ನನ್ನಲ್ಲಿನ ಸೃಜನಶೀಲತೆ ಸತತವಾಗಿ ವಿಕಾಸವಾಗುತ್ತಿದೆ: ಪುನೀತ್ ರಾಜ್‌ಕುಮಾರ್

ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದಿಗೂ ಚಿರಯುವಕನಾಗಿಯೇ ಕಾಣಿಸುತ್ತಾರೆ.ಮಾರ್ಚ್ 17ಕ್ಕೆ ಅಭಿಮಾನಿಗಳ ಪಾಲಿನ 'ಅಪ್ಪು' ಗೆ ಜನ್ಮ ದಿನದ ಸಂಭ್ರಮ.
ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದಿಗೂ ಚಿರಯುವಕನಾಗಿಯೇ ಕಾಣಿಸುತ್ತಾರೆ.ಮಾರ್ಚ್ 17ಕ್ಕೆ ಅಭಿಮಾನಿಗಳ ಪಾಲಿನ 'ಅಪ್ಪು' ಗೆ ಜನ್ಮ ದಿನದ ಸಂಭ್ರಮ. ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಲು ಸಿದ್ದತೆ ನಡೆಸಿದ್ದರೆ ಪುನೀತ್ ತಾವು ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದ "ಯುವರತ್ನ" ಚಿತ್ರದಲಿ ಕಾಲೇಜು ಹುಡುಗನ ಪಾತ್ರದ ಮೂಲಕ ತಾವು ಮತ್ತೊಮ್ಮೆ ಯುವಕರಾಗಿ ಮಿಂಚುತ್ತಿದ್ದಾರೆ.
"ನಾನೀಗ ಮಂಗಳೂರು ವಿಶ್ವವಿದ್ಯಾನಿಕ್ಲಯದಲ್ಲಿ ಶೂಟಿಂಗ್ ನಡೆಸಿದ್ದು ಅದೊಂದು  ಅದ್ಭುತವಾದ ಅನುಭವ, ಧಾರವಾಡದಲ್ಲಿನ ಕಾಲೇಜಿನಲ್ಲಿ ನಡೆದ ಶೂಟಿಂಗ್ ಸಹ ಅನನಗಷ್ಟೇ ಆನಂದವನ್ನು ನೀಡಿದೆ.ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ತೊಡಗಿಸಿಕೊಂಡಾಗ ನನಗೆ  ಸಮಯ ಸರಿದದ್ದೇ ತಿಳಿಯಲಿಲ್ಲ. ನಾನು ಮತ್ತೆ ನನ್ನ ಹಿಂದಿನ ಜೀವನಕ್ಕೆ ಮರಳಿದ್ದೆನು"ಅವರು ಹೇಳುತ್ತಾರೆ.
ತಾವು ಉತ್ತಮ ಕಥಾನಕವುಳ್ಳ ಚುತ್ರಗಳ ಆಯ್ಕೆ ಮಾಡಿಕೊಳ್ಳುವಲ್ಲಿ ಪವರ್ ಸ್ಟಾರ್ ಎಂದಿಗೂ ಹಿಂದೆ ಬಿದ್ದಿಲ್ಲ. ಹಾಗೆಯೇ ಮುಂದಿನ ದಿನದಲ್ಲಿ ವಜ್ರೇಶ್ವರಿ ಕಂಬೈನ್ಸ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಪ್ರೊಡಕ್ಷನ್ಸ್ (ಪಿಆರ್ ಕೆ) ನಡಿಯಲ್ಲಿ ಹೆಚ್ಚು ಹೆಚ್ಚು ಚಿತ್ರ ನಿರ್ಮಾಣ ಮಾಡಬೇಕೆನ್ನುವುದು ಅವರ ಗುರಿ.ಹೇಮಂತ್ ಎಂ.ರಾವ್ ನಿರ್ದೇಶನದಲಿ ಮೂಡಿಬರುತ್ತಿರುವ "ಕವಲುದಾರಿ" ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ ನಲ್ಲಿನ ಪ್ರಥಮ ಚಿತ್ರವಾಗಿದೆ, "ನನಗೆ ಪ್ರೊಡಕ್ಷನ್ ಹೌಸ್ ಹೊಸದಲ್ಲ, ನಾನು ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾಗಿನಿಂದ ಇದನ್ನು ಕಂಡೊದ್ದೇನೆ.ಹೀಗಾಗಿ ನಟನೆಯೊಡನೆ ನನಗೆ ನಿರ್ಮಾಣದ ಕುರಿತಂತೆಯೂ ಸಾಕಷ್ಟು ಅರಿವಿದೆ.ನನ್ನಲ್ಲಿ ಸೃಜನಾತ್ಮಕ ಪ್ರಕ್ರಿಯೆಯು ನಿರಂತರವಾಗಿ ವಿಕಸನಗೊಳ್ಳುತ್ತಿದೆ ಎಂದು ನಾನು ಭಾವಿಸಿದ್ದೇನೆ.
"ಇದೀಗ, ನಮ್ಮ ಚಿತ್ರಗಳಿಗೆ ಉತ್ತಮ ಮಾರುಕಟ್ಟೆ ಇದೆ. ನಾನು ಯಾವಾಗಲೂ  ನನ್ನ ಮನಸ್ಸಿನಲ್ಲಿರುವ ಕಥೆಯನ್ನು ಚಿತ್ರದಲ್ಲಿ ತೋರಿಸಲು ನಾನು ಪ್ರೊಡಕ್ಷನ್ ನತ್ತ ಗಮನ ಹರಿಸುತೇನೆ.ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮೂಲಕ ನಿರ್ದೇಶಕರಾಗಿರುವ ಹೇಮಂತ್ ಬಗೆಗೆ ನನಗೆ ಚೆನ್ನಾಗಿ ಗೊತ್ತು.. ಅವರು ನನಗೆ ವಿವರಿಸಿದ ಕಥೆ - ಕವಲುದಾರಿ ಬಹಳ ಉತ್ತಮವಾಗಿದೆ.ಈ ಚಿತ್ರದಲ್ಲಿ ನನ್ನ ಹೆಂಡತಿ (ಅಶ್ವಿನಿ) ಸಹ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ನನ್ನ ತಾಯಿಯ ಹೆಸರಿನಲ್ಲಿ ನಾವು ಒಂದು ಬ್ಯಾನರ್ ಅನ್ನು ಪ್ರಾರಂಭಿಸಿದ್ದೇವೆ  ಈ ಮೂಲಕ ಅವರ ನೆನಪನ್ನು ಸದಾ ಹಸಿರಾಗಿರಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ.  ಪುನೀತ್ ಹೇಳುತ್ತಾರೆ
ಪುನೀತ್ ಸದ್ಯ "ಯುವರತ್ನ"ದತ್ತ ಹೆಚ್ಚು ಗಮನ ನೀಡುತ್ತಿದ್ದು ಇನ್ನೂ ಕೆಲವು ನಿರ್ಮಾಪಕರೊಡನೆ ಸಂಪರ್ಕದಲಿದ್ದಾರೆ. ಆದರೆ ಬೇರಾವುದೇ ಚಿತ್ರ ಅಂತಿಮವಾಗುವವರೆಗೆ ಆ ಬಗ್ಗೆ ಏನನ್ನೂ ಹೇಳಲು ಬಯಸಲ್ಲ ಎಂದೂ ಅವರು ಹೇಳಿದ್ದಾರೆ."ಎಲ್ಲವನ್ನೂ ಯೋಜನಾಬದ್ದವಾಗಿಸಿದ ಹೊರತು ನಾನೇನೂ ಹೇಳಲಾಗುವುದಿಲ್ಲ": ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com