'ಐತಿಹಾಸಿಕ ಸಿನಿಮಾ ಮೂಲಕ ಕನ್ನಡ ಚಿತ್ರ ಇತಿಹಾಸದಲ್ಲಿ ಹೆಗ್ಗುರುತು ಮೂಡಿಸುವೆ'

ಇದೇ ಮೊದಲ ಬಾರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಐತಿಹಾಸಿಕ ಸಿನಿಮಾಗೆ ಕೈ ಹಾಕಿದ್ದಾರೆ. ದರ್ಶನ್ ನಟನೆಯ ಗಂಡುಗಲಿ ಮದಕರಿ ನಾಯಕ ಚಿತ್ರದ ಮೂಲಕ ಕನ್ನಡ ...
ರಾಕ್ ಲೈನ್ ವೆಂಕಟೇಶ್
ರಾಕ್ ಲೈನ್ ವೆಂಕಟೇಶ್
ಇದೇ ಮೊದಲ ಬಾರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಐತಿಹಾಸಿಕ ಸಿನಿಮಾಗೆ ಕೈ ಹಾಕಿದ್ದಾರೆ. ದರ್ಶನ್ ನಟನೆಯ ಗಂಡುಗಲಿ ಮದಕರಿ ನಾಯಕ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಇತಿಹಾಸ ಸೃಷ್ಟಿಸುವೆ ಎಂದು  ನಿರ್ಮಾಪಕ  ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ನಟ ದರ್ಶನ್ ಅವರ ಹುಟ್ಟುಹಬ್ಬದ ಅಂಗವಾಗಿ ಮೊದಲ ಪೋಸ್ಟರ್ ರಿಲೀಸ್ ಮಾಡಿ ಮಾತನಾಡಿದ ವೆಂಕಟೇಶ್, ಐತಿಹಾಸಿಕ ಸಿನಿಮಾಗಾಗಿ ಸಿದ್ಧತೆ ನಡೆಸಿದ್ದಾರೆ, ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದಾರೆ, ಕಳೆದ ಮೂರು ನಾಲ್ಕು ವರ್ಷಗಳಿಂದ ಸಿನಿಮಾಗಾಗಿ ತಯಾರಿ ನಡೆಸಿದು, ಕಳೆದ ನಾಲ್ಕು ತಿಂಗಳಿಂದ ತೀವ್ರ ತರವಾದ ಸಿದ್ದತೆ ನಡೆಸಲಾಗುತ್ತಿದೆ  
ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಶೂಟಿಂಗ್ ಆರಂಭಿಸಲು ನಿರ್ಧರಿಸಿದ್ದೆವು, ಆದರೆ ಐತಿಹಾಸಿಕ ಸಿನಿಮಾಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಬೇಕಾದಷ್ಟು ಐತಿಹಾಸಿಕ ಸಿನಿಮಾಗಳು ಬಂದಿವೆ, ಈ ಎಲ್ಲಾ ಸಿನಿಮಾಗಳಿಗಿಂತ ಉತ್ತಮವಾಗಿ ನಿರ್ಮಿಸಬೇಕು ಎಂಬುದು ನನ್ನ ಬಯಕೆ ಎಂದು ಹೇಳಿದ್ದಾರೆ,ಈ ಪ್ರಾಜೆಕ್ಟ್ ಅನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೊಗಬೇಕು ಎಂಬುದು ನನ್ನ ಆಸೆಯಾಗಿದೆ. ಹೀಗಾಗಿ ಹೆಚ್ಚಿನ ಸಮಯ ಹಿಡಿಯಲಿದೆ,
ಸಿನಿಮಾಗಾಗಿ ಕಂಪ್ಯೂಟರ್ ಗ್ರಾಫಿಕ್ಸ್, ಸ್ಟಂಟ್ಸ್,  ಪಾತ್ರಗಳು ಹಾಗೂ ಶೂಟಿಂಗ್ ಸ್ಥಳಗಳನ್ನು ಆಯ್ಕೆ ಮಾಡುವ ಕೆಲಸವನ್ನು ಖುದ್ದಾಗಿ ವೆಂಕಟೇಶ್ ಅವರೇ ಮಾಡುತ್ತಿದ್ದಾರೆ, ಸಿನಿಮಾಗೆ ಹಂಸಲೇಖ ಸಂಗೀತ ನೀಡಿದ್ದಾರೆ, ಚಿತ್ರದುರ್ಗ ಹೊರತುಪಡಿಸಿ, ಮುಂಬಯಿ, ಹೈದರಾಬಾದ್ ಮತ್ತು ರಾಜಸ್ತಾನಗಳಲ್ಲಿ ಶೂಟಿಂಗ್ ಮಾಡಲಾಗುತ್ತದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ  ನಾಗರಹಾವು ಸಿನಿಮಾದಲ್ಲಿ ಚಿತ್ರದುರ್ಗ ಕುರಿತು ರೂಪಿಸಿರುವ ಹಾಡು ಇಂದಿಗೂ ಎಲ್ಲರ ಬಾಯಲ್ಲೂ ಗುನುಗತ್ತದೆ. ಅದೇ ರೀತಿಯ ಸಿನಿಮಾ ನಮ್ಮದಾಗುತ್ತದೆ ಎಂಬ ಆಶಯ ವ್ಯಕ್ತ ಪಡಿಸಿದ್ದಾರೆ.
ಚಿತ್ರದುರ್ಗದಲ್ಲಿರುವ 7 ಕೋಟೆಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ, ಇದು ಏಳು ಸುತ್ತಿನ ಕೋಟೆ ಎಂದೇ ಪ್ರಸಿದ್ದವಾಗಿದೆ, ಇದಕ್ಕೆ ತನ್ನದೇ ಆದ ಇತಿಹಾಸವಿದೆ, ಈ ಸ್ಥಳ ಬಾಹುಬಲಿಯಂತೆ ಕಾಣುತ್ತದೆ ಎಂಬುದೆಲ್ಲಾ ಸುಳ್ಳು, ಅದೊಂದು ಊಹಾಪೋಹ ಎಂದು ಹೇಳಿರುವ ವೆಂಕಟೇಶ್, ಈ ಕೋಟೆ ಕೇವಲ ರಾಜರಿಂದ ಮಾತ್ರ ನಿರ್ಮಾಣವಾಗಿಲ್ಲ, ಜನಗಳ ಪಾಲು ಇದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com