ಭಾರತ ಕೇಂದ್ರಿತ, ಋತುಸ್ರಾವದ ಕುರಿತ ಸಿನಿಮಾ ಆಸ್ಕರ್ ಗೆ ನಾಮನಿರ್ದೇಶನ

ಭಾರತ ಕೇಂದ್ರಿತ, ಋತುಸ್ರಾವದ ಕುರಿತಾದ ಸಿನಿಮಾ, "ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್" ಎಂಬ ಸಿನಿಮಾ ಆಸ್ಕರ್ ಗೆ ನಾಮನಿರ್ದೇಶನಗೊಂಡಿದೆ.
India-centric film on menstruation gets nominated for Oscar
India-centric film on menstruation gets nominated for Oscar
ಲಾಸ್ ಏಂಜಲೀಸ್: ಭಾರತ ಕೇಂದ್ರಿತ, ಋತುಸ್ರಾವದ ಕುರಿತಾದ ಸಿನಿಮಾ, "ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್" ಎಂಬ ಸಿನಿಮಾ ಆಸ್ಕರ್ ಗೆ ನಾಮನಿರ್ದೇಶನಗೊಂಡಿದೆ. 
ಆಸ್ಕರ್  ಗೆ ನಾಮನಿರ್ದೇಶನಗೊಂಡಿರುವ  ಸಿನಿಮಾಗಳ ಪಟ್ಟಿ ಜ.22 ರಂದು ಘೋಷಣೆಯಾಗಿದ್ದು ಶಾರ್ಟ್ ಸಬ್ಜೆಕ್ಟ್ ವಿಭಾಗದಲ್ಲಿ ಆಯ್ಕೆಯಾಗಿರುವ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ  ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್ ಸಿನಿಮಾ ಸ್ಥಾನ ಪಡೆದಿದೆ.  ಗುಣೀತ್ ಮೊಂಗಾ ನಿರ್ಮಾಣ ಮಾಡಿದ್ದು,, ಮೋಂಗಾಸ್ ಎಂಟರ್ಟೈನ್ಮೆಂಟ್ ಸಹ ನಿರ್ಮಾಣವಿದೆ. 
ಸಿನಿಮಾ ಆಯ್ಕೆ ಮಾಡಿರುವ ಬಗ್ಗೆ ಮಾತನಾಡಿರುವ ಮೊಂಗಾ ನಮ್ಮ ನಿರೀಕ್ಷೆಗೂ ಮೀರಿದ್ದು ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತೀಯ ಮಹಿಳೆಯರು ಋತುಸ್ರಾವದ ಬಗ್ಗೆ ಸಾಮಾಜಿಕ ದೃಷ್ಟಿಕೋನದ ಕುರಿತಾಗಿದ್ದು, ನಿಜ ಜೀವನದಲ್ಲಿ ಪ್ಯಾಡ್ ಮ್ಯಾನ್ ಅರುಣಾಚಲಂ ಮುರುಗನಾಥನ್ ಬಗ್ಗೆಯೂ ಡಾಕ್ಯುಮೆಂಟರಿಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com