ರಚಿತಾ ರಾಮ್ ಮತ್ತು ಆರ್.ಚಂದ್ರು
ಸಿನಿಮಾ ಸುದ್ದಿ
ನಿರ್ದೇಶಕ ಆರ್. ಚಂದ್ರು ರಚಿತಾ ರಾಮ್ ಅವರ ಬಹುದೊಡ್ಡ ಅಭಿಮಾನಿ!
ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾ ನಿರ್ದೇಶಕ ಆರ್.ಚಂದ್ರು ನಟಿ ರಚಿತಾ ರಾಮ್ ಅವರ ...
ಬೆಂಗಳೂರು: ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾ ನಿರ್ದೇಶಕ ಆರ್.ಚಂದ್ರು ನಟಿ ರಚಿತಾ ರಾಮ್ ಅವರ ಬಹು ದೊಡ್ಡಅಭಿಮಾನಿ ಆಗಿದ್ದಾರಂತೆ, ರಚಿತಾ ರಾಮ್ ಕೂಡ ಐ ಲವ್ ಯೂ ಸಿನಿಮಾದಲ್ಲಿ ನಟಿಸಿದ್ದಾರೆ.
ಐ ಲವ್ ಯೂ ಸಿನಿಮಾದಲ್ಲಿ ಬುಲ್ ಬುಲ್ ನಟಿ ರಚಿತಾ ತುಂಬಾ ಬೋಲ್ಡ್ ಆಗಿ ನಟಿಸಿದ್ದಾರೆ, ಅದರಿಂದ ತಾವು ಇಂಪ್ರೆಸ್ ಆಗಿರುವುದಾಗಿ ಚಂದ್ರು ತಿಳಿಸಿದ್ದಾರೆ. ಭಾನುವಾರ ರಿಲೀಸ್ ಆಗಿರುವ ಐ ಲವ್ ಯೂ ಚಿತ್ರದ ಟೀಸರ್ ಎಲ್ಲರ ಗಮನ ಸೆಳೆದಿದೆ. ಕಥೆಯ ಪಾತ್ರಕ್ಕೆ ಬೇಕಾದ ಎಲ್ಲಾ ರೀತಿಯ ನ್ಯಾಯವನ್ನು ರಚಿತಾ ಒದಗಿಸಿದ್ದಾರೆ. ಕಥೆ, ಸನ್ನಿವೇಶಕ್ಕೆ ಬೇಕಾದ ರೀತಿಯಲ್ಲಿ ನಟಿಸಿದ್ದಾರೆ.
ಆಕೆ ತುಂಬಾ ವೃತ್ತಿಪರ ನಟಿ ಎಂದು ಚಂದ್ರು ಹೇಳಿದ್ದಾರೆ. ಸೋನುಗೌಡ ಉಪೇಂದ್ರ ಪತ್ನಿಯಾಗಿ ನಟಿಸಿದ್ದಾರೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ, ಫೆಬ್ರವರಿ 14 ರ ಪ್ರೇಮಿಗಳ ದಿನಾಚರಣೆಯಂದು ಸಿನಿಮಾ ರಿಲೀಸ್ ಆಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ