ಆರತಿಗೊಬ್ಬ ಕೀರುತಿಗೊಬ್ಬ'ನಿಗಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ 'ಪುಟ್ಮಲ್ಲಿ'
ಚಂದನವನದ ಹಿರಿಯ ತಾರೆ, ರಾಜಕಾರಣಿ, ರಂಗಭೂಮಿ ಕಲಾವಿದೆ ಉಮಾಶ್ರೀ ಎಂಟು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ ಹೌದು, ಮೈಸೂರು ಮಂಜು ನಿರ್ದೇಶನದ ‘ಆರತಿಗೊಬ್ಬ, ಕೀರ್ತಿಗೊಬ್ಬ’ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಉಮಾಶ್ರೀ ಕಾಣಿಸಿಕೊಳ್ಳಲಿದ್ದಾರೆ
“ಅವಳಿ ಜವಳಿ ಗಂಡು ಮಕ್ಕಳ ತಾಯಿಯ ಪಾತ್ರ ನನ್ನದು ಹಿರಿಯ ನಟ ಅನಂತ್ ವೇಲು ಪತಿಯ ಪಾತ್ರದಲ್ಲಿದ್ದಾರೆ ಅವಳಿ ಮಕ್ಕಳಲ್ಲಿ ಒಂದನ್ನು ಪತಿ ತನ್ನ ಸ್ನೇಹಿತರಿಗೆ ನೀಡುತ್ತಾನೆ ಆ ಮಗು ಹೇಗೆ ಬೆಳೆಯುತ್ತದೆ, ಮರಳಿ ಅಮ್ಮನ ಮಡಿಲು ಸೇರುತ್ತಾನೆಯೇ, ಮಗನನ್ನು ದೂರ ಮಾಡಿಕೊಂಡ ಮಗನಿಗೆ ಹೆತ್ತವಳ ಚಡಪಡಿಕೆ ಸೇರಿದಂತೆ ಹಲವು ತಿರುವುಗಳನ್ನು ಧಾರಾವಾಹಿ ಒಳಗೊಂಡಿದೆ’ ಎಂದು ಉಮಾಶ್ರೀ ತಿಳಿಸಿದ್ದಾರೆ
ಎಂಟು ವರ್ಷದಲ್ಲಿ ಯಾವುದಾದರೂ ಚಿತ್ರಕ್ಕೆ ಆಫರ್ ಬಂದಿತ್ತೇ ಎಂಬ ಪ್ರಶ್ನೆಗೆ, “ಆರ್ ಎಸ್ ಪ್ರೊಡಕ್ಸನ್ಸ್ ಅವರ ‘ಬ್ಯಾಟರಾಯ’ ಚಿತ್ರಕ್ಕೆ ಆಫರ್ ಬಂದಿತ್ತು ಆದರೆ ಚಿತ್ರೀಕರಣ ಪ್ರಾರಂಭವಾಗಲಿಲ್ಲ” ಎಂದರು ಪ್ರಸ್ತುತ ‘ಆರತಿಗೊಬ್ಬ, ಕೀರ್ತಿಗೊಬ್ಬ’ ಧಾರಾವಾಹಿಯೊಂದಿಗೆ, ರಂಗಭೂಮಿಯಲ್ಲಿ ಶರ್ಮಿಷ್ಠೆ ಶೀರ್ಷಿಕೆಯ ಏಕಪಾತ್ರಾಭಿನಯಕ್ಕೆ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ ಇದರ ನಡುವೆಯೇ ಮೊಮ್ಮಕ್ಕಳಿಗೂ ಸಮಯ ಹೊಂದಿಸಿಕೊಳ್ಳುತ್ತೇನೆ ಎಂದು ಹೇಳಿದರು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ