ಇಂಡಿಯಾ ವರ್ಸಸ್ ಇಂಗ್ಲೆಂಡ್' ಮೂಲಕ ವಿತರಣೆ ಕ್ಷೇತ್ರಕ್ಕೆ ಕಾಲಿಟ್ಟ ನಾಗತಿಹಳ್ಳಿ ಚಂದ್ರಶೇಖರ್

ಲೇಖಕ, ನಿರ್ದೇಶಕ, ನಿರ್ಮಾಪಕರೂ ಆಗಿದ್ದಲ್ಲದೆ ಕೆಲ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ನಟನೆಯಲ್ಲಿಯೂ ಸೈ ಎನ್ನಿಸಿಕೊಂಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ಈಗ ಚಿತ್ರದ ವಿತರಣೆ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರ "ಇಂಡಿಯಾ ವರ್ಸಸ್ ಇಂಗ್ಲೆಂಡ್" ಜನವರಿ 24, 2020 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು ಸೆನ್ಸಾರ್ ಬೋರ್ಡ್ ಪ್ರಮಾಣಪತ್ರವನ್ನು ಪಡೆದ
ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದ ದೃಶ್ಯ
ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದ ದೃಶ್ಯ
Updated on

ಲೇಖಕ, ನಿರ್ದೇಶಕ, ನಿರ್ಮಾಪಕರೂ ಆಗಿದ್ದಲ್ಲದೆ ಕೆಲ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ನಟನೆಯಲ್ಲಿಯೂ ಸೈ ಎನ್ನಿಸಿಕೊಂಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ಈಗ ಚಿತ್ರದ ವಿತರಣೆ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರ "ಇಂಡಿಯಾ ವರ್ಸಸ್ ಇಂಗ್ಲೆಂಡ್" ಜನವರಿ 24, 2020 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು ಸೆನ್ಸಾರ್ ಬೋರ್ಡ್ ಪ್ರಮಾಣಪತ್ರವನ್ನು ಪಡೆದ ನಂತರ ತಯಾರಕರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ. ವಿಶೇಷವೆಂದರೆ ಈ ಚಿತ್ರದ ವಿತರಣೆಯನ್ನು ಸಹ ಅವರೇ ನೋಡಿಕೊಳ್ಳುವುದಾಗಿ ನಾಗತಿಹಳ್ಳಿ ತೀರ್ಮಾನಿಸಿದ್ದಾರೆ.

ಚಿತ್ರದ ವಿತರಣೆ  ಮತ್ತೊಂದು ಸೃಜನಶೀಲ ವಿಭಾಗವಾಗಿದೆ, ಇದು ಕೇವಲ ವ್ಯವಹಾರಕ್ಕಾಗಿ ಮಾತ್ರವಲ್ಲ, ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯಾದರೂ ಮಾಡಬೇಕೆಂದುಕೊಂಡಿದ್ದ ಕೆಲಸವಾಗಿತ್ತು ಎಂದು ನಿರ್ದೇಶಕರು ಹೇಳಿದ್ದಾರೆ.“ನನ್ನ ವೃತ್ತಿಜೀವನದ ಈ ಹಂತದಲ್ಲಿ, ನಾನು ಯಾವುದೇ ಡಿಸ್ಟ್ರಿಬ್ಯೂಷನ್ ಆಫೀಸ್ ಮುಂದೆ ಹೋಗಿ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ಇದು ನನ್ನ ಸಾಮರ್ಥ್ಯವನ್ನು ಅನ್ವೇಷಿಸಲು ಸಹ ಅನುಮತಿಸುತ್ತದೆ. ಅದೃಷ್ಟವಶಾತ್ ನಿರ್ಮಾಪಕ ಮತ್ತು ರಾಜಶ್ರೀ ಪಿಕ್ಚರ್ಸ್ (ಮೈನೆ ಪ್ಯಾರ್ ಕಿಯಾ ಮತ್ತು ಹಮ್ ಆಪ್ಕೆ ಹೈ ಕೌನ್ ನಂತಹ ಚಲನಚಿತ್ರಗಳನ್ನು ನಿರ್ಮಿಸಿದವರು) ಸಹ ಇದಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಅವರು ಮುಂಬೈನಲ್ಲಿ ನನಗೆ ಸಹಾಯ ಮಾಡುತ್ತಿದ್ದಾರೆ, ಮತ್ತು ನಾನು ಬೆಂಗಳೂರಿನ ವಿತರಣೆಯನ್ನು ನೋಡಿಕೊಳ್ಳುತ್ತಿದ್ದೇನೆ ”

"ಇಂಡಿಯಾ ವರ್ಸಸ್ ಇಂಗ್ಲೆಂಡ್"ವಿಶ್ವದಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. "ಇದಾಗಲೇ ಕರ್ನಾಟಕದಾದ್ಯಂತ ಮಲ್ಟಿಪ್ಲೆಕ್ಸ್‌ಗಳಲ್ಲದೆ 100 ಚಿತ್ರಮಂದಿರಗಳಲ್ಲಿ ಬಿಡುಗಡೆಯನ್ನು ಅಂತಿಮಗೊಳಿಸಿದ್ದೇವೆ. ನಾವು ಚಿತ್ರವನ್ನು ರಾಜ್ಯದ ಹೊರಗೆ ಸಹ ತೆಗೆದುಕೊಂಡು ಹೋಗಲಿದ್ದು ದನ್ನು ಭಾರತದಾದ್ಯಂತ ಬಿಡುಗಡೆ ಮಾಡಲಿದ್ದೇವೆ. ಇದು ಯುಎಇಯ ಕೆಲವು ಭಾಗಗಳಲ್ಲಿ, ದಕ್ಷಿಣ ಆಫ್ರಿಕಾ, ಯುಎಸ್ಎ, ಕೆನಡಾ, ಸಿಂಗಾಪುರ್, ಹಾಂಗ್ ಕಾಂಗ್, ಸಿಯೋಲ್ ಗಳಲ್ಲಿ  ಎಂಟು ಕೇಂದ್ರಗಳಲ್ಲಿ ಬಿಡುಗಡೆ ಕಾಣಲಿದೆ.ಬೇರೆಡೆಗಳಲ್ಲಿ ಸಹ ನಾವು ಕನ್ನಡಿಗ ಪ್ರೇಕ್ಷಕರನ್ನು ಹೊಂದಿದ್ದೇವೆ ”ಎಂದು ನಾಗತಿಹಳ್ಳಿ ಹೇಳುತ್ತಾರೆ.

ನಾಗತಿಹಳ್ಳಿಯವರ ಪುತ್ರಿ ಕನಸು ಬರೆದ ಸ್ಕ್ರಿಪ್ಟ್‌ನೊಂದಿಗೆ, "ಇಂಡಿಯಾ ವರ್ಸಸ್ ಇಂಗ್ಲೆಂಡ್" ಕ್ರಿಕೆಟ್ ಅಲ್ಲ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬರುತ್ತಿದೆ.  ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ವ್ಯತ್ಯಾಸಗಳನ್ನು ಅನ್ವೇಷಿಸುವ ಚಿತ್ರವಿದಾಗಿದ್ದು ತ್ರದ ಸಂಗೀತವನ್ನು ಅರ್ಜುನ್ ಜನ್ಯಾ ಸಂಯೋಜಿಸಿದ್ದರೆ ಸತ್ಯ ಹೆಗ್ಡೆ ಛಾಯಾಗ್ರಹಣ ಮಾಡಿದ್ದಾರೆ. ವಸಿಷ್ಠ ಸಿಂಹ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ನಾಯಕ ಯುಕೆ ಮೂಲದ ಎನ್ಆರ್ ಐ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾನ್ವಿತಾ ಕಾಮತ್ ಮುಖ್ಯ ನಾಯಕಿಯ ಪಾತ್ರದಲ್ಲಿರುವ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಸುಮಲತಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com