'ಅವನೆ ಶ್ರೀಮನ್ನಾರಾಯಣ' ವಿಎಫ್‌ಎಕ್ಸ್ ಬಗ್ಗೆ ಹೆಮ್ಮೆಇದೆ: ನಿರ್ದೇಶಕ ಸಚಿನ್

ಮೂರು ವರ್ಷಗಳ ಕಾಲ "ನಾರಾಯಣ ನಾರಾಯಣ" ಎಂದು ನಾಮಸ್ಮರಣೆ ಮಾಡುತ್ತಾ ಬಂದಿರುವೆ, ಇದೀಗ ಅವೆಲ್ಲಾ ಅಂತಿಮ ಹಂತಕ್ಕೆ ಬಂದಿದೆ. "ಅವನೇ ಶ್ರೀಮನ್ನಾರಾಯಣ" ಚಿತ್ರ ಮುಂದ್ನ ವಾರ ತೆರೆಗೆ ಬರಲಿದೆ ಎಂದು ನಿರ್ದೇಶಕ ಸಚಿನ್ ರವಿ ಹೇಳಿದ್ದಾರೆ. ಚಿತ್ರ ಬಿಡುಗಡೆಯಾದ ಮರುದಿನ ನಾನೇನು ಮಾಡುತ್ತೇನೆ ಎನ್ನುವುದು ಊಹಿಸಲು ನನ್ನ್ಂದಲೇ ಸಾಧ್ಯವಾಗುವುದಿಲ್ಲ, ಈ ಚಿತ್ರ ಕೈಗೆತ್ತಿಕೊಂಡಾಗ ಇ
ಅವನೇ ಶ್ರೀಮನ್ನಾರಾಯಣ
ಅವನೇ ಶ್ರೀಮನ್ನಾರಾಯಣ
Updated on

ಮೂರು ವರ್ಷಗಳ ಕಾಲ "ನಾರಾಯಣ ನಾರಾಯಣ" ಎಂದು ನಾಮಸ್ಮರಣೆ ಮಾಡುತ್ತಾ ಬಂದಿರುವೆ, ಇದೀಗ ಅವೆಲ್ಲಾ ಅಂತಿಮ ಹಂತಕ್ಕೆ ಬಂದಿದೆ. "ಅವನೇ ಶ್ರೀಮನ್ನಾರಾಯಣ" ಚಿತ್ರ ಮುಂದ್ನ ವಾರ ತೆರೆಗೆ ಬರಲಿದೆ ಎಂದು ನಿರ್ದೇಶಕ ಸಚಿನ್ ರವಿ ಹೇಳಿದ್ದಾರೆ. ಚಿತ್ರ ಬಿಡುಗಡೆಯಾದ ಮರುದಿನ ನಾನೇನು ಮಾಡುತ್ತೇನೆ ಎನ್ನುವುದು ಊಹಿಸಲು ನನ್ನ್ಂದಲೇ ಸಾಧ್ಯವಾಗುವುದಿಲ್ಲ, ಈ ಚಿತ್ರ ಕೈಗೆತ್ತಿಕೊಂಡಾಗ ಇದು ಇಷ್ಟು ದೊಡ್ಡ ಪ್ರಮಾಣದ್ದಾಗಿರಲಿದೆ ಎನ್ನುವುದು ನನಗೆ ಅರಿವಿರಲಿಲ್ಲ ಎಂದು ಅವರು ಹೇಳಿದ್ದಾರೆ.

ನನಗೆ ಇನ್ನೂ 3-4 ದಿನಗಳ ಕೆಲಸ ಉಳಿದಿದೆ, ಮತ್ತು ಒಮ್ಮೆ ಚಿತ್ರ ಪ್ರೇಕ್ಷಕರ ಮುಂದೆ ಹೋದ ಬಳಿಕ ಅದು ನ್ನ ಚಿತ್ರವಾಗಿ ಉಳಿಯಲ್ಲ ಎಂಬ ತೀರ್ಮಾನಕ್ಕೆ ಬಂದಿರುವೆ. ಒಂದು ತಂಡವಾಗಿ, ನಾವು ಕ್ಷಣಕಾಲವೂ ವಿರಮಿಸದೆ "ನಾರಾಯಣ" ಜಪ ಮಾಡುತ್ತಿದ್ದೆವು. ಭಾನುವಾರದಂದು ಸಹ ನಾವು ಬಿಡುವು ಪಡೆಯದೆ ಚಿತ್ರೀಕರಣದ ಕೆಲಸದಲ್ಲಿ ತೊಡಗಿದ್ದೆವು. ಇದೀಗ ರೋಚಕ ಪ್ರಯಾಣವು ಮುಗಿಯುತ್ತಿದ್ದಂತೆ, ನಾನು ಮಿಶ್ರ ಭಾವನೆಗಳನ್ನು ತಾಳುತ್ತಿದ್ದೇನೆ ಸಚಿನ್ ರವಿ ಹೇಳುತ್ತಾರೆ, ಅವರು ತಮ್ಮಚಿತ್ರದ ಮೊದಲ ಅವಧಿಯ ಎಡಿಟಿಂಗ್ ಹಾಗೂ ವಿಜುವಲ್ ಎಫೆಕ್ಟ್ಸ್ ಗಳನ್ನು ಸಹ ನಿರ್ವಹ್ಗಿಸಿದ್ದಾರೆ.

ಸಚಿನ್ ರವಿ ಕನ್ನಡದ "ಅವನೇ ಶ್ರೀಮನ್ನಾರಾಯಣ" ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಎಂಟ್ರುಇ ಕೊಟ್ಟಿದ್ದಾರೆ. ಈ ಚಿತ್ರ  ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅವರ ಪ್ರಕಾರ, ಪ್ರತಿಯೊಬ್ಬ ಚಲನಚಿತ್ರ ನಿರ್ದೇಶಕರು ಎಡಿಟರ್, ರೈಟರ್,  ಸ್ಟಂಟ್ ಮಾಸ್ಟರ್ ಮತ್ತು ನೃತ್ಯ ನಿರ್ದೇಶಕ ಎಲ್ಲವೂ ಆಗಿರುತ್ತಾರೆ. “ಚಿತ್ರವು ಅಂತಿಮವಾಗಿಎಡಿಟರ್  ಕೈಗೆ ಬರುವುದರಿಂದ ಅವರು ಚಲನಚಿತ್ರದ ಕ್ರಮವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಅಥವಾ ಫೈಟ್ ಅಥವಾ ಹಾಡಿಗೆ ವಿಭಿನ್ನ ರೂಪವನ್ನು ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಇದನ್ನು ನಾನು ಒಂದು ಅಡ್ವಾಂಟೇಜ್ ಎಂದು ಭಾವಿಸುವೆ. ಆರಂಭದಲ್ಲಿ ನಿರ್ದೇಶನ ಮಾಡಲು ಚಿತ್ರೋದ್ಯಮಕ್ಕೆ ಬಂದ ಸಚಿನ್ ಅಕಸ್ಮಾತ್ ಆಗಿ ಸಂಪಾದನೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಲಬೇಕಾಗಿತ್ತು. "ಅವನೇ ಶ್ರೀಮನ್ನಾರಾಯಣ" ಚಿತ್ರದ ಸಮಯವನ್ನು 3 ಗಂಟೆಗಳಿಗೆ ಇಳಿಸುವುದುಅಕ್ಕೆ ನಿರ್ದೇಶಕರು ನಟ ರಕ್ಷಿತ್ ಶೆಟ್ಟಿ ಜತೆಯಾಗಿ ಎಡಿಟಿಂಗ್ ನಲ್ಲಿ ತೊಡಗಿದ್ದರು. "ಎಡಿಟರ್ ಒಬ್ಬನ ಕೆಲಸ  ಚಿತ್ರದ ದೀರ್ಘಾವಧಿಯನ್ನು ಉಳಿಸಿಕೊಳ್ಳುವುದಲ್ಲ ನಮಗೆ ಆ ಗುರಿ ಇಲ್ಲ, ನಾವು ಸಂಪೂರ್ಣ ಕಥೆಯನ್ನು ಹೇಳಲು ನೋಡುತ್ತೇವೆ ಮತ್ತು ಅನಗತ್ಯ ಶಾಟ್ ಗಳನ್ನು ತೆಗೆದು ಹಾಕುತ್ತೇವೆ. ಈ ಚಿತ್ರದಲ್ಲಿ ದೊಡ್ಡ ಕಥೆಯೊಂದು ಇದೆ. ಅದನ್ನು ಬಹಳಷ್ಟು ಪಾತ್ರಗಳು ಮತ್ತು ಆಕ್ಷನ್ ಸನ್ನಿವೇಶಗಳೊಂದಿಗೆ ಹೇಳಬೇಕಾಗಿತ್ತು, ಮತ್ತು ಮೂರು ಗಂಟೆಗಳ ಸ್ಕ್ರೀನ್ ಪ್ಲೇ ಅಗತ್ಯವಿತ್ತು ಎಂದು ಅವರು ಹೇಳಿದ್ದಾರೆ.

ನಿರ್ದೇಶನ ಹಾಗೂ ಎಡಿಟಿಂಗ್ ಹೊರತು ಸಚಿನ್ ವಿಜುವಲ್ ಎಫೆಕ್ಟ್ಸ್ ಕಡೆಗೂ ಕೈ ಆಡಿಸಿದ್ದಾರೆ. ಬಹುತೇಕ ಪ್ರತಿಯೊಂದು ಶಾಟ್ ಗೂ ವಿಎಫ್‌ಎಕ್ಸ್ ಇದೆ, ಮತ್ತು ನಾನು ಇದನ್ನು ಮೊದಲು ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರ್ವಹಿಸಿಲ್ಲ. ವಾಸ್ತವವಾಗಿ, ಈ ಕೆಲಸವನ್ನು ಮಾಡಲು ತಂಡವನ್ನು ಕರೆತರಲಾಗಿತ್ತು. 

"ದೃಶ್ಯ ಪರಿಣಾಮಗಳನ್ನು ಆಧರಿಸಿದ ಚಲನಚಿತ್ರಗಳು ನಿಮ್ಮನ್ನು ವಾಸ್ತವದಿಂದ ಫ್ಯಾಂಟಸಿ ಜಗತ್ತಿಗೆ ಕರೆದೊಯ್ಯಲು ಸಾಧ್ಯವಾಗುತ್ತದೆ. ನಾನು ಸಾಮಾನ್ಯವಾಗಿ ಅವಾಸ್ತವಿಕ ಚಲನಚಿತ್ರಗಳನ್ನು ನೋಡುವುದನ್ನು ಆನಂದಿಸುತ್ತೇನೆ, ಅದು ಹಾಲಿವುಡ್‌ನಲ್ಲಿ ಹೆಚ್ಚು ಬರುತ್ತದೆ. ವಿಜುವಲ್ ಎಫೆಕ್ಟ್ಸ್ವಿಭಿನ್ನ ಆಯಾಮವನ್ನು ನೀಡುತ್ತವೆ, ಮತ್ತು ಆ ಅನುಭವವನ್ನು ಕನ್ನಡ ಚಿತ್ರವೊಂದರಲ್ಲಿ ತರಲು ನಾನು ಬಯಸುತ್ತೇನೆ. ಅದೃಷ್ಟವಶಾತ್, ಇದು ಅವನೇ..... ಚಿತ್ರದಿಂದ ಪ್ರಾರಂಭವಾಯಿತು. ಚಲನಚಿತ್ರ ನಿರ್ಮಾಣದ ಸಮಯದಲ್ಲಿ ನಾನು ಕಲಿತ ಯಾವುದೇ ತಾಂತ್ರಿಕ ಅಂಶಗಳು ಸೂಕ್ತವಾಗಿವೆ. ನಾನು ದೃಶ್ಯ ಪರಿಣಾಮಗಳ ಕಲೆಯನ್ನು ಕಲಿತಿಲ್ಲದಿದ್ದರೆ, ನಾನು ಬಹುಶಃ ಈ ಚಿತ್ರವನ್ನು ಂಆಡುತ್ತಿರಲಿಲ್ಲ. 

1980 ಮತ್ತು 1990 ರ ದಶಕದ ಉತ್ತರಾರ್ಧದ ಕಥೆಗೆ ಚಿತ್ರದವನ್ನು ಹೊಂದಿಸಲಾಗುತ್ತಿರುವ ಕಾರಣ  ತಂಡವು ಕಾಲ್ಪನಿಕ ವಿಶ್ವವನ್ನು ರಚಿಸಬೇಕಾಗಿತ್ತು, ಅದಕ್ಕೆ ಅವರು ನೈಜ ಸೆಟ್‌ಗಳು ಮತ್ತು ದೃಶ್ಯ ಪರಿಣಾಮಗಳನ್ನು ಬಳಸಿಕೊಂಡು ರಚಿಸಿದರು. ಅದು ಪಬ್, ಕೋಟೆ, ಅಥವಾ ಅರಣ್ಯ, ಅಥವಾ ಹದ್ದು, ಗನ್ ಶಾಟ್‌ಗಳು, ಸ್ಫೋಟಗಳು, ಬೆಂಕಿ ಮತ್ತು 20-25 ನಿಮಿಷಗಳ ಕ್ಲೈಮ್ಯಾಕ್ಸ್ ಒಳಗೊಂಡ ಅನುಕ್ರಮಗಳಾಗಿರಲಿ, ದೃಶ್ಯ ಪರಿಣಾಮಗಳ ಮೂಲಕ ಸಂಪೂರ್ಣ ಪ್ರೊಡಕ್ಷನ್ ಸಾಧನೆಯಾಗಿದೆ.

ರಕ್ಷಿತ್ ಶೆಟ್ಟಿ ಮತ್ತು ಸಚಿನ್ ನಡುವಿನ ಒಡನಾಟವು ಏಳು ವರ್ಷಗಳ ಹಿಂದೆಯೇ ಪ್ರಾರಂಭವಾಯಿತು, ಹಿಂದೆ ಅವರು "ಉಳಿದವರು ಕಂಡ್ಂತೆ" ನಿರ್ಮಾಣ ಮಾಡುವಾಗಲೇ ಅವರಿಬ್ಬರ ನಡುವೆ ಸಂಪರ್ಕ ಏರ್ಪಟ್ಟಿದೆ. ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಸಮಾನ ಮನಸ್ಥಿತಿ ಇದೆ. , ಇದು ನಮ್ಮನ್ನು ಇಲ್ಲಿಯವರೆಗೆ ತೆಗೆದುಕೊಂಡು ಬಂದಿದೆ.ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಅಥವಾ ಉಳಿದವರು ಕಂಡಂತೆ  ಮೊದಲು ಸಿನೆಮಾ ಬಗ್ಗೆ ನನ್ನ ಆಲೋಚನೆ ತುಂಬಾ ಭಿನ್ನವಾಗಿತ್ತು.

ನಾನು ರಕ್ಷಿತ್ ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದಾಗ, ಸಿನೆಮಾದ ಮೊದಲ ಆದ್ಯತೆಯು ಬರವಣಿಗೆಯಾಗಿರುತ್ತದೆ ಎನ್ನುವುದನ್ನು ಅರಿತೆ.  ರಕ್ಷಿತ್ ಮತ್ತು ಸುನಿ ಇಬ್ಬರೂ ನನಗೆ ಪುಸ್ತಕಗಳನ್ನು ಓದಲು ಪ್ರೇರಣೆ ನೀಡಿದರು. ಇಂದು, ಚಲನಚಿತ್ರವನ್ನು ನೋಡುವುದಕ್ಕಿಂತ ಹೆಚ್ಚಾಗಿ, ಅದರ ತಯಾರಿಕೆಯನ್ನು ವೀಕ್ಷಿಸಲು ನಾನು ಬಯಸುತ್ತೇನೆ. ನಾನು ತಾಂತ್ರಿಕವಾಗಿ ಪವರ್ ಫುಲ್ ಇದ್ದದ್ದಾಗಿ ರಕ್ಷಿತ್ ತಿಳಿದಿದ್ದರು. ಕಿರಿಕ್ ಪಾರ್ಟಿ ಯಶಸ್ಸಿನ ಬಳಿಕ ನಟ ತಾವೊಂದು ದೊಡ್ಡ ಯೋಜನೆಗೆ ತೊಡಗಿಕೊಳ್ಳಲು ಯೋಚಿಸಿದ್ದರು. ಅದೇ ಈ ಚಿತ್ರದ ಹುಟ್ಟಿಗೆ ಪ್ರೇರಣೆಯಾಗಿದೆ.

ನಿರ್ಮಾಪಕ ಪುಷ್ಕರ್ ಮಲ್ಲಿಕರ್ಜುನಯ್ಯ ಎಚ್ ಕೆ ಪ್ರಕಾಶ್ ಅವರೊಂದಿಗೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. "ಈ ಚಿತ್ರಕ್ಕೆ ಅತ್ಯುತ್ತಮ ತಂತ್ರಜ್ಞರೂ ಸಿಕ್ಕಿದ್ದಾರೆ. ಮೊದಲಿಗೆ, ಛಾಯಾಗ್ರಾಹಕರಾಗಿ ಕಾರ್ಮ್ ಚಾವ್ಲಾ ಇದ್ದರು, ಬಳಿಕ ನಾವು ಇಮ್ರಾನ್ ಸರ್ಧರಿಯಾ  ಅವರನ್ನು ಕರೆತಂದೆವು. ವರು ಮೂರು ಹಾಡುಗಳ ನೃತ್ಯ ಸಂಯೋಜಿಸಿದ್ದಾರೆ ಮತ್ತು ವೈವಿಧ್ಯತೆಯನ್ನು ತಂದಿದ್ದಾರೆ. ವೇಷಭೂಷಣ ವಿನ್ಯಾಸಕಿ ಕ ಅರುಂಧತಿ ಅಂಜನಪ್ಪ ಅವರು ವೇಷಭೂಷಣಗಳನ್ನು ನಿರ್ವಹಿಸುವಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ್ದು, ಎಲ್ಲವನ್ನೂ ಕಸ್ಟಮೈಸ್ ಮಾಡಲಾಗಿದೆ. ಚಿತ್ರದಲ್ಲಿ ಸುಮಾರು 20 ಸೆಟ್‌ಗಳಿವೆ, ಎಲ್ಲವನ್ನೂ ಉಲ್ಲಾಸ್ ರಚಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com