ವೀರು ಮಲ್ಲಣ್ಣ, ಟಿ ಕೆ ದಯಾನಂದ, ಮನ್ಸೂರೆ
ವೀರು ಮಲ್ಲಣ್ಣ, ಟಿ ಕೆ ದಯಾನಂದ, ಮನ್ಸೂರೆ

ಲವ್ ಸ್ಟೋರಿಯ ಕಮರ್ಷಿಯಲ್ ಚಿತ್ರ ನಿರ್ದೇಶನ ಮಾಡಲಿರುವ ನಿರ್ದೇಶಕ ಮನ್ಸೂರೆ

ನಿರ್ದೇಶಕ ಮನ್ಸೂರೆ ಮತ್ತು ಬರಹಗಾರ ಟಿ ಕೆ ದಯಾನಂದ್ ಆಧುನಿಕ ಜೀವನಕ್ಕೆ ಸಂಬಂಧಪಟ್ಟಂತೆ...
Published on
ನಿರ್ದೇಶಕ ಮನ್ಸೂರೆ ಮತ್ತು ಬರಹಗಾರ ಟಿ ಕೆ ದಯಾನಂದ್ ಆಧುನಿಕ ಜೀವನಕ್ಕೆ ಸಂಬಂಧಪಟ್ಟಂತೆ ರೊಮ್ಯಾಂಟಿಕ್ ಕಥೆಯೊಂದಿಗೆ ಸಿನಿಮಾ ತಯಾರಿಸಲು ಮುಂದಾಗಿದ್ದಾರೆ.
ನಾತಿಚರಾಮಿ ಚಿತ್ರದ ನಿರ್ದೇಶಕ ಮನ್ಸೂರೆ  ಬೆಲ್ ಬಾಟಮ್ ಚಿತ್ರಕ್ಕೆ ಕಥೆ ಬರೆದ ಟಿ ಕೆ ದಯಾನಂದ್ ಒಂದಾಗುತ್ತಿದ್ದಾರೆ. ಮನ್ಸೊರೆಯವರು ಕಮರ್ಷಿಯಲ್ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದು ಇದೇ ಮೊದಲು.
ಆಧುನಿಕ ಜಗತ್ತಿನಲ್ಲಿ ಪ್ರೀತಿಯ ಬಗ್ಗೆ ತಮ್ಮ ಅರ್ಥ ಮತ್ತು ಅಭಿಪ್ರಾಯಗಳ ಬಗ್ಗೆ ದಯಾನಂದ್ ಅವರು ಸುಮಾರು 45 ಯುವತಿಯರನ್ನು ಮಾತನಾಡಿಸಿದ್ದಾರಂತೆ.
2009ರಲ್ಲಿ ನನ್ನ ಬಳಿ ಹಿಂದಿಯ ರಂಗ್ ದೆ ಬಸಂತಿಯಂತ ಕಥೆ ಇತ್ತು. ಆದರೆ ಬಜೆಟ್ ಕೊರತೆಯಿಂದ ಅದು ಮುಂದಕ್ಕೆ ಹೋಗಲಿಲ್ಲ. ಹೊಸಬರು ಕಮರ್ಷಿಯಲ್ ಚಿತ್ರಕ್ಕೆ ಬಂಡವಾಳ ಹಾಕಲು ಮುಂದೆ ಬರುವುದು ಕಡಿಮೆ. ಹಾಗಾಗಿ ನಾನು ಹರಿವು ಚಿತ್ರವನ್ನು ಕೈಗೆತ್ತಿಕೊಂಡೆ. ಇದೀಗ ಕಮರ್ಷಿಯಲ್ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದೇನೆ. ದಯಾನಂದ್ ಮತ್ತು ನಾನು ದೀರ್ಘ ಕಾಲದ ಸ್ನೇಹಿತರು. ವೀರು ಮಲ್ಲಣ್ಣ ನಿರ್ಮಾಣದ ಹೊಣೆ ಹೊತ್ತುಕೊಳ್ಳಲಿದ್ದಾರೆ ಎಂದು ಮನ್ಸೊರೆ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com