

ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್ ' ಚಿತ್ರದ ನಾಯಕಿಯಾಗಿರುವ ಅಮೃತಾ, ಮೊದಲ ಬಾರಿಗೆ ಕೃಷ್ಣ ನಿರ್ದೇಶಿಸುತ್ತಿರುವ ಲವ್ ಮಾಕ್ ಟೇಲ್ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಕೃಷ್ಣ ಇದಕ್ಕೂ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ, ಹುಡುಗರು ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಮದರಂಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೆಳಕಿಗೆ ಬಂದ ಅಮೃತಾ, ಲವ್ ಮಾಕ್ ಟೇಲ್ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟ ಕೃಷ್ಣ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಿಲನ ನಾಗರಾಜ್ ಕೂಡಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಶೇ. 60 ರಷ್ಟು ಈಗಗಾಲೇ ಚಿತ್ರೀಕರಣ ಮುಗಿದಿದ್ದು, ಈ ವಾರದಿಂದ ಮುಂದಿನ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಮಧ್ಯೆ ಅನುಷ್ಕಾ ಚಿತ್ರದ ಚಿತ್ರೀಕರಣವನ್ನು ಅಮೃತ ಪೂರ್ಣಗೊಳಿಸಿದ್ದಾರೆ. ಇದು ಆಕೆಯ ಮೊದಲ ಮಹಿಳಾ ಕೇಂದ್ರೀತ ಸಿನಿಮಾವಾಗಿದೆ.
ಲವ್ ಮಾಕ್ ಟೇಲ್ ಚಿತ್ರ ನಿರ್ಮಾಪಕರು ಇನ್ನೂ ಸಂಗೀತ ನಿರ್ದೇಶಕರನ್ನು ಅಂತಿಮಗೊಳಿಸಿಲ್ಲ. ಕ್ಯಾಮರಾ ಕೆಲಸ ಹಾಗೂ ಎಡಿಟಿಂಗ್ ಗಾಗಿ ಕ್ರೇಜಿ ಮನಸ್ಸುಳ್ಳ ಯುವಕರನ್ನು ಆಯ್ಕೆ ಮಾಡಲು ಚಿತ್ರ ತಂಡ ಹುಡುಕುತ್ತಿದೆ.
Advertisement