೀಕರಣವಾಗಿದೆ. ಇನ್ನೂ ಈ ಚಿತ್ರದಲ್ಲಿ ಮಳೆಯೂ ಪ್ರಧಾನವಾಗಿದ್ದು, ಆಗಸ್ಟ್ ತಿಂಗಳ ಮಲೆನಾಡಿನ ಭಾರಿ ಮಳೆಯಲ್ಲಿಯೇ ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com