2019 ನನ್ನ ಪಾಲಿಗೆ ವಿಶೇಷ ವರ್ಷವಾಗಿತ್ತು: ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ನ ಅಕ್ಷರಶಃ ವಿವಿಧ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಆದರೆ ತಾನೆಷ್ಟು ಜಾಗಗಳಿಗೆ ತೆರಳಿದ್ದೆ ಆಕೆಗೆ ನೆನಪಿಲ್ಲ ಅದಾಗ್ಯ್ ರಶ್ಮಿಕಾ  ಕಳೆದ 7-8 ವಾರಗಳಲ್ಲಿ ಅವಳು ಸುಮಾರು 20  ಬಾರಿ ವಿಮಾನಯಾನ ಕೈಗೊಂಡಿದ್ದಾರೆ. ಆಕೆ ಈಗ ಬಹುಭಾಷಾ ನಟಿಯಾಗಿರುವ ಕಾರಣ ಕೈತುಂಬಾ ಕೆಲಸಗಳಿದೆ. 
ರಶ್ಮಿಕಾ ಮಂದಣ್ನ
ರಶ್ಮಿಕಾ ಮಂದಣ್ನ
Updated on

ರಶ್ಮಿಕಾ ಮಂದಣ್ನ ಅಕ್ಷರಶಃ ವಿವಿಧ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಆದರೆ ತಾನೆಷ್ಟು ಜಾಗಗಳಿಗೆ ತೆರಳಿದ್ದೆ ಆಕೆಗೆ ನೆನಪಿಲ್ಲ ಅದಾಗ್ಯ್ ರಶ್ಮಿಕಾ  ಕಳೆದ 7-8 ವಾರಗಳಲ್ಲಿ ಅವಳು ಸುಮಾರು 20  ಬಾರಿ ವಿಮಾನಯಾನ ಕೈಗೊಂಡಿದ್ದಾರೆ. ಆಕೆ ಈಗ ಬಹುಭಾಷಾ ನಟಿಯಾಗಿರುವ ಕಾರಣ ಕೈತುಂಬಾ ಕೆಲಸಗಳಿದೆ. ರಶ್ಮಿಕಾ  ಏಕಕಾಲದಲ್ಲಿ ಕನಿಷ್ಠ ನಾಲ್ಕು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಎರಡು ತೆಲುಗು ಚಲನಚಿತ್ರಗಳು, ಒಂದು ತಮಿಳು, ಒಂದು ಕನ್ನಡ ಚಿತ್ರ. ಧ್ರುವ ಸರ್ಜಾ ನಾಯಕನಟನಾಗಿರುವ "ಪೊಗರು" ಚಿತ್ರದ ಮೈಸೂರಿನ ಭಾಗದ ಚಿತ್ರೀಕರಣವನ್ನು ನಟಿ ಇದೀಗ ಮುಗಿಸಿದ್ದಾರೆ.

"ಕಿರಿಕ್ ಪಾರ್ಟಿ" ನಟಿ ರಶ್ಮಿಕಾ ಈ ವರ್ಷ ತಾನೆಷ್ಟು ಬ್ಯುಸಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ, ಆದರೆ ಈ ಬಗ್ಗೆ ಅವರಿಗೆ ಯಾವ ನೋವು, ವಿಷಾದಗಳಿಲ್ಲ. "ಪೊಗರು" ಚಿತ್ರದ ಬಗ್ಗೆ ಕೇಳಿದಾಗ "ತಾನು ಅದರಲ್ಲಿ ಉಪನ್ಯಾಸಕಿಯಾಗಿ ಕಾಣಿಸಿಕೊಂಡಿದ್ದು ಇದು ನನ್ನ ಅತ್ಯಂತ ಹೆಚ್ಚಿನ ಮುತುವರ್ಜಿಯನ್ನು ಹೊಂದಿರುವ ಪಾತ್ರವಾಗಿದೆ" ಎಂದರು.

ಮಹೇಶ್ ಬಾಬು ನಾಯಕನಾಗಿರುವ ತೆಲುಗು ಚಿತ್ರ "ಸರಿಲೇರು ನೀಕೆವ್ವಾಲು"ಸಾಂಗ್ ಶೂಟಿಂಗ್ ಗಾಗಿ ಆಕೆ ಇದೀಗ ಹೈದರಾಬಾದ್‌ಗೆ ಹೋಗುತ್ತಿದ್ದಾರೆ.ಚಂದಾ ಚಂದಾ ಹಾಡಿಗೆ ಪುನೀತ್ ರಾಜ್‌ಕುಮಾರ್ ಅವರೊಂದಿಗೆ 2017 ರ ಚಿತ್ರ ಅಂಜನಿ ಪುತ್ರದಲ್ಲಿ  ಸ್ಟೆಪ್ಸ್ ಹಾಕಿದ್ದ ರಶ್ಮಿಕಾಗೆ ಈ ಬಗ್ಗೆ ಕೇಳಿದಾಗ "ಹೌದು, ಇದು ಸ್ವಪ್ರಯತ್ನ, [ಪ್ರಮಾಣದ ದೃಷ್ಟಿಯಿಂದ ದಿಡ್ದದಿದೆ.ಮತ್ತು ಇದು ಸಂಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರವಾಗಿದೆ" ಎಂದರು. ಹಿರಿಯ ನಟ ಮಹೇಶ್ ಬಾಬು ಅವರೊಡನೆ ಜತೆಯಾಗಿರುವುದು, ತೆರೆ ಮೇಲೆ ಜತೆಯಾಗಿ ಕಾಣಿಸಿಕೊಳ್ಳುವ ಬಗ್ಗೆ ರಶ್ಮಿಕಾಗೆ ಸ್ವಲ್ಪ ಆತಂಕವಿದೆ. "ಅವರ ಡ್ಯಾನ್ಸಿಂಗ್ ಕೆಪಾಸಿಟಿಗೆ ಯ್ತಾನೆಷ್ಟು ಹೊಂದಿಕೊಳ್ಳಬಹುದೆಂದು ನನಗೆ ಗೊತ್ತಿಲ್ಲ.ಆದರೆ ನನ್ನ ಕಡೆಯಿಂದ ನಾನು ಶಕ್ತಿಮೀರಿ ಪ್ರಯತ್ನಿಸಲಿದ್ದೇನೆ"

ನಿತಿನ್ ಅಭಿನಯದ ಮತ್ತೊಂದು ತೆಲುಗು ಚಿತ್ರ "ಭೀಷ್ಮ"ದಲ್ಲಿ ಸಹ ರಶ್ಮಿಕಾ ಅಭಿನಯಿಸುತ್ತಿದ್ದಾರೆ.. ಈ ಚಿತ್ರದಲ್ಲಿ ಕನ್ನಡ ನಟ ಅನಂತ್ ನಾಗ್ ಕೂಡ ಇದ್ದು "ನಾನು ಮೊದಲೇ ಶೆಡ್ಯೂಲ್ ನಲ್ಲಿ ಅವರನ್ನು ಕಂಡು ಕೆಲ ಸಮಯ ಅವರೊಡನೆ ಮಾತನಾಡಿದ್ದೇನೆ. ವಾಸ್ತವವಾಗಿ, ನಾನು ಅನಂತ್ ನಾಗ್ ಜತೆಗೆ ನಟಿಸುತ್ತಿರುವುದು ಇದು ಮೊದಲು. ಅಂತಹ ಪ್ರತಿಭಾವಂತ ನಟನೊಂದಿಗೆ ಕೆಲಸ ಮಾಡಲು ನಾನು ಹೆಮ್ಮೆ ಪಡುತ್ತೇನೆ" ನಟಿ ಹೇಳಿದ್ದಾರೆ.

ರೆಮೋ ನಿರ್ದೇಶಕ ಬಕ್ಕಿಯರಾಜ್ ಕಣ್ಣನ್ ಅವರ ತಮಿಳು ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದು ಚಿತ್ರದ ಬಗ್ಗೆ ಹೆಚ್ಚೇನು ಮಾತನಾಡಲು ಇನ್ನೂ ಸಮಯವಿದೆ ಎಂದರು. ಆದರೆ ತಾನು ಅಭಿನಯಿಸುತ್ತಿರುವ ನಾಲ್ಕು ಚಿತ್ರಗಳಲ್ಲಿಯೂ ತನಗೆ ಅತ್ಯಂತ ಮಹತ್ವದ ಪಾತ್ರ ನೀಡಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿರುವ ಕಾರಣ  2020 ರ ಜನವರಿಯಲ್ಲಿ ಫ್ಲೋರ್ ಗೆ ಹೋಗಲು ಸಿದ್ದವಾಗಿರುವ ಅಲ್ಲು ಅರ್ಜುನ್ ಅವರೊಂದಿಗಿನ ದೊಡ್ಡ ತೆಲುಗು ಚಿತ್ರಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. "ಈ ವರ್ಷ ನಾನು ಬಹಳವೇ ಕೆಲಸದಲ್ಲಿ ತೊಡಗಿಸಿಕೊಳ್ಳುವವಳಿದ್ದೇನೆ. " ಎನ್ನುವ ನಟಿ ಮುಂದಿನ ವರ್ಷ ಬಾಲಿವುಡ್ ಪ್ರವೇಶಕ್ಕೆಸಹ ಸಿದ್ದವಾಗುತ್ತಿದ್ದಾರೆ. ಆಕೆ ಅವಳು ನಾನಿ ಚಿತ್ರ ಜರ್ಸಿಯ ಹಿಂದಿ ರಿಮೇಕ್‌ನ ಭಾಗವಾಗಿದ್ದಾರೆ ಎಂಬ ವರದಿಗಳಿದೆ. ಆದರೆ ರಶ್ಮಿಕಾ ಮಾತ್ರ ಇದನ್ನಿನ್ನೂ ಖಚಿತಪಡಿಸಿಲ್ಲ.. “ಚಿತ್ರ ಎಷ್ಟು ದೊಡ್ಡದಾಗಿದೆ ಎಂಬುದು ಮುಖ್ಯವಲ್ಲ. ನನ್ನ ಅಭಿಮಾನಿಗಳ ನಿರೀಕ್ಷೆಗಳು ನನಗೆ ಮುಖ್ಯ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com