ಮೆಟ್ರೊದಲ್ಲಿ ಜೀವನ ಹುಡುಕ ಹೊರಟ ಐಶಾನಿ ಶೆಟ್ಟಿ

ನಟಿ ಐಶಾನಿ ಶೆಟ್ಟಿ ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನದಲ್ಲಿ ಬದಲಾಗಿದ್ದಾರೆ. ಅವರ ಇತ್ತೀಚಿನ ನಡುವೆ ...
ಚಿತ್ರದ ದೃಶ್ಯ
ಚಿತ್ರದ ದೃಶ್ಯ
Updated on

ನಟಿ ಐಶಾನಿ ಶೆಟ್ಟಿ ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನದಲ್ಲಿ ಬದಲಾಗಿದ್ದಾರೆ. ಅವರ ಇತ್ತೀಚಿನ ನಡುವೆ ಅಂತರವಿರಲಿ ಚಿತ್ರದಲ್ಲಿ ಶಾಕುಂತಲೆ ಸಿಕ್ಕಳು ಹಾಡು ಹಿಟ್ ಆಗಿತ್ತು. ಇದೀಗ ಮುಂದಿನ ಚಿತ್ರ ನಮ್ ಗಣಿ ಬಿ.ಕಾಂ ಪಾಸ್ ಒಪ್ಪಿಕೊಂಡಿದ್ದು ಅದನ್ನು ಅಭಿಷೇಕ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ ಮತ್ತು ಅವರೇ ನಾಯಕ ಕೂಡ.

ಕಿರು ಚಿತ್ರಗಳ ನಿರ್ದೇಶನ ಮೂಲಕ ಅನುಭವ ಗಳಿಸಿರುವ ಅಭಿಷೇಕ್ ಗಿದು ಬೆಳ್ಳಿತೆರೆಯಲ್ಲಿ ಮೊದಲ ಪ್ರಯೋಗ. ಮೆಟ್ರೊ ನಗರದಲ್ಲಿನ ಜೀವನ, ಇಲ್ಲಿ ಯುವಜನತೆ ಎದುರಿಸುವ ಸವಾಲುಗಳನ್ನು ಒಳಗೊಂಡ ಕಥೆಯಾಗಿರುತ್ತದೆ. ಅದನ್ನು ವಿನೋದ ರೀತಿಯಲ್ಲಿ ವಿವರಿಸಲಾಗಿದೆ. ಚಿತ್ರದ ಮೊದಲ ಶೆಡ್ಯೂಲ್ ಮುಗಿದಿದ್ದು ಎರಡನೇ ಭಾಗ ಫೆಬ್ರವರಿ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದರು ಐಶಾನಿ.

ಚಿತ್ರದಲ್ಲಿ ಎರಡು ರೀತಿಯಲ್ಲಿ ಐಶಾನಿ ಕಾಣಿಸಿಕೊಳ್ಳಲಿದ್ದಾರೆ. ಮೊದಲಿಗೆ ಶಾಲೆಯ ಹುಡುಗಿಯಾಗಿ ಮತ್ತು ನಂತರ ದೊಡ್ಡ ಹುಡುಗಿಯಾಗಿ. ನನ್ನ ಪಾತ್ರ ನಾಯಕನ ಜೀವನದಲ್ಲಿ ಬದಲಾವಣೆ ತರುತ್ತದೆ. ಒಂದು ಚಿತ್ರದಲ್ಲಿ ಎರಡು ಪಾತ್ರಗಳನ್ನು ನಿಭಾಯಿಸುವುದು ಖುಷಿ ಕೊಡುತ್ತದೆ ಎನ್ನುತ್ತಾರೆ.

ಬೃಂದಾವನ ಎಂಟರ್ ಪ್ರೈಸಸ್ ನಡಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ ಮತ್ತು ಜಹಂಗೀರ್ ಕೂಡ ನಟಿಸುತ್ತಿದ್ದಾರೆ. ವಿಕಾಸ್ ವಶಿಷ್ಟ ಅವರ ಸಂಗೀತವಿದೆ. ಹಿನ್ನಲೆ ಸಂಗೀತ ನೊಬಿಲ್ ಪೌಲ್ ಮತ್ತು ಛಾಯಾಗ್ರಹಣ ನಾಗರಾಜ್ ಅವರದ್ದು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com