ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್
ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

ಏಪ್ರಿಲ್ 3ಕ್ಕೆ 'ಯುವರತ್ನ'ನ ದರ್ಶನ?

2020ನೇ ವರ್ಷದ ಮೊದಲಾರ್ಧದಲ್ಲಿ ಹಲವು ಚಿತ್ರಗಳು ತೆರೆಗೆ ಬರಲು ಸಿದ್ದವಾಗಿವೆ. ಅವುಗಳಲ್ಲೊಂದು ಬಹುನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ.
Published on

2020ನೇ ವರ್ಷದ ಮೊದಲಾರ್ಧದಲ್ಲಿ ಹಲವು ಚಿತ್ರಗಳು ತೆರೆಗೆ ಬರಲು ಸಿದ್ದವಾಗಿವೆ. ಅವುಗಳಲ್ಲೊಂದು ಬಹುನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರ ಚಿತ್ರಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಪುನೀತ್-ಸಂತೋಷ್ ಜೋಡಿ ಈ ಹಿಂದೆ ರಾಜಕುಮಾರ ಎಂಬ ಬ್ಲಾಕ್ ಬಸ್ಟರ್ ಚಿತ್ರ ನೀಡಿತ್ತು. 


ಚಿತ್ರತಂಡದಿಂದ ಬಂದಿರುವ ಇತ್ತೀಚಿನ ಸುದ್ದಿ ಪ್ರಕಾರ ಯುವರತ್ನ ಏಪ್ರಿಲ್ 3ಕ್ಕೆ ತೆರೆಗೆ ಬರುವ ನಿರೀಕ್ಷೆಯಿದೆ. ಚಿತ್ರದ ಸಂಭಾಷಣೆ ಭಾಗ ಪೂರ್ಣಗೊಂಡಿದೆ. ಹಾಡಿನ ಭಾಗದ ಚಿತ್ರೀಕರಣ ನಡೆಯುತ್ತಿದೆ. 


ಕಾಲೇಜು ಹಿನ್ನಲೆಯಲ್ಲಿ ಚಿತ್ರೀಕರಿಸಲಾಗಿರುವ ಯುವರತ್ನದಲ್ಲಿ ಪುನೀತ್ ರಾಜ್ ಕುಮಾರ್ ಕಾಲೇಜು ಹುಡುಗನ ಪಾತ್ರ ನಿರ್ವಹಿಸುತ್ತಿದ್ದಾರೆ. ಅಕ್ಟೋಬರ್ 7ರಂದು ಟೀಸರ್ ಬಿಡುಗಡೆಯಾಗಿತ್ತು. ಅದರಲ್ಲಿ ಪುನೀತ್ ರಗ್ ಬಿ ಆಡುತ್ತಿದ್ದಾರೆ. 


ಹೊಂಬಾಳೆ ಫಿಲ್ಮ್ಸ್ ನಡಿ ತಯಾರಾಗುತ್ತಿರುವ ಯುವರತ್ನಕ್ಕೆ ಎಸ್ ತಮನ್ ಸಂಗೀತ, ವೆಂಕಟ್ ಅಂಗುರಾಜ್ ಕ್ಯಾಮರಾ ಕೈಚಳಕವಿದೆ. 


ಈ ಚಿತ್ರದ ಮೂಲಕ ಸಯ್ಯೇಶ ಎಂಬುವವರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಲನ್ ಪಾತ್ರದಲ್ಲಿ ಧನಂಜಯ್ ಮತ್ತು ವಸಿಷ್ಠ ಸಿಂಹ, ಪ್ರಕಾಶ್ ರಾಜ್, ದಿಗಂತ್ ಮತ್ತು ಸೋನು ಗೌಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com