ರಿಷಬ್ ಶೆಟ್ಟಿ 'ಬೆಲ್ ಬಾಟಮ್'ಗೆ ನೈಜ ದರೋಡೆ ಪ್ರಕರಣವೇ ಪ್ರೇರಣೆ!

ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ನಟನೆಯ ಬೆಲ್ ಬಾಟಮ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಫೆಬ್ರವರಿ ..
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ
Updated on
ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ನಟನೆಯ ಬೆಲ್ ಬಾಟಮ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಫೆಬ್ರವರಿ 15ರಂದು ಚಿತ್ರ ಬಿಡುಗಡೆಯಾಗುತ್ತಿದೆ.  
10 ವರ್ಷಗಳ ಹಿಂದೆ ಕೋಲಾರದಲ್ಲಿ ನಡೆದ ಒಂದು ಕಳ್ಳತನ ಈ ಚಿತ್ರಕ್ಕೆ ಪ್ರೇರಣೆಯಂತೆ.ಟಿಕೆ ದಯಾನಂದ್ ಬರೆದಿರುವ ಕಥೆ ಚಿತ್ರಕ್ಕೆ ತಿರುವು ನೀಡುತ್ತದೆ. 80ರ ದಶಕದ ವಾತಾವರಣದಲ್ಲಿ ಚಿತ್ರವನ್ನು ತಯಾರಿಸಲಾಗಿದೆ ಎಂದರು ಚಿತ್ರದ ನಿರ್ದೇಶಕ ಜಯತೀರ್ಥ.
ತನಿಖಾಧಿಕಾರಿಯೊಬ್ಬರು ಅಪರಾಧದ ವಿವಿಧ ಮಗ್ಗಲುಗಳನ್ನು ತನಿಖೆ ನಡೆಸುವ ಕಥೆ ಇದಾಗಿದೆ. ಆದರೆ ಇದರಲ್ಲಿ ಸಾಕ್ಷಿಗಳಿರುವುದಿಲ್ಲ. ಸಾಕಷ್ಟು ಪುರಾವೆಗಳಿಲ್ಲದಿರುವಾಗ ಯಾರೋ ಒಬ್ಬರು ಒಂದು ಕ್ಲೂ ನೀಡುತ್ತಾರೆ. ಅದರಿಂದ ಆರೋಪಿಯನ್ನು ಹಿಡಿಯಲು ಅನುಕೂಲವಾಗುತ್ತದೆ.
ಚಿತ್ರದಲ್ಲಿ ಹಾಸ್ಯ ಕೂಡ ಇದೆ. ಬ್ಯೂಟಿಫುಲ್ ಮನಸುಗಳು ಚಿತ್ರದ ಪ್ರೀಮಿಯರ್ ಸಮಯದಲ್ಲಿ ಸಂತೋಷ್ ಕುಮಾರ್ ಅವರನ್ನು ಭೇಟಿ ಮಾಡಿ ಪ್ರಾಜೆಕ್ಟ್ ಬಗ್ಗೆ ಹೇಳಿದೆ. ಅವರು ಚಿತ್ರ ನಿರ್ಮಿಸುವುದರಲ್ಲಿ ಉತ್ಸುಕತೆ ತೋರಿದರು. ಎಲ್ಲವೂ ಅಂದುಕೊಂಡಂತೆ ಚಿತ್ರ ತಯಾರಾಯಿತು ಎಂದರು ಜಯತೀರ್ಥ.
ಅಲ್ಲಿ ರಿಷಬ್ ಶೆಟ್ಟಿಯವರದ್ದು ಪತ್ತೇದಾರಿಯ ಪಾತ್ರ. ರೆಟ್ರೊ ಲುಕ್ ನಲ್ಲಿ ಕಾಣುವ ನಾಯಕ ಬೇಕಾಗಿತ್ತು. ಗ್ರಾಫಿಕ್ ನಲ್ಲಿ ಬಿಡಿಸಿ ಪಕ್ಕದಲ್ಲಿ ರಿಷಬ್ ಶೆಟ್ಟಿಯ ಭಾವಚಿತ್ರ ಇಟ್ಟು ನೋಡಿದಾಗ ಹೊಂದಿಕೆಯಾಗುತ್ತದೆ ಎಂದು ಗೊತ್ತಾಯಿತು. ಚಿತ್ರದಲ್ಲಿ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದು ಉಳಿದ ತಾರಾಗಣದಲ್ಲಿ ಪ್ರಮೋದ್ ಶೆಟ್ಟಿ, ಯೋಗರಾಜ್ ಭಟ್ ಮತ್ತು ಶಿವಮಣಿ ಮೊದಲಾದವರಿದ್ದಾರೆ ಎಂದರು ಜಯತೀರ್ಥ.
10 ವರ್ಷಗಳ ಹಿಂದೆ ನಡೆದ ಘಟನೆಯಾದರೂ ಕೂಡ ಇಂದಿಗೂ ಕಳ್ಳತನ ಪ್ರಕರಣ ಪ್ರಸ್ತುತವಾಗಿದೆ. ಪ್ರತಿನಿತ್ಯ ಹತ್ತು ಹಲವು ದರೋಡೆ ಪ್ರಕರಣಗಳ ಬಗ್ಗೆ ಕೇಳುತ್ತೇವೆ. ಇಂದು ತಂತ್ರಜ್ಞಾನ ಬೆಳೆದಿರುವುದರಿಂದ ದರೋಡೆ ಮಾಡುವ ರೀತಿ ಬದಲಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೂಡ ಅಪರಾಧಿಯ ಕೈ ಮತ್ತು ಕಣ್ಣಿನ ಚಲನವಲನಗಳನ್ನು ನೋಡಿ ಪೊಲೀಸರು ಗುರುತು ಹಿಡಿಯುತ್ತಾರೆ. ಉಡುಪಿಯ ಒಂದು ಜಾಗ ಸೇರಿದಂತೆ ರೆಟ್ರೊ ಲುಕ್ ಗೆ ಹೊಂದಿಕೆಯಾಗುವ ಸ್ಥಳಗಳನ್ನು ಹುಡುಕಿ ಶೂಟಿಂಗ್ ಮಾಡಿದೆವು ಎಂದು ಜಯತೀರ್ಥ ವಿವರ ನೀಡಿದರು.
ರಘು ನಿಡುವಳ್ಳಿ ಅವರ ಸಂಭಾಷಣೆ, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com