ದರ್ಶನ್
ಸಿನಿಮಾ ಸುದ್ದಿ
ಕಿರುತೆರೆ ನಿರೂಪಕನಾಗಿ ದರ್ಶನ್: 'ಡಿ ಬಾಸ್' ಹೇಳಿದ್ದೇನು ಗೊತ್ತೆ?
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಸ್ವತಃ ದರ್ಶನ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಸ್ವತಃ ದರ್ಶನ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಎರಡು ವೇದಿಕೆಯಲ್ಲಿ ನನಗೆ ಕೆಲಸ ಮಾಡಲು ಆಗದು, ದೊಡ್ಡ ಪರದೆಯ ಮೇಲೆ ಅಂದರೆ ಸಿನಿಮಾದಲ್ಲಿ ನಾನು ಕೆಲಸವನ್ನು ಎಂಜಾಯ್ ಮಾಡುತ್ತಿದ್ದೇನೆ, ಕಿರುತೆರೆಯಲ್ಲಿ ನಿರೂಪಕನಾಗುವುದನ್ನು ನಾನು ಯೋಚಿಸಲು ಸಾಧ್ಯವಿಲ್ಲ ಎಂದು ಖಚಿತ ಪಡಿಸಿದ್ದಾರೆ.
ಈ ಮೂಲಕ ದರ್ಶನ್ ಕಿರುತೆರೆಗೆ ಬರುತ್ತಾರೆ ಎಂಬ ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ. ಸದ್ಯ ದರ್ಶನ್ ಕೈ ತುಂಬಾ ಸಿನಿಮಾಗಳಿವೆ, ಡಿಸೆಂಬರ್ 12 ರಂದು ಒಡೆಯ ಸಿನಿಮಾ ರಿಲೀಸ್ ಆಗುತ್ತಿದೆ, ಪೊರ್ಕಿ, ಬುಲ್ ಬುಲ್ ನಂತರ ಎಂಡಿ ಶ್ರೀಧರ್, ದರ್ಶನ್ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ