ರಶ್ಮಿಕಾ ಮಂದಣ್ಣ. ವಿಜಯ್ ದೇವರಕೊಂಡ
ಸಿನಿಮಾ ಸುದ್ದಿ
ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಪ್ರಶ್ನೆ ಎದುರಾದಾಗ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರ ದಕ್ಷಿಣ ಭಾರತದ ...
ಬೆಂಗಳೂರು: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಏಕಕಾಲಕ್ಕೆ ಇದೇ ತಿಂಗಳ 26ಕ್ಕೆ ಬಿಡುಗಡೆಯಾಗುತ್ತಿದೆ.
ಈ ಸಂಬಂಧ ಚಿತ್ರತಂಡ ಪ್ರಚಾರಕ್ಕಾಗಿ ಬೆಂಗಳೂರಿಗೆ ನಿನ್ನೆ ಆಗಮಿಸಿ ಚಿತ್ರದ ಬಗ್ಗೆ ಮಾಹಿತಿ ನೀಡಿತು. ಚಿತ್ರದ ನಾಯಕ-ನಾಯಕಿ ರಶ್ಮಿಕಾ ಮತ್ತು ವಿಜಯ್ ಮಾಧ್ಯಮಗಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಸಹಜವಾಗಿ ರಕ್ಷಿತ್ ಶೆಟ್ಟಿಯವರೊಂದಿಗೆ ಬ್ರೇಕಪ್ ವಿಚಾರವಾಗಿ ಪ್ರಶ್ನೆ ಎದುರಾಯಿತು.
ಗೀತಗೋವಿಂದಂ ಚಿತ್ರದ ನಂತರ ನೀವು ಮತ್ತು ರಕ್ಷಿತ್ ಶೆಟ್ಟಿ ಬ್ರೇಕಪ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದವು. ನಂತರ ಎಲ್ಲಿಯೂ ನೀವು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ, ನಿಮ್ಮ ಮಧ್ಯೆ ಏನಾಯಿತು ಎಂಬ ಬಗ್ಗೆ ನೀವಿಬ್ಬರೂ ಪ್ರತಿಕ್ರಿಯೆ ಕೊಡಲಿಲ್ಲ, ನಿಮ್ಮ ಸಂಬಂಧ ಹೇಗಿದೆ ಈಗ ಹೇಳಿ ಎಂದಾಗ ರಶ್ಮಿಕಾ ಮಂದಣ್ಣ ವಿಷಯವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದರು.
ಅವರು ಪ್ರಶ್ನೆ ಕೇಳುವಾಗ ಮತ್ತಿಬ್ಬರ ಫೋನ್ ಗಳು ಹೇಗೆ ಹೊರಬಂದವು, ಪ್ರಶ್ನೆ ಕೇಳಿದ್ದು ಒಳ್ಳೆಯದಾಯಿತು ಎಂಬ ಭಾವನೆ ಅವರಲ್ಲಿ ನೀವು ಗಮನಿಸಿದಿರಾ ಎಂದು ಪಕ್ಕದಲ್ಲಿ ಕುಳಿತ ವಿಜಯ್ ದೇವರಕೊಂಡ ಅವರಲ್ಲಿ ರಶ್ಮಿಕಾ ಕೇಳಿದರು.
ಆಗ ಮಧ್ಯೆ ಪ್ರವೇಶಿಸಿ ಮಾತನಾಡಿದ ವಿಜಯ್ ದೇವರಕೊಂಡ ನನಗೆ ನಿಮ್ಮ ಪ್ರಶ್ಮೆ ಅಷ್ಟು ಅರ್ಥವಾಗಲಿಲ್ಲ, ಆದರೆ ಇದು ಯಾರಿಗೂ ಸಂಬಂಧಪಟ್ಟ ವಿಷಯವಲ್ಲ, ಇಲ್ಲಿ ವೈಯಕ್ತಿಕ ಪ್ರಶ್ನೆ ಕೇಳುವುದು ಅಷ್ಟು ಒಳ್ಳೆಯದಲ್ಲ ಎಂದರು. ಆಗ ಮಾತು ಮುಂದುವರಿಸಿದ ರಶ್ಮಿಕಾ, ಪ್ರಶ್ನೆ ದೀರ್ಘವಾಗಿದ್ದರಿಂದ ನನಗೆ ಸಹ ಅರ್ಥವಾಗಿಲ್ಲ. ಇದಕ್ಕೆ ಏನು ಉತ್ತರ ಹೇಳಬೇಕೆಂದು ನನಗೆ ಗೊತ್ತಾಗುತ್ತಿಲ್ಲ ಎಂದರು.
ನಿಮ್ಮ ಮತ್ತು ರಕ್ಷಿತ್ ಬಗ್ಗೆ ಕೇಳಿಬರುತ್ತಿರುವ ಗಾಸಿಪ್ ಬಗ್ಗೆ ಏನು ಹೇಳುತ್ತೀರಿ ಎಂದು ಮಾಧ್ಯಮದವರು ಮುಂದುವರಿದು ಕೇಳಿದಾಗ, ಇದು ನಿಮಗೆ ಕೇಳಿಬಂದ ಗಾಸಿಪ್ ಅಲ್ಲವೇ, ಹಾಗಾಗಿ ಇದು ಗಾಸಿಪ್ ಆಗಿಯೇ ತೆಗೆದುಕೊಳ್ಳಿ. ಈ ವಿಷಯದಲ್ಲಿ ಯಾರು ಕೂಡ ಮುಂದೆ ಬಂದು ನೋಡಿ ಇದು ವಿಷಯ ಹೀಗೆ ಆಗಿದೆ ಎಂದು ಹೇಳಿಲ್ಲವಲ್ಲಾ, ಜನರು ಏನು ಹೇಳುತ್ತಾರೆ, ಅದನ್ನು ಹೇಳುತ್ತಾರೆ ಅಷ್ಟೆ ಎಂದರು ರಶ್ಮಿಕಾ.
ನಿಮ್ಮ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೇಳುತ್ತಾರೆ. ಅವರಿಗೆ ಏನು ಉತ್ತರ ಕೊಟ್ಟಿದ್ದೀರಾ ಎಂದಾಗ, ನಮ್ಮ ಅಭಿಮಾನಿಗಳು ನಮ್ಮ ಜೊತೆ ಮಸ್ತ್ ಮಜಾದಲ್ಲಿದ್ದಾರೆ ಬಿಡಿ, ನಾನು ಯಾವಾಗಲು ಪ್ರತಿ ಕ್ಷಣ ಅವರ ಜೊತೆ ಮಾತನಾಡುತ್ತಿರುತ್ತೀನಿ, ಮೆಸೇಜ್ ಮಾಡುತ್ತಿರುತ್ತೇನೆ, ನಮ್ಮ ನಡುವೆ ಒಳ್ಳೆಯ ಬಾಂಧವ್ಯವಿದೆ ಎಂದಷ್ಟೇ ಹೇಳಿ ಮುಗಿಸಿದರು.
ಇದಕ್ಕೂ ಮುನ್ನ ರಕ್ಷಿತ್ ಶೆಟ್ಟಿ ಜೊತೆ ಫಿಲ್ಮ್ ಮಾಡ್ತೀರ ಎಂದು ಕೇಳಿದಾಗ, ನೋಡೋಣ ಎಂದಷ್ಟೇ ರಶ್ಮಿಕಾ ಉತ್ತರಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ