ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್ ಭೇಟಿಯಾದ ಕಿಚ್ಚ ಸುದೀಪ್
ಸಿನಿಮಾ ಸುದ್ದಿ
ನಿಜವಾದ ಜಂಟಲ್ ಮನ್- ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್ ಭೇಟಿಯಾದ ಕಿಚ್ಚ ಸುದೀಪ್ ಟ್ವೀಟ್
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಅವರನ್ನು ಭೇಟಿಯಾಗಿದ್ದಾರೆ.
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಅವರನ್ನು ಭೇಟಿಯಾಗಿದ್ದಾರೆ.
ಈಗ ತಾನೆ "ಪೈಲ್ವಾನ್" ಚಿತ್ರೀಕರಣ ಮುಗಿಸಿರುವ ನಟ "ಕೋಟಿಗೊಬ್ಬ-3" ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳುವ ಮುನ್ನ ಮುಂಬೈನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅವರನ್ನು ಭೇಟಿಯಾಗಿದ್ದಾರೆ.
ಅಜಯ್ ದೇವಗನ್ ಜತೆಗೆ ತೆಗೆಸಿಕೊಂಡ ಚಿತ್ರವನ್ನು ತಮ್ಮ ಟ್ವಿಟ್ತರ್ ನಲ್ಲಿ ಹಂಚಿಕೊಂಡಿರುವ ಕಿಚ್ಚ "ನಿಜವಾಗಿಯೂ ಓರ್ವ ಸುಸಂಸ್ಕೃತ ನಟ, ನಿಮ್ಮನ್ನು ಬೇಟಿಯಾಗಿರುವುದು ಸಂತಸ ತಂದಿದೆ" ಎಂದು ಬರೆದುಕೊಂಡಿದ್ದಾರೆ.
ಇನ್ನು ಅಜಯ್ ದೇವಗನ್ ಅವರನ್ನು ಸುದೀಪ್ ಭೇಟಿಯಾಗಿದ್ದ ಕುರಿತಂತೆ ಸುದೀಪ್ ಪತ್ನಿ ಪ್ರಿಯಾ ಸಹ ಟ್ವೀಟ್ ಮಾಡಿ "ನಟ ಅಜಯ್ ದೇವಗನ್ ಅವರನ್ನು ಭೇಟಿಯಾಗಿದ್ದು ಖುಷಿಯಾಗಿದೆ, ಆದರೆ ಅವರ ಪತ್ನಿಯನ್ನೂ ಭೇಟಿಯಾಗಬಹುದಿತ್ತು, ನೀವು ಕಾಜೋಲ್ ಅವರ ದೊಡ್ಡ ಫ್ಯಾನ್ ಆಗಿದ್ದಿರಿ" ಎಂದು ಕಾಲೆಳೆದಿದ್ದಾರೆ.
A true Gentleman.
Was a previlige meeting u @ajaydevgn sir.
Moment Treasured.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ