ನಟ ಸುದೀಪ್ ಗೆ ಕೋರ್ಟ್ ನಿಂದ ಸಮನ್ಸ್ ಜಾರಿ!

ಮಾರ್ಚ್ 26ರಕ್ಕಿಂತ ಮುಂಚಿತವಾಗಿ ವಿಚಾರಣೆಗೆ ಹಾಜರಾಗುವಂತೆ ಸ್ಯಾಂಡಲ್ ವುಡ್ ನಟ ಸುದೀಪ್ ಅವರಿಗೆ ಎರಡನೇ ಜೂಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಸುದೀಪ್
ಸುದೀಪ್
Updated on

ಚಿಕ್ಕಮಗಳೂರು: ಮಾರ್ಚ್ 26ರಕ್ಕಿಂತ ಮುಂಚಿತವಾಗಿ ವಿಚಾರಣೆಗೆ ಹಾಜರಾಗುವಂತೆ ಸ್ಯಾಂಡಲ್ ವುಡ್ ನಟ ಸುದೀಪ್ ಅವರಿಗೆ  ಎರಡನೇ ಜೂಡಿಷಿಯಲ್ ಮ್ಯಾಜಿಸ್ಟ್ರೇಟ್  ಪ್ರಥಮ ದರ್ಜೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ವಾರಸುದಾರ ಟಿವಿ ಧಾರಾವಾಹಿ ಶೂಟಿಂಗ್  ಸಂದರ್ಭದಲ್ಲಿ  ಕಾಫಿ ಎಸ್ಟೇಟ್ ನಲ್ಲಿ ವರದಿಯಾದ ಘಟನೆಯೊಂದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಧಾರಾವಾಹಿಯ ಕಾರ್ಯಕಾರಿ ನಿರ್ಮಾಪಕರಾದ ಸುದೀಪ್ ಹಾಗೂ ಮಹೇಶ್ ವಿರುದ್ಧ
ಫಾರ್ಮ್ ಹೌಸ್  ಮಾಲೀಕ ದೀಪಕ್  ಮಯೂರು, ದೂರು ದಾಖಲಿಸಿದ್ದರು.

ಚಿಕ್ಕಗಳೂರಿನ ಬೈಗೂರು ಗ್ರಾಮದಲ್ಲಿರುವ ಕಾಫಿ ಎಸ್ಟೇಟ್  ನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಚಿತ್ರೀಕರಣಕ್ಕಾಗಿ ಕಾಫಿ ಸಸ್ಯಗಳನ್ನು ಕಿತ್ತು ಹಾಕಿದ ಸ್ಥಳದಲ್ಲಿ ಕಟ್ಟಡವನ್ನು ನಿರ್ಮಿಸಿಕೊಡಲಾಗುವುದು ಎಂಬ ಷರತ್ತಿನ ಮೇರೆಗೆ  ಚಿತ್ರೀಕರಣಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ, ಚಿತ್ರೀಕರಣ ನಂತರ ಸುದೀಪ್ ಷರತ್ತನ್ನು ಪೂರ್ಣಗೊಳಿಸಿಲ್ಲ ಎಂದು ಎಸ್ಟೇಟ್ ಮಾಲೀಕ ಮಯೂರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com