ಸಿದ್ಧಗಂಗಾ ಶ್ರೀ ಲಿಂಗೈಕ್ಯ: ನಾಳೆ ಚಿತ್ರೋದ್ಯಮ ಸಂಪೂರ್ಣ ಬಂದ್

ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಂಗಳವಾರ ಚಿತ್ರೋದ್ಯಮ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಂಗಳವಾರ ಚಿತ್ರೋದ್ಯಮ ಸಂಪೂರ್ಣ ಬಂದ್ ಆಗಲಿದ್ದು, ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ.
ಶ್ರೀಗಳ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬಿನಿ ಮಿಡಿದಿದ್ದು, ನಾಳೆ ಯಾವುದೇ ಸಿನಿಮಾಗಳ ಪ್ರದರ್ಶನ ಮತ್ತು ಚಿತ್ರೀಕರಣ ನಡೆಯುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಅವರು ಹೇಳಿದ್ದಾರೆ.
ಶಿವಕುಮಾರ ಶ್ರೀಗಳು ಸಮಾಜ ಸೇವೆಯೇ ಜೀವನ ಎಂದು ಬದುಕಿದ್ದವರು. ಅವರು ಲಿಂಗೈಕ್ಯರಾದ ಸುದ್ದಿಯಿಂದ ನೋವಾಗಿದೆ. ಅವರ ಸಮಾಜ ಸೇವೆ, ಕಾಯಕ ನಮಗೆ ಮಾದರಿ. ಶ್ರೀಗಳಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರೋದ್ಯಮ ಬಂದ್​ ಘೋಷಿಸಿದೆ ಎಂದು ಚಿನ್ನೇಗೌಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com