ರಾಜ್, ಉಪ್ಪಿಯಂತೆ ದೊಡ್ಡ ಹೆಸರು ಗಳಿಸಬೇಕೆಂದು ನಾನು ಬೆಂಗಳೂರಿಗೆ ಬಂದೆ: ರಿಷಬ್ ಶೆಟ್ಟಿ

ಚಿಕ್ಕಂದಿನಲ್ಲಿ ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡುತ್ತಿದ್ದೆ, ಆಗ ನನಗೆ ನಾನೂ ಚಿತ್ರಗಳಲ್ಲಿ "ಹೀರೋ" ಆಗಿ ಕಾಣಿಸಿಕೊಳ್ಳಬೇಕು ಎನಿಸಿತ್ತು. ಅದೇ ರೀತಿ ವಾಲ್ ಪೋಸ್ಟ್ ಅಗಳಲ್ಲಿ ರಿಯಲ್ ಸ್ಟಾರ್....
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ
ಬೆಂಗಳೂರು: ಚಿಕ್ಕಂದಿನಲ್ಲಿ ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡುತ್ತಿದ್ದೆ, ಆಗ ನನಗೆ ನಾನೂ ಚಿತ್ರಗಳಲ್ಲಿ "ಹೀರೋ" ಆಗಿ ಕಾಣಿಸಿಕೊಳ್ಳಬೇಕು ಎನಿಸಿತ್ತು. ಅದೇ ರೀತಿ ವಾಲ್ ಪೋಸ್ಟ್ ಅಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಚಿತ್ರಗಳ ಕಂಡಾಗಲೂ ನಾನೂ ಸ್ಯಾಂಡಲ್ ವುಡ್ ನಲ್ಲಿ ಹೆಸರು ಗಳಿಸಿಕೊಳ್ಳಬೇಕು ಎನಿಸಲು ಪ್ರಾರಂಭವಾಗಿತ್ತು ಎಂದು ಇದೀಗ ಹೆಸರಾಂತ ನಟ, ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ತಮ್ಮ ಆರಂಭಿಕ ದಿನಗಳನ್ನು ಮೆಲುಕು ಹಾಕಿದ್ದಾರೆ. ತಾವು ತಮ್ಮ ಸ್ವಗ್ರಾಮವನ್ನು ಬಿಟ್ಟು ಬೆಂಗಳೂರಿಗೆ ಆಗಮಿಸಲು ಇದುವೇ ಕಾರಣವೆಂದು ಅವರು ಹೇಳಿದ್ದಾರೆ."ನಾನು ಹತ್ತನೇ ತರಗತಿಯಲ್ಲಿದ್ದಾಗಲೇ ಉಪ್ಪಿ ಸೂಪರ್ ಸ್ಟಾರ್ ಆಗಿದ್ದರು. ಅವರು ಚಿತ್ರದ ಎಲ್ಲಾ ವಿಭಾಗಗಳಲ್ಲಿ ಹೆಸರು ಮಾಡಿದ್ದರು. ಇದರಿಂದ ಸ್ಪೂರ್ತಿ ಪಡೆದ ನಾನು ಬೆಂಗಳೂರಿಗೆ ಆಗಮಿಸಿದ್ದೆ" ಅವರು ಹೇಳಿದರು.
ರಿಷಬ್ "ರಿಕ್ಕಿ", "ಕಿರಿಕ್ ಪಾರ್ಟಿ" ಹಾಗೂ "ಸ.ಹಿಪ್ರಾ. ಶಾಲೆ ಕೊಡುಗೆ ರಾಮಣ್ಣ ರೈ" ನಂತಹಾ ಚಿತ್ರಗಳ ಮೂಲಕ ಜನಪ್ರಿಯ ನಿರ್ದೇಶಕ ಎನಿಸಿದ್ದಾರೆ. ಅದರ ನಡುವೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಜನರ ಪ್ರೀತಿಗೆ ಅವರು ಪಾತ್ರರಾಗಿದ್ದಾರೆ.  ಆದರೆ ಈಗ ಜಯತೀರ್ಥ ಅವರ ಚಿತ್ರದಲ್ಲಿ ರಿಷಬ್ ತಾವು ಸಂಪೂರ್ಣ ಪ್ರಮಾಣದ ನಾಯಕ ನಟನಾಗಿ ತೆರೆಮೇಲೆ ಕಾಣಿಸಿಕೊಳ್ಲಲಿದ್ದಾರೆ. "ಬೆಲ್ ಬಾಟಮ್" ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿದ್ದಾರೆ. ""ನಟ ಅಥವಾ ನಿರ್ದೇಶಕರಾಗಿ, ನಾನು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದೇನೆ ಅದರಂತೆ  ತುಂಬಾ ಉತ್ಸಾಹದಿಂದ  ಕೂಡಿರುತ್ತೇನೆ.. ನಾನು ಪ್ರೇಕ್ಷಕರಿಗೆ ಒಳ್ಳೆಯ ಚಿತ್ರ ನೀಡಬೇಕೆನ್ನುವ ಉದ್ದೇಶದೊಡನೆ ನನಗೆ ನಾನೇ ಸವಾಲು ಹಾಕಿಕೊಳ್ಳುತ್ತೇನೆ. ಬೆಲ್ ಬಾಟಮ್ ಟ್ರೇಲರ್ ಹಾಗೂ ಪೋಸ್ಟರ್ ಗಳೊಡನೆ ಒಂದು ಕ್ರೇಜ್ ಸೃಷ್ಟಿಸಿದೆ.ಇನ್ನು ಪೂರ್ಣ ಚಿತ್ರ ತೆರೆ ಮೇಲೆ ಬಂದಾಗ ಪ್ರೇಕ್ಷಕ ಯಾವ ರೀತಿ ಪ್ರತಿಕ್ರಯಿಸುತ್ತಾನೆ ಎಂದು ಕಾದು ನೋಡಬೇಕಿದೆ"
ತಾನೋರ್ವ ನಿರ್ದೇಶಕನಾಗಿ ಅನುಭವ ಹೊಂದಿದ್ದರೂ "ಬೆಲ್ ಬಾಟಮ್" ನಲ್ಲಿ ಅವರು ಕೇವಲ ತಮ್ಮ ಪಾತ್ರಕ್ಕಷ್ಟೇ ಗಮನ ನೀಡಿದ್ದಾರೆ. "ನಾನು ಒಬ್ಬ ನಿರ್ದೇಶಕನಾಗಿ ಹೆಸರಾಗಿದ್ದರೂ ಈ ಚಿತ್ರದಲ್ಲಿ ನನ್ನ ಪಾತ್ರಕ್ಕಷ್ಟೇ ನಾನು ಪ್ರಾಮುಖ್ಯತೆ ನೀಡಿದ್ದೇನೆ.ನನ್ನಲ್ಲಿ ಯಾವುದೇ ಅನುಮಾನವಿದ್ದರೂ ಸ್ಕ್ರಿಪ್ಟ್ ಓದುವ ವೇಳೆ ಅದನ್ನು ಬಗೆಹರಿಸಿಕೊಂಡೆ.ಅಲ್ಲದೆ ನಿರ್ದೇಶಕ, ನಟ ಎನ್ನುವ ಎರಡೂ ಪಾತ್ರಗಳಲ್ಲಿ ಘರ್ಷಣೆಯನ್ನು ನಾನು ಬಯಸಲಾರೆ. ಜಯತೀರ್ಥ  ಅವರು ತಮ್ಮ ಯೋಜನೆಗೆ ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿರುವರು. ಅವರು  ಹಿರಿಯ ನಿರ್ದೇಶಕರಾಗಿದ್ದಾರೆ "ರಿಷಬ್ ಹೇಳಿದ್ದಾರೆ.
ಚಿತ್ರವು ನಿಮ್ಮನ್ನು ನಗೆಗಡಲಲ್ಲಿ ತೇಲಿಸಲಿದೆ.ಸಂಪೂರ್ಣ ಮನರಂಜನೆ ನೀಡಲಿರುವ ಈ ಚಿತ್ರ  80ರ ದಶಕದ ಹಿನ್ನೆಲೆಯನ್ನು ಹೊಂದಿದೆ.ಬೆಲ್ ಬಾಟಮ್ ಹಾಸ್ಯಮಯ ರೋಮಾಂಚಕ ಕಾದಂಬರಿಯನ್ನು ಓದುವ ಅನುಭವವನ್ನು ನೀಡುತ್ತದೆ "ಎಂದು ಅವರು ಹೇಳುತ್ತಾರೆ.
ಅದೊಂದು ಕಾಲದಲ್ಲಿ ರಿಷಬ್ ಗೆ ಪೋಲೀಸ್ ಇಲಾಖೆಗೆ ಸೇರಲು ಅವಕಾಶವಿತ್ತು. ಆದರೆ ದೈವ ಸಂಲ್ಪವೇ ಬೇರಾಗಿತ್ತು. ಜೂಡೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿದ್ದ ರಿಷಬ್  ಕ್ರೀಡಾ ಕೋಟಾದ ಮೂಲಕ ಪೊಲೀಸ್ ಇಲಾಖೆಗೆ ನೇಮಕಗೊಳ್ಳುವ ಅವಕಾಶ ಪಡೆದಿದ್ದರು. "ಹೇಗಾದರೂ, ನಾನು ಇನ್ನೂ ಒಂದು ಪತ್ತೇದಾರಿ ಸನ್ನಿವೇಶವನ್ನು ಇಷ್ಟಪಡುತ್ತೇನೆ." ರಿಷಬ್ ಹೇಳಿದ್ದಾರೆ
ನಿರ್ದೇಶಕ, ನಿರ್ಮಾಪಕ, ನಟನಾಗಿ ರಿಷಬ್ ಅವರು ನಿರ್ದೇಶನಕ್ಕೆ ಹೆಚ್ಚು ಒಲವನ್ನು ವ್ಯಕ್ತಪಡಿಸುತಾರೆ.  "ನಾನು 20 ವರ್ಷದವನಿದ್ದಾಗ ನಟನಾಗಲು ಬಯಸಿದ್ದೆ. ಆದರೆ ನನಗೆ ಚಿತ್ರದಲ್ಲಿ ಅವಕಾಶ ದೊರೆತದ್ದು 30 ವರ್ಷಗಲಾಗಿದ್ದಾಗ. ಈ ಸಮಯದಲ್ಲಿ, ಬದುಕಿನ  ಸೂಕ್ಷ್ಮ ವ್ಯತ್ಯಾಸಗಳನ್ನು ನಾನು ಕಂಡುಕೊಂಡಿದ್ದೇನೆ. ಹಾಗೆಯೇ ನಿರ್ದೇಶನ ನನಗೆ ಮೊದಲ ಆದ್ಯತೆಯಾಗಿ ಕಾಣಿಸಿದೆ. ನಾನು ಅಲ್ಲಲ್ಲಿ ಒಂದೊಂದು ಒಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ. ನಿಜಕ್ಕೂ, ನಾನು ನಿರ್ದೇಶನದಿಂದ ವಿರಾಮ ತೆಗೆದುಕೊಳ್ಳಬೇಕೆಂದು ನಾನು ಭಾವಿಸಿದಾಗ, ಕ್ಯಾಮೆರಾದ ಮುಂದೆ ನಿಲ್ಲುವುದು ಉಚಿತವೆನಿಸಿದೆ.ಅಲ್ಲಿ ನಾನು ಹೊಸ ವಿಷಯಗಳನ್ನು ಪಡೆದುಕೊಳ್ಳುತ್ತೇನೆ 
ರಿಷಬ್ "ಬೆಲ್ ಬಾಟಮ್" ಮಾತ್ರವಲ್ಲದೆ "ಕಥಾ ಸಂಗಮದ", "ನಾಥೂರಾಮ್" ಚಿತ್ರಗಳಲ್ಲಿ ಸಹ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com