'ರಾಮಾರ್ಜುನ' ಟ್ರೇಲರ್ ರಿಲೀಸ್: ಡಿಸೆಂಬರ್ ಗೆ ತೆರೆಗೆ ಬರಲು ಸಜ್ಜು

ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವ ಅನೀಶ್ ತೇಜೇಶ್ವರ್ ಅವರ ಮೊದಲ ನಿರ್ದೇಶನ ಹಾಗೂ ನಿರ್ಮಾಣದ ಚಿತ್ರ “ರಾಮಾರ್ಜುನ” ಟ್ರೇಲರ್ ಬಿಡುಗಡೆಯಾಗಿದೆ...
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್
Updated on

ಬೆಂಗಳೂರು: ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವ ಅನೀಶ್ ತೇಜೇಶ್ವರ್ ಅವರ ಮೊದಲ ನಿರ್ದೇಶನ ಹಾಗೂ ನಿರ್ಮಾಣದ ಚಿತ್ರ “ರಾಮಾರ್ಜುನ” ಟ್ರೇಲರ್ ಬಿಡುಗಡೆಯಾಗಿದೆ. ಶೇ. 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಡಿಸೆಂಬರ್ ಗೆ ತೆರೆಗೆ ಬರಲು ಸಿದ್ಧವಾಗಿದೆ
  
“ನಿರ್ದೇಶನ ಮಾಡುವ ಬಗ್ಗೆ ಈ ಹಿಂದೆ ಕನಸು ಕಂಡಿರಲಿಲ್ಲ. ಚಿತ್ರಗಳಲ್ಲಿ ನಟಿಸುವಾಗ ಎಲ್ಲಾ ವಿಭಾಗಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಹೀಗಾಗಿ “ರಾಮಾರ್ಜುನ” ಚಿತ್ರದ ನಿರ್ದೇಶನ ಸುಲಭವಾಯಿತು. ನನ್ನ ಎಲ್ಲಾ ನಿರ್ದೇಶಕರಿಗೆ ಈ ಚಿತ್ರವನ್ನು ಅರ್ಪಿಸುವೆ” ಎಂದು ಅನೀಶ್ ತೇಜೇಶ್ವರ ಹೇಳಿದ್ದಾರೆ.
  
“ವಿಮೆ ಕ್ಲೈಮ್ ಮಾಡುವ ಕೆಲಸ ನಾಯಕನದ್ದು. ಅವನ ಎರಿಯಾದಲ್ಲೇ ಮಾಸ್ ಮಾರ್ಡರ್ ಆದಾಗ ಎನ್ ಮಾಡುತ್ತಾನೆ ಎಂಬುದು ಚಿತ್ರದ ತಿರುಳು. ಹಾಡು ಮತ್ತು ಹೊಡೆದಾಟದ ದೃಶ್ಯಗಳ ಚಿತ್ರೀಕರಣ ಬಾಕಿಯಿದ್ದು, ಡಿಸೆಂಬರ್ ನಲ್ಲಿ ತೆರೆಗೆ ತರುವ ಪ್ಲ್ಯಾನ್ ಇದೆ  ನಾಯಕನ ಕ್ಯಾರೆಕ್ಟರ್ ನಲ್ಲಿ ಆಗುವ ಬದಲಾವಣೆ ಚಿತ್ರದ ಶೀರ್ಷಿಕೆಗೆ ಹೊಂದಾಣಿಕೆಯಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
  
“ಇದು ನನ್ನ 2ನೇ ಚಿತ್ರ. ಈ ಹಿಂದೆ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದೆ. ರಾಮಾರ್ಜುನ ಚಿತ್ರದ ಪಾತ್ರದಲ್ಲಿ ಹೊಸತನವಿದ್ದು ಖುಷಿ ಕೊಡುತ್ತದೆ ಎಂದು ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ಹೇಳಿದ್ದಾರೆ.
 
ಈ ಚಿತ್ರದಲ್ಲಿ ನಟ ಹರೀಶ್ ರಾಜ್, ವೈದ್ಯನ ಪಾತ್ರದಲ್ಲಿ ಅಭಿನಯಿಸಿದ್ದು, “ಚಿತ್ರತಂಡ ತುಂಬಾ ಶ್ರಮ ಹಾಕಿ ಸಿನಿಮಾ ಮಾಡಿದ್ದಾರೆ. ಕನ್ನಡಿಗರು ಈ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  
ಶರತ್ ಲೋಹಿತಾಶ್ವ, “ಟೀಸರ್ ತುಂಬಾ ಚನ್ನಾಗಿ ಬಂದಿದೆ. ಎಷ್ಟೇ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಪ್ರತಿ ಚಿತ್ರವೂ ಹೊಸದೆನಿಸುತ್ತದೆ. ನಾಯಕ ನಟ ಅನೀಶ್ ಜೊತೆ ನನಗಿದು 2ನೇ  ಸಿನಿಮಾ ಆತನ ಗಾಡ್ ಫಾದರ್ ಪಾತ್ರ ಅದು ಒಳ್ಳೆ ಪಾತ್ರವಾ ಕೆಟ್ಟ ಪಾತ್ರವಾ ಎನ್ನುವುದನ್ನು ಸಿನಿಮಾ ದಲ್ಲಿ ನೋಡಿ” ಎಂದರು
 
ಬಾಲ್ ರಾಜ್ವಾಡಿ, ಶಿವಾನಂದ ಸಿಂಧಗಿ, ಲೋಕೇಶ್ ಮೊದಲಾದವರು ತಾರಾಗಣದಲ್ಲಿದ್ದಾರೆ ವಿಕ್ರಮ ಮೋರ್ ಸಾಹಸ, ಆನಂದ ರಾಜವಿಕ್ರಮ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com