'ಹೊಸಬರ ಪ್ರಯೋಗಾತ್ಮಕ ಸಿನಿಮಾ ರಮೇಶ್-ಸುರೇಶ್' 

ನಾಗರಾಜ್ ನಿರ್ದೇಶನವಿದ್ದು, ಇದೊಂದು ಹಾಸ್ಯ ಮತ್ತು ಥ್ರಿಲ್ಲರ್ ಸಿನಿಮಾವಾಗಿದೆ, ಜೊತೆಗೆ ಸಾಮಾಜಿಕ ಮಾಧ್ಯಮದ ಕಥೆಯೂ ಇದೆ,  ಬೆನಕ್ ಗುಬ್ಬಿ ವೀರಣ್ಣ ಮತ್ತು ಯಶುಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಕಿಶೋರ್ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
'ಹೊಸಬರ ಪ್ರಯೋಗಾತ್ಮಕ ಸಿನಿಮಾ ರಮೇಶ್-ಸುರೇಶ್' 
Updated on

ಕಿಶೋರ್ ಮತ್ತು ಸಾಧು ಕೋಕಿಲಾ  ಹೊರತು ಪಡಿಸಿ, ರಮೇಶ್-ಸುರೇಶ್ ಸಿನಿಮಾದಲ್ಲಿ ಬಹುತೇಕ ಹೊಸಬರೇ ಇದ್ದಾರೆ, ನಿರ್ದೇಶಕ ನಟರು ಹಾಗೂ ತಂತ್ರಜ್ಞರೆಲ್ಲಾ ಹೊಸಬರೇ ಆಗಿದ್ದಾರೆ.

ನಾಗರಾಜ್ ನಿರ್ದೇಶನವಿದ್ದು, ಇದೊಂದು ಹಾಸ್ಯ ಮತ್ತು ಥ್ರಿಲ್ಲರ್ ಸಿನಿಮಾವಾಗಿದೆ, ಜೊತೆಗೆ ಸಾಮಾಜಿಕ ಮಾಧ್ಯಮದ ಕಥೆಯೂ ಇದೆ,  ಬೆನಕ್ ಗುಬ್ಬಿ ವೀರಣ್ಣ ಮತ್ತು ಯಶುಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಕಿಶೋರ್ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ಚಂದನ ಸೇಗು ನಾಯಕಿಯಾಗಿ ನಟಿಸಿದ್ದಾರೆ, ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಚಂದನ ಸೇಗು ಈ ಸಿನಿಮಾ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.

ರಮೇಶ್ ಸುರೇಶ್ ಸಿನಿಮಾಗೆ ನವನೀತ್ ಸಂಗೀತ ನೀಡಿದ್ದಾರೆ,ವಿಶ್ವಜೀತ್ ರಾವ್ ನೃತ್ಯ ನಿರ್ದೇಶನ ಮಾಡಿದ್ದಾರೆ,ಪಿ.ಕೃಷ್ಣ ಮತ್ತು ಬಿ.ಶಂಕರ್  ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ, ಆರ್ ಕೆ ಟಾಕೀಸ್ ಅಡಿಯಲ್ಲಿ ಆಗಸ್ಟ್ 15 ರಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

ಹೊನ್ನಾವರ,  ತುಮಕೂರು, ಮತ್ತು ಬೆಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com