ಮಠಾಶ್: ಇದು ಅಪನಗದೀಕರಣದ ನಂತರದ ಜೀವನ ಕಥನ

ಅಪನಗದೀಕರಣದಿಂಡಾಗಿ ಇಡಿ ದೇಶವೇ ದಿಗ್ಭ್ರಮೆಗೆ ಒಳಗಾಗಿದ್ದು ನಿಮಗೆಲ್ಲ ಗೊತ್ತಿದೆ. ಇದೀಗ ಅದೇ ವಿಷಯ ವಸ್ತುವನ್ನಿಟ್ಟುಕೊಂಡು ಚಿತ್ರವೊಂದರ....
ಮಠಾಶ್ ಚಿತ್ರದ ದೃಶ್ಯ
ಮಠಾಶ್ ಚಿತ್ರದ ದೃಶ್ಯ
Updated on
ಬೆಂಂಗಳುರು: ಅಪನಗದೀಕರಣದಿಂಡಾಗಿ ಇಡಿ ದೇಶವೇ ದಿಗ್ಭ್ರಮೆಗೆ ಒಳಗಾಗಿದ್ದು ನಿಮಗೆಲ್ಲ ಗೊತ್ತಿದೆ. ಇದೀಗ ಅದೇ ವಿಷಯ ವಸ್ತುವನ್ನಿಟ್ಟುಕೊಂಡು ಚಿತ್ರವೊಂದರ ತಯಾರಿಗೆ ಕನ್ನಡದ ನಿರ್ದೇಶಕರೊಬ್ಬರು ಮುಂದಾಗಿದ್ದಾರೆ. "ಲಾಸ್ಟ್ ಬಸ್" ನಿರ್ದೇಶಕ ಎಸ್. ಡಿ ಅರವಿಂದ್ ತಮ್ಮ ಮುಂದಿನ ಚಿತ್ರ "ಮಠಾಶ್" ಎಂದು ಘೋಷಿಸಿದ್ದು ಈ ಚಿತ್ರ ಅಪನಗದೀಕರಣದ ನಂತರದ ಪರಿಸ್ಥಿತಿಯನ್ನಾಧರಿಸಿದೆ ಎಂದಿದ್ದಾರೆ.
ಅಪನಗದೀಕರಣ ನಡೆದು ಎರಡು ವರ್ಷಗಲಾಗಿದ್ದರೂ ಇಂದಿಗೂ ಪ್ರತಿಯೊಬ್ಬ ಭಾರತೀಯನೂ ಒಂದಿಲ್ಲೊಂದು ರೀತಿಯಲ್ಲಿ ಪರಿಣಾಮವನ್ನೆದುರಿಸುತ್ತಿದ್ದಾನೆ.ಈ ಚಿತ್ರ ಇಅಡೆ ಪರಿಸ್ಥಿತಿಯನ್ನು ತೋರಿಸುವ ಕಾರಣ ಚಿತ್ರಪ್ರೇಮಿಗಳ ಮನ ಮುಟ್ಟಲಿದೆ ಎಂದು ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಇದು ಒಂದು ಕಾಮಿಡಿ ಥ್ರಿಲ್ಲರ್ ಕಥಾನಕ. ಒಂದು ಯುವಕ-ಯುವತಿಯರಿರುವ ಗುಂಪು ಊರಿಂದ ಊರಿಗೆ ತೆರಳಿ ನಿಷೇಧಿತ ಹಣವನ್ನುಚಲಾವಣೆಗೆ ಪ್ರಯತ್ನಿಸುತ್ತದೆ. ಆ ಮಧ್ಯೆ ಗುಂಪಿನ ಒಬ್ಬೊಬ್ಬರೇ ಸದಸ್ಯರು ಕಾಣೆಯಾಗುತ್ತಾ ಬರುತ್ತಾರೆ. ಇದು ಅವರಲ್ಲಿ ಗೊಂದಲ, ಆಘಾತ ಸೃಷ್ಟಿಸುತ್ತದೆ. ಇದು ಕಥೆ ಟ್ವಿಸ್ಟ್ ಆಗಿದೆ." ನಿರ್ದೇಶಕರು ಹೇಳಿದ್ದಾರೆ. ಚಿತ್ರದಲ್ಲಿ ಹಾಸ್ಯ, ಕೌಟುಂಬಿಕ ಸನ್ನಿವೇಶಗಳೂ ಸಮನಾಗಿದೆ."ಮಠಾಶ್" ನಲ್ಲಿ ಸಮರ್ಥ ನರಸಿಂಹರಾಜು, ರವಿಕಿರಣ್, ರಾಜೇಂದ್ರನ್, ರಜನಿ ಭಾರದ್ವಾಜ್, ಐಶ್ವರ್ಯ ಸಿಂಧೋಗಿ, ನಂದಗೋಪಾಲ್, ವೈದ್ಯನಾಥನ್ ಇನ್ನೂ ಮೊದಲಾದವರಿದ್ದಾರೆ. ಈ ಚಿತ್ರವು ರಾಘು ರಾಮನಕೊಪ್ಪ, ಗಣೇಶ್ ರಾಜ್ ಮತ್ತು ಬಾಲಾಜಿ ಮತ್ತಿತರನ್ನು ಸಹ ಒಳಗೊಂಡಿದೆ.
ಅಪನಗದಿಕರಣವನ್ನು ಹಾಸ್ಯಮಯವಾಗಿ ತೆರೆ ಮೇಲೆ ತರಲು ಹೇಗೆ ಸಾಧ್ಯವಾಗಿದೆ ಎಂದು ಕೇಳಲು  "ನಾವು ಸರ್ಕಾರದ ನೀತಿ ಬಗ್ಗೆ ಯಾವುದೇ ಕಮೆಂಟ್ ಮಾಡಿಲ್ಲ.ಹಾಗೆಯೇ ಜನ ಹಣದ ಹಿಂದೆ ಓಡುತ್ತಿದ್ದರು. ಇದಕ್ಕಾಗಿ ಅವರು ಹೇಗೆ ಮೋಸ, ವಂಚನೆ ಜಾಲ ಬೀಸುತ್ತಿದ್ದರು, ಹೇಗೆಲ್ಲಾ ಅದರಲ್ಲಿ ಸಿಕ್ಕಿಕೊಳ್ಳುತ್ತಿದ್ದರು?ಇದನ್ನು ತೋರಿಸುತ್ತಾ ನಾವೊಂದು ಹಾಸ್ಸ್ಯ, ಹಾಗೂ ಥ್ರಿಲ್ಲರ್ ಕಥಾನಕ ಹೇಳಿದ್ದೇವೆ" ಅರವಿಂದ್ ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com