ಆನ್-ಸ್ಕ್ರೀನ್ ಕಿಸ್ಸಿಂಗ್ ಗಾಗಿ ಬ್ರ್ಯಾಂಡ್ ಆಗಲ್ಲ ಎಂಬ ವಿಶ್ವಾಸವಿದೆ: ಕೀರ್ತಿ ಕಲ್ಕೇರಿ

ಆನ್-ಸ್ಕ್ರೀನ್ ಕಿಸ್ಸಿಂಗ್ ದೃಶ್ಯಗಳು ಕನ್ನಡದಲ್ಲಿ ನಿಧಾನವಾಗಿ ರೂಡಿಯಾಗುತ್ತಿದೆ ಎಂದು ಭಾಸವಾಗುತ್ತಿದೆ.ನಟ-ನಟಿಯರು ಕಥೆಯ ಅವಿಭಾಜ್ಯ ಅಂಗವಾಗಿದ್ದಾಗ ಅಂತಹಾ ದೃಶ್ಯಗಳಲ್ಲಿ ಕಾಣಿಸಿಕೊಳ್ಲಲು ಸಮ್ಮತಿಸುತ್ತಿದ್ದಾರೆ.
ಕೀರ್ತಿ ಕಲ್ಕೆರಿ
ಕೀರ್ತಿ ಕಲ್ಕೆರಿ
Updated on

ಆನ್-ಸ್ಕ್ರೀನ್ ಕಿಸ್ಸಿಂಗ್ ದೃಶ್ಯಗಳು ಕನ್ನಡದಲ್ಲಿ ನಿಧಾನವಾಗಿ ರೂಡಿಯಾಗುತ್ತಿದೆ ಎಂದು ಭಾಸವಾಗುತ್ತಿದೆ.ನಟ-ನಟಿಯರು ಕಥೆಯ ಅವಿಭಾಜ್ಯ ಅಂಗವಾಗಿದ್ದಾಗ ಅಂತಹಾ ದೃಶ್ಯಗಳಲ್ಲಿ ಕಾಣಿಸಿಕೊಳ್ಲಲು ಸಮ್ಮತಿಸುತ್ತಿದ್ದಾರೆ.

ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್, ಕೀರ್ತಿ ಕಲ್ಕೇರಿ ನಟಿಸಿರುವ "ಪ್ರಾರಂಭ" ಚಿತ್ರದ ಟೀಸರ್ ಶುಕ್ರವಾರ ರಿಲೀಸ್ ಆಗಿದ್ದು ಇದರಲ್ಲಿ ನಾಯಕ-ನಾಯಕಿಯ ಲಿಪ್ ಲಾಕ್ ದೃಶ್ಯವಿರುವುದು ಸುದ್ದಿಗೆ ಗ್ರಾಸವಾಗಿದೆ. 

ಕೀರ್ತಿ ಪಾಲಿಗೆ ಇದು ಚೊಚ್ಚಲ ಚಿತ್ರವಾಗಿದ್ದು ಪ್ರಥಮ ಚಿತ್ರದಲ್ಲಿ ನಟಿಯ ಅಭಿನಯ ನೋಡಲು ಸಿನಿ ಪ್ರೇಕ್ಷಕರು, ಚಿತ್ರಪ್ರೇಮಿಗಳು ಕಾತುರರಾಗಿದ್ದರು. ಇದೀಗ ನವನಟಿ ತಾವು ಲಿಪ್ ಲಾಕ್ ದೃಶ್ಯವನ್ನು ಸಮರ್ಥಿಸಿಕೊಂಡದ್ದಲ್ಲದೆ ತಮ್ಮ ಒಪ್ಪಿಗೆಯಿಂದಲೇ ಅದನ್ನು ಚಿತ್ರೀಕರಿಸಿದ್ದಾಗಿ ಹೇಳಿದ್ದಾರೆ.

 “ನಿರ್ದೇಶಕರು ಚಿತ್ರಕಥೆಯನ್ನು ಹೇಳಿದಾಗ  ಚುಂಬನದ ದೃಶ್ಯದ ಬಗ್ಗೆ ನನಗೆ ತಿಳಿಸಲಾಯಿತು. ನಾನು ಇದನ್ನು ನನ್ನ ಹೆತ್ತವರೊಂದಿಗೆ ಚರ್ಚಿಸಿದೆ, ಮತ್ತು ಅವರ ಅನುಮತಿಯನ್ನು ಸಹ ಪಡೆದುಕೊಂಡು ಮುಂದುವರಿದಿದ್ದೇನೆ" ಕೀರ್ತಿ ಹೇಳಿದರು, ಸಂಬಂಧದ ಆಳವನ್ನು ವ್ಯಕ್ತಪಡಿಸಲು ನಿರ್ದಿಷ್ಟ ದೃಶ್ಯವು ಅವಶ್ಯಕವಾಗಿದೆ ಮತ್ತು ಅದನ್ನು ನಿರ್ದೇಶಕ ಮನು ಕಲ್ಯಾಡಿ ಅವರು ಕಲಾತ್ಮಕವಾಗಿ ಚಿತ್ರೀಕರಿಸಿದ್ದಾರೆ ಎಂದು ಆಕೆ ನುಡಿದರು.

ಕಿಸ್ಸಿಂಗ್ ಶಾಟ್ ಗಾಗಿ ನನ್ನನ್ನು ಲೇಬಲ್ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೀರ್ತಿ ಮುಂದಿನ ಚಿತ್ರಕ್ಕಾಗಿ ನನ್ನತ್ತ ಬರುವ ನಿರ್ಮಾಪಕರು ಇದನ್ನು ಮುಂದಾಗಿ ಚಿರ್ಚಿಸುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

“ನಾನು ವಿವಿಧ ನಿರ್ಮಾಪಕರಿಂದ ಕಥೆ ಕೇಳುತ್ತಿದ್ದೇನೆ. ಯಾವುದೇ ಚಲನಚಿತ್ರ ನಿರ್ಮಾಪಕರು ಕಿಸ್ಸಿಂಗ್ ದೃಶ್ಯವನ್ನು ಕಡ್ಡಾಯ ಮಾಡಿಲ್ಲ.ನಿರ್ದೇಶಕರಾಗಿ, ಅವರು ಪಾತ್ರದ ಡಿಕೆಯಂತೆ ಹೋಗಲು ಬಯಸುತ್ತಾರೆ, "ಎಂದು ಅವರು ಹೇಳಿದರು. "ಪ್ರಾರಂಭ" ಒಂದು ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು ಇದರಲ್ಲಿ ಮನೋರಂಜನ್ ಮೊದಲ ಬಾರಿಗೆ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com