ರಮೇಶ್ ಅರವಿಂದ್ ನಿರ್ದೇಶನದ '100' ಸಿನಿಮಾಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ

ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾ ನಿರ್ದೇಶಕ ಆಕಾಶ್ ಶ್ರಿವತ್ಸ ಎಡಿಟರ್ ಆಗಿ ಬದಲಾಗಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾಗೆ ...
ರಮೇಶ್ ಅರವಿಂದ್ ಮತ್ತು ಆಕಾಶ್ ಶ್ರೀವತ್ಸ
ರಮೇಶ್ ಅರವಿಂದ್ ಮತ್ತು ಆಕಾಶ್ ಶ್ರೀವತ್ಸ
Updated on
ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾ ನಿರ್ದೇಶಕ ಆಕಾಶ್ ಶ್ರಿವತ್ಸ ಎಡಿಟರ್ ಆಗಿ  ಬದಲಾಗಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾಗೆ ಆಕಾಶ್ ಸಂಕಲನಕಾರ ಆಗಿ ಕೆಲಸ ಮಾಡುತ್ತಿದ್ದಾರೆ.
ರಮೇಶ್ ಅರವಿಂದ ಅವರನ್ನು 12 ವರ್ಷಗಳಿಂದ ನಾನು ಬಲ್ಲೆ, ನನಗೆ ಎಡಿಟಿಂಗ್ ನಲ್ಲಿ ಉತ್ತಮ ಐಡಿಯಾಗಳಿವೆ ಎಂದು ಅವರಿಗ ಗೊತ್ತಿದೆ, ಎಡಿಟ್ ಡೆಸ್ಕ್ ನಲ್ಲಿ ನಾನು ಉತ್ತಮ ಕೆಲಸ ಮಾಡಬಲ್ಲೆ ಎಂದು ಅವರಿಗೆ ಅನಿಸಿದೆ, ನನ್ನ ಕ್ರಿಯೆಟಿವಿಟಿ ಬಗ್ಗೆ ತಿಳಿದಿರುವ ರಮೇಶ್ ನನ್ನನ್ನು ಎಡಿಟರ್ ಮಾಡಿದ್ದಾರೆ ಎಂದು ಆಕಾಶ್ ತಿಳಿಸಿದ್ದಾರೆ.
ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸುತ್ತಿರುವ 100 ಸಿನಿಮಾಗೆ ಕೆಜಿಎಫ್ ಸಿನಿಮಾ ಖ್ಯಾತಿಯ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಅಮರ್ ಸಿನಿಮಾದಲ್ಲಿ ಅಸೋಸಿಯೇಟೆಡ್ ಆಗಿದ್ದ ಸತ್ಯ ಹೆಗಡೆ ಛಾಯಾಗ್ರಹಣವಿದೆ, ರಚಿತಾ ರಾಮ್ ಮತ್ತು ಪೂರ್ಣ ನಟಿಸಿರುವ ಈ ಸಿನಿಮಾದಲ್ಲಿ ನಟಿಸಿದ್ದಾರೆ, ಬೆಂಗಳೂರಿನ ಕೆಲೆವೆಡೆ ಶೂಟಿಂಗ್ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com