ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ಲಿಪ್ ಲಾಕ್ ಅಂದ್ರೆ ಏನು? ಈ ಪದ ನನಗಿಷ್ಟವಾಗಲಿಲ್ಲ: ವಿಜಯ್ ದೇವರಕೊಂಡ

ದಕ್ಷಿಣ ಭಾರತದ ನಟರಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿ ಅಭಿನಯದ 'ಡಿಯರ್ ...
Published on
ಬೆಂಗಳೂರು: ದಕ್ಷಿಣ ಭಾರತದ ನಟರಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ  ಅಭಿನಯದ 'ಡಿಯರ್ ಕಾಮ್ರೇಡ್' ಸಿನಿಮಾ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. 
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿತು. ಈ ಸಂದರ್ಭದಲ್ಲಿ ಚಿತ್ರದಲ್ಲಿ ಭಾರೀ ಸದ್ದು ಮಾಡಿರುವ ರಶ್ಮಿಕಾ ಮತ್ತು ವಿಜಯ್ ಅವರ ಲಿಪ್ ಲಾಕ್ ಬಗ್ಗೆ ಪ್ರಶ್ನೆ ಎದುರಾಯಿತು. 
ಪ್ರಶ್ನೆ ಎದುರಾದಾಗಲೇ ಕಿರಿಕಿರಿ ಅನುಭವಿಸಿದಂತೆ ಕಂಡುಬಂದ ವಿಜಯ್ ದೇವರಕೊಂಡ, "ಲಿಪ್ ಲಾಕ್ ಅಂದ್ರೆ ಏನು? ಈ ಪದ ನನಗಿಷ್ಟವಾಗಲಿಲ್ಲ. ಅಳುವುದು, ಕೋಪ ವ್ಯಕ್ತಪಡಿಸುವುದು, ಪ್ರೀತಿಯಿಂದ ಚುಂಬಿಸುವುದು ಇವೆಲ್ಲಾ ಚಿತ್ರದಲ್ಲಿ ಪಾತ್ರಗಳ ಭಾವನೆಗಳು. ಇದು ಲಿಪ್ಸ್ ಲಾಕಿಂಗ್ ಅಲ್ಲ. ಈ ಪದ ಕೇಳಿದಾಗ ನನಗೆ ತುಂಬಾ ಬೇಜಾರುತ್ತದೆ. ಇದೇನಿದು ಲಿಪ್ ಲಾಕ್ ಎಂದುಕೊಂಡಿದ್ದೇನೆ. ಚಿತ್ರದಲ್ಲಿ ಕಿಸ್ಸಿಂಗ್ ಭಾವನಾತ್ಮಕ ಅಂಶ. ಅದಕ್ಕೆ ಬೆಲೆ ಕೊಡೋಣ" ಎಂದು ಹೇಳಿದರು.
"ಕಿಸ್ಸಿಂಗ್ ಸೀನ್ ಬಗ್ಗೆ ವಿವರಣೆ ನೀಡಬೇಕಾದ ಅಗತ್ಯವಿಲ್ಲ. ಆಯಾ ಪಾತ್ರ ಬಯಸಿದಂತೆ ನಾವು ಮಾಡಿದ್ದೇವೆ. ಸಿನಿಮಾವನ್ನು ವಿಮರ್ಶಿಸಿ, ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಹೇಳುವ ಅಧಿಕಾರ ಎಲ್ಲರಿಗೂ ಇದೆ. ಆದರೆ ಆ ಪಾತ್ರ ಹಾಗ್ಯಾಕೆ, ಹೀಗೇಕೆ ಎಂಬ ಬಗ್ಗೆ ನಾವು ವಿವರಣೆ ನೀಡಬೇಕಾಗಿಲ್ಲ. ಅದಕ್ಕೆ ನ್ಯಾಯ ಸಲ್ಲಿಸುವುದಷ್ಟೇ ನಮ್ಮ ಕೆಲಸ" ಎಂದರು.
"ಅರ್ಜುನ್ ರೆಡ್ಡಿ ನೋಡಿದ ಬಳಿಕ ಜನ ನನ್ನನ್ನು ನೋಡಿ ಭಯ ಬೀಳುವಂತಾಯಿತು. ಅದೊಂದು ಪಾತ್ರ ಎಂಬುದನ್ನೂ ಮರೆತರು. ನಿಜ ಜೀವನದಲ್ಲಿ ನಾನು ಸಿಗರೇಟ್ ಸಹ ಸೇದಲ್ಲ. ಈಗಲೂ ಅಷ್ಟೇ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಿಸ್ಸಿಂಗ್ ಎಂದೇ ಭಾವಿಸುತ್ತಾರೆ. ಅದು ಆ ಪಾತ್ರಗಳು ಎಂದುಕೊಳ್ಳಲ್ಲ. ಪಾತ್ರಗಳನ್ನು ಪಾತ್ರಗಳ ತರಹ ನೋಡಿ. ನಿಜ ಜೀವನಕ್ಕೆ ಹೋಲಿಸಲು ಹೋಗಬೇಡಿ" ಎಂದು ವಿಜಯ್ ದೇವರಕೊಂಡ ಕೇಳಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ''ಟ್ರೇಲರ್ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಇದೊಂದು ಭಿನ್ನವಾದ ಸಬ್ಜೆಕ್ಟ್ ಇರುವ ಸಿನಿಮಾ ಅಂತ. ಎಲ್ಲಾ ಎಮೋಷನ್ಸ್ ಇದೆ. ಆದರೂ ಕಿಸ್ಸಿಂಗ್ ಸೀನ್ ಬಗ್ಗೆಯೇ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಚಿತ್ರದಲ್ಲಿ ಬರುವ ಭಾವನಾತ್ಮಕ ಅಂಶಗಳಲ್ಲಿ ಅದೂ ಒಂದು ಅಷ್ಟೇ" ಎಂದರು. 
ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆ ಆಗುತ್ತಿರುವ ಕಾರಣ ಕನ್ನಡದಲ್ಲಿ ನಾನೇ ಡಬ್ಬಿಂಗ್ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಇದನ್ನು ಶೂಟಿಂಗ್ ಮಾಡದಿದ್ದರೂ ಕನ್ನಡ ನೆಲ, ಭಾಷೆ, ಸಂಸ್ಕೃತಿಗೆ ತಕ್ಕವಾಗಿ ಚಿತ್ರ ತೆಗೆಯಲಾಗಿದೆ. ಹೈದರಾಬಾದ್, ಕಾಕಿನಾಡ, ಲಡಾಕ್‍ನಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದರು.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈ ಹಿಂದೆ ಅಭಿನಯಿಸಿದ್ದ ಗೀತ ಗೋವಿಂದಂ ಚಿತ್ರದಲ್ಲಿ ಕೂಡ ಲಿಪ್ ಲಾಕ್ ದೃಶ್ಯಗಳಿದ್ದವು. ಆ ಸಂದರ್ಭದಲ್ಲಿ ಕೂಡ ಅದು ಭಾರೀ ಸದ್ದು ಮಾಡಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com