ವರಮಹಾಲಕ್ಷ್ಮಿ ಹಬ್ಬಕ್ಕೆ ಡಬಲ್ ಧಮಾಕಾ! 'ಕೆಂಪೇಗೌಡ'ನಾಗಿ ಕೋಮಲ್, ರಾಜ್ ಶೆಟ್ಟಿಯ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ತೆರೆಗೆ

ಮುನಿರತ್ನ ನಿರ್ಮಾಣದ ಬಿಗ್ ಬಜೆಟ್ ಚಿತ್ರ "ಕುರುಕ್ಷೇತ್ರ" ವರಮಹಾಲಕ್ಷ್ಮಿ ಹಬ್ಬಕ್ಕಿಂತ ಒಂದು ವಾರದ ಮುನ್ನ ಬಿಡುಗಡೆಯಾಗಲು ಸಿದ್ದವಾಗಿದೆ. ಆದರೆ ಈಗ ಕನ್ನಡದ ಇನ್ನೆರಡು ಬಹುನಿರೀಕ್ಷಿತ ಚಿತ್ರಗಳು.....
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ದೃಶ್ಯ
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ದೃಶ್ಯ
Updated on
ಮುನಿರತ್ನ ನಿರ್ಮಾಣದ ಬಿಗ್ ಬಜೆಟ್ ಚಿತ್ರ "ಕುರುಕ್ಷೇತ್ರ" ವರಮಹಾಲಕ್ಷ್ಮಿ ಹಬ್ಬಕ್ಕಿಂತ ಒಂದು ವಾರದ ಮುನ್ನ ಬಿಡುಗಡೆಯಾಗಲು ಸಿದ್ದವಾಗಿದೆ. ಆದರೆ ಈಗ ಕನ್ನಡದ ಇನ್ನೆರಡು ಬಹುನಿರೀಕ್ಷಿತ ಚಿತ್ರಗಳು ವರಮಹಾಲಕ್ಷ್ಮಿ ಹಬ್ಬವಾದ ಆ.9ಕ್ಕೆ ತೆರೆಗೆ ಬರುವುದಾಗಿ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಕೋಮಲ್ ಕುಮಾರ್ ಅವರ "ಕೆಂಪೇಗೌಡ 2" ಮತ್ತು ರಾಜ್ ಬಿ ಶೆಟ್ಟಿಯ :"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಚಿತ್ರಗಳು ವರಮಹಾಲಕ್ಶ್ಮಿಯ ಶುಕ್ರವಾರ ತೆರೆಗೆ ಬರಲಿದೆ.\
"ಗೋವಿಂದಾಯ ನಮಃ" ಖ್ಯಾತಿಯ ಕೋಮಲ್ ಕುಮಾರ್ ಅವರ "ಕೆಂಪೇಗೌಡ 2" ಒಂದು ಬ್ಲಾಕ್ ಬಸ್ಟರ್ ಚಿತ್ರವಾಗಲಿದ್ದು ಇದರಲ್ಲಿ ಕೋಮಲ್ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಲೀಸ್ ಪಾತ್ರದಲ್ಲಿ ಕೋಮಲ್ ಅಭಿನಯಿಸಿರುವ ಈ ಚಿತ್ರಕ್ಕೆ ಶಂಕರ್ ಗೌಡ ಆಕ್ಷನ್ ಕಟ್ ಹೇಳಿದ್ದಾರೆ.ಎ ವಿನೋದ್ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ.
 ರಾಜ್ ಬಿ ಶೆಟ್ಟಿ ಅವರ "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಚಿತ್ರಸುಜಯ್ ಶಾಸ್ತ್ರಿ ನಿರ್ದೇಶನದ ಮೊದಲ ಚಿತ್ರವಾಗಿದೆ. ಇದರಲ್ಲಿ ಕವಿತಾ ಗೌಡ ನಾಯಕಿಯಾಗಿದ್ದಾರೆ.  ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಮಾಡಿದ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಮಂಡಳಿ ಯು / ಎ ಪ್ರಮಾಣಪತ್ರ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com