ಯಶ್ ಮತ್ತು ರಾಧಿಕಾ ಪಂಡಿತ್
ಸಿನಿಮಾ ಸುದ್ದಿ
'ಕೇವಲ ಮೂರು ವರ್ಷಗಳ ಮದುವೆಯಲ್ಲ, ಇದು ಸಂಬಂಧವನ್ನು ನಿರ್ಮಿಸಿದ ಹಲವು ವರ್ಷಗಳು'
ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯಾಗಿ ಇಂದಿಗೆ ಮೂರು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಧಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯಶ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ಬೆಂಗಳೂರು: ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯಾಗಿ ಇಂದಿಗೆ ಮೂರು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಧಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯಶ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ನಮಗೆ ನೆನಪಿಸಲು ನಾನು ಹಳೆ ಫೋಟೋವನ್ನು ಹಂಚಿಕೊಂಡಿದ್ದೇನೆ. ಫೋಟೋ ಕ್ಲಾರಿಟಿಗಾಗಿ ಕ್ಷಮೆ ಇರಲಿ. ಇದು ಕೇವಲ ಮೂರು ವರ್ಷಗಳ ಮದುವೆಯಲ್ಲ, ಆದರೆ ಇದು ಸಂಬಂಧವನ್ನು ನಿರ್ಮಿಸಿದ ಹಲವು ವರ್ಷಗಳು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.
ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ