ಚಿತ್ರೋತ್ಸವದತ್ತ 'ಗಂಟುಮೂಟೆ' ಪ್ರಯಾಣ!

ಪ್ರಕಾಶ್ ಬೆಳವಾಡಿ ಅವರ ಪುತ್ರಿ ತೇಜು ಅಭಿನಯದ ರೂಪಾ ರಾವ್ ನಿರ್ದೇಶನದ ಚಿತ್ರ ಗಂಟುಮೂಟೆ...
ಚಿತ್ರದ ದೃಶ್ಯ
ಚಿತ್ರದ ದೃಶ್ಯ
ಪ್ರಕಾಶ್ ಬೆಳವಾಡಿ ಅವರ ಪುತ್ರಿ ತೇಜು ಅಭಿನಯದ ರೂಪಾ ರಾವ್ ನಿರ್ದೇಶನದ ಚಿತ್ರ ಗಂಟುಮೂಟೆ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಇತ್ತೀಚೆಗೆ ಪ್ರದರ್ಶನ ಕಂಡಿದ್ದ ಗಂಟುಮೂಟೆ ಚಿತ್ರಕ್ಕೆ ಇತ್ತೀಚೆಗೆ ಉತ್ತಮ ಚಿತ್ರಕಥೆ ಪ್ರಶಸ್ತಿ ಸಿಕ್ಕಿತ್ತು. ಒಟ್ಟಾವಾ ಭಾರತೀಯ ಚಿತ್ರೋತ್ಸವ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು. ಚಿತ್ರ ಕೆನಡಾದಲ್ಲಿ ಪ್ರದರ್ಶನ ಕಾಣಲಿದೆ.
ಇದೊಳ್ಳೆ ರಾಮಾಯಣ ಚಿತ್ರದಲ್ಲಿ ಪ್ರಕಾಶ್ ರೈ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತೇಜು ಗಂಟುಮೂಟೆ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿದ್ದಾರೆ. ನಿಶ್ಚಿತ್ ಕೊರೊಡಿ ನಾಯಕನಾಗಿ ಕಾಣಿಸಿಕೊಂಡಿರುವ ಗಂಟುಮೂಟೆಯಲ್ಲಿ ಭಾರ್ಗವ್ ರಾಜು, ಸೂರ್ಯ ವಶಿಷ್ಟ, ಶರತ್ ಗೌಡ, ಶ್ರೀರಂಗ ಪ್ರಮುಖ ಪಾತ್ರದಲ್ಲಿದ್ದಾರೆ.
ಹೈಸ್ಕೂಲ್ ಮಕ್ಕಳ ಕಥೆಯನ್ನಾಧರಿಸಿದ ಚಿತ್ರದಲ್ಲಿ ಬೆಂಗಳೂರಿನಲ್ಲಿ 1990ರ ದಶಕದ ಚಿತ್ರಣವನ್ನು ತೋರಿಸಲಾಗಿದೆ. 16 ವರ್ಷದ ಹುಡುಗಿಯೊಬ್ಬಳ ಜೀವನದ ಕಥೆಯಾಗಿದೆ. ಆಕೆ ತನ್ನನ್ನು ತಾನು ಅರ್ಥ ಮಾಡಿಕೊಳ್ಳುವ ರೀತಿ, ಶಿಕ್ಷಣದ ಒತ್ತಡ, ಸ್ಪರ್ಧಾತ್ಮಕ ಜಗತ್ತು ಮತ್ತು ಆಕೆಯ ಮೊದಲ ಪ್ರೀತಿ, ಪ್ರೇಮ, ಪ್ರಣಯವನ್ನು ಒಳಗೊಂಡಿದೆ. 
ನಟನೆಗಾಗಿ ಐಟಿ ಉದ್ಯೋಗವನ್ನು ತೊರೆದಿರುವ ತೇಜು ಹಲವು ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ದೇಶನ, ಸಹ ನಿರ್ದೇಶನ ಮಾಡಿದ್ದಾರೆ. ಅವರ ವೆಬ್ ಸರಣಿಗೆ ನ್ಯೂಯಾರ್ಕ್ ವೆಬ್ ಫೆಸ್ಟ್ 2016ರಲ್ಲಿ ಪ್ರಶಸ್ತಿ ಸಿಕ್ಕಿದೆ. ಗಂಟುಮೂಟೆ ಚಿತ್ರಕ್ಕೆ ಅಮೆಯುಕ್ತಿ ಸ್ಟುಡಿಯೊಸ್ ಬಂಡವಾಳ ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com