ಚಂಬಲ್
ಸಿನಿಮಾ ಸುದ್ದಿ
ನೀನಾಸಂ ಸತೀಶ್ ಅಭಿನಯದ 'ಚಂಬಲ್' ಬಿಡುಗಡೆಗೆ ಹೈಕೋರ್ಟ್ ಸಮ್ಮತಿ
ನಟ ನೀನಾಸಂ ಸತೀಶ್ ಅಭಿನಯದ 'ಚಂಬಲ್' ಬಿಡುಗಡೆಗೆ ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ
ಬೆಂಗಳೂರು: ನಟ ನೀನಾಸಂ ಸತೀಶ್ ಅಭಿನಯದ 'ಚಂಬಲ್' ಬಿಡುಗಡೆಗೆ ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ಐಎಎಸ್ ಅಧಿಕಾರಿ ದಿ. ಡಿಕೆ. ರವಿ ಜೀವನಾಧಾರಿತವಾಗಿರುವ ಈ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ರವಿ ಪೋಷಕರು ಕೋರ್ಟ್ ಮೆಟ್ಟಿಲೇರಿಉದ್ದರು. ಆದರೆ ವಾದ ವಿವಾದ ಆಲಿಸಿದ ನ್ಯಾಯಾಲಯ ಚಿತ್ರಕ್ಕೆ ತಡೆ ನೀಡಲು ನಿರಾಕರಿಸಿದೆ.
"ಚಂಬಲ್" ಚಿತ್ರ ಕಾಲ್ಪನಿಕ ಕಥಾನಕವಾಗಿದ್ದು ಇದು ರವಿ ಜೀವನಾಧಾರಿತವಲ್ಲ.ಅವರ ಬಗ್ಗೆ ಅವಹೇಳನ ಮಾಡುವಂತಹದೇನೂ ಇಲ್ಲಿಲ್ಲ ಎಂದು ಚಿತ್ರತಂಡದ ಪರ ವಕೀಲರು ತಿಳಿಸಿದ್ದಾರೆ.
"ಚಂಬಲ್" ನಲ್ಲಿ ಡಿಕೆ ರವಿ ಅವರಿಗೆ ಅವಮಾನಿಸುವಂತಹಾ ಯಾವುದೇ ದೃಶ್ಯಗಳಿಲ್ಲ ಎಂದು ಸೆನ್ಸಾರ್ ಮಂಡಳಿ ಪರ ವಕೀಲರು ಸಹ ನ್ಯಾಯಾಲಯದಲ್ಲಿ ಹೇಳಿಕೆ ನಿಡಿದ್ದಾರೆ.
ಇನ್ನು ತಮ್ಮ ಮಗನ ಕುರಿತು ಅವಹೇಳನಕಾರಿಯಾಗಿ ತೋರಿಸುವ ಚಿತ್ರದ ಬಿಡುಗಡೆಯಾಗುತ್ತಿರುವುದು ನನಗೆ ನೋವು ತಂದಿದೆ ಎಂದು ರವಿಯವರ ತಾಯಿ ಗೌರಮ್ಮ ಕೋರ್ಟ್ ಮುಂದೆಯೇ ಕಣ್ಣೀರು ಹಾಕಿದ ಘಟನೆ ಸಹ ವರದಿಯಾಗಿದೆ.
ಸಧ್ಯ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿರುವ ನ್ಯಾಯಾಲಯ ಚಿತ್ರದ ಮೊದಲ ಪ್ರದರ್ಶನದ ಬಳಿಕ ಸಿ ಡಿ ಯನ್ನು ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಸಲ್ಲಿಸಲು ಚಿತ್ರತಂಡಕ್ಕೆ ಸೂಚಿಸಿದೆ. ಇನ್ನು ಚಿತ್ರಕ್ಕೆ ನ್ಸಾರ್ ಮಂಡಳಿ ಸರ್ಟಿಫಿಕೇಟ್ ವಾಪಸ್ ಮಾಡಿದ ವಿಚಾರ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಈ ಕುರಿತಂತೆ ವಿವರವಾದ ವಾದ ಮಂಡನೆ ಮಾಡುವುದಾಗಿ ಚಿತ್ರತಂಡದ ಪರ ವಕೀಲರು ಹೇಳಿದ್ದಾರೆ.

