ನಿಮ್ಮ ಪದವಿ 1 ಕೋಟಿ ರು.ಗೆ ಸಮ, ವಿದ್ಯೆ ಇಲ್ಲದವ್ರ ಕಷ್ಟ ಏನಂತ ನಂಗೆ ಗೊತ್ತು: ದರ್ಶನ್‌

ನಿಮ್ಮ ಪದವಿ ಎಂದರೆ ಅದು ಒಂದು ಕೋಟಿ ರು. ಗೆ ಸಮ, ವಿದ್ಯೆ ಇಲ್ಲದವ್ರ ಕಷ್ಟ ಏನಂತ ನಂಗೆ ಚೆನ್ನಾಗಿ ಗೊತ್ತು. ಯಾರೂ ಎರಡು ದೋಣಿಗಳಲ್ಲಿ ಖಾಲಿಡೋಕೆ ಹೋಗಬೇಡಿ ಎಂದು....
ದರ್ಶನ್‌
ದರ್ಶನ್‌
ಮೈಸೂರು: ನಿಮ್ಮ ಪದವಿ ಎಂದರೆ ಅದು ಒಂದು ಕೋಟಿ ರು. ಗೆ ಸಮ, ವಿದ್ಯೆ ಇಲ್ಲದವ್ರ ಕಷ್ಟ ಏನಂತ ನಂಗೆ ಚೆನ್ನಾಗಿ ಗೊತ್ತು. ಯಾರೂ ಎರಡು ದೋಣಿಗಳಲ್ಲಿ ಖಾಲಿಡೋಕೆ ಹೋಗಬೇಡಿ ಎಂದು ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಹೇಳಿದ್ದಾರೆ.
ಸುತ್ತೂರು ಮಠದ ಭಜನಾ ಮೇಳದಲ್ಲಿ ಮಾತನಾಡಿದ ದರ್ಶನ್ "ನಾನು ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮೊ ಮಾಡಿದ್ದೆ. ಆದರೆ ಆರು ತಿಂಗಳಿಗೆ ವಾಪಾಸಾದೆ, ನನ್ನ ಯೋಗ್ಯತೆ ಅಷ್ಟೇ ಇತ್ತು. ನನ್ನ ತಂದೆ ಅನಾರೋಗ್ಯಕ್ಕೀಡಾದಾಗ ಜೆಎಸ್ಎಸ್ ಆಸ್ಪತ್ರೆ ನನಗೆ ಬಹಳ ಸಹಾಯ ಮಾಡಿದೆ. ಹಾಗಾಗಿ ಸುತ್ತೂರು ಮಠ ನನಗೆ ಬಹಳ ಹತ್ತಿರವಾಗಿದೆ ಎಂದರು.
"ನಾನು ಚಿಕ್ಕ ಪುಟ್ಟ ಪಾತ್ರಗಳನ್ನ ಮಾಡಿದ್ದಕ್ಕೆ ಇಲ್ಲಿ ಕರೆದು ಕೂರಿಸಿದ್ದೀರಿ.ನಿಮ್ಮ ಪ್ರೀತಿ, ಅಭಿಮಾನ ಸದಾ ಕಾಲಹೀಗೆ ಇತಲಿ" ಎಂದ ನಟ "ನಾನೊಬ್ಬ ಸಾಸಾನ್ಯ ನಾಗರಿಕನಾಗಿದ್ದರೆ ಸುತ್ತೂರು ಜಾತ್ರೆಲಿ ಆರಾಮಾಗಿ ಓಡಾಡಿಕೊಂಡು ಇರುತ್ತಿದ್ದೆ.  ಆದರೆ ಈಗ ನಾನೊಬ್ಬ ಸೆಲೆಬ್ರಿಟಿ ಆಗಿರೋ ಕಾರಣ ನೀವು ನನ್ನನ್ನು ಓಡಾಡೋಕೆ ಬಿಡಲ್ಲ" ಎಂದು ಹೇಳಿದ್ದಾರೆ.
"ನನಗೆ ಇಲ್ಲಿ ನಡೆಯುವ ದನಗಳ ಜಾತ್ರೆ ನೋಡಬೇಕೆಂದು ಆಸೆ, ಆದರೆ ನಾನು ಇಲ್ಲಿ ಕೂರೋಕೆ ಬಿಡದ ನೀವು ನನಗೆ ದನಗಳನ್ನ ನೋಡೋಕೆ ಬಿಡ್ತೀರಾ?" ಎಂದು ಪ್ರಶ್ನಿಸಿದ್ದಾರೆ.
ಶನಿವಾರದಿಂದ ಆರು ದಿನಗಳ ಕಾಲ ಗೆ ಸುತ್ತೂರು ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಸಂದರ್ಭ ರಾಜ್ಯಮಟ್ಟದ ಭಜನಾ ಮೇಳ ಆಯೋಜಿಸಲಾಗಿದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಜನಾ ಮೇಳವನ್ನು ಉದ್ಘಾಟಿಸಿದ್ದಾರೆ. ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್‌ ಸದಸ್ಯ ಸಂದೇಶ್ ನಾಗರಾಜ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮತ್ತಿತರರೌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com