ಜೊನಾಥನ್ ಮತ್ತು ಇನ್ಸ್ ಪೆಕ್ಟರ್ ಲವಕುಮಾರ್ ಪಯಣವನ್ನು ಹೇಳುವ 'ಮಿಸ್ಸಿಂಗ್ ಬಾಯ್'

ಹದಿನೈದು ವರ್ಷಗಳ ಹಿಂದೆ ಬರೆದ ಕಥೆ ಕೊನೆಗೂ ಚಿತ್ರವಾಗಿ ಮೂಡಿಬಂದಿದೆ. ಫಸ್ಟ್ ರ್ಯಾಂಕ್ ರಾಜು...
ರಘುನಂದನ್
ರಘುನಂದನ್
ಹದಿನೈದು ವರ್ಷಗಳ ಹಿಂದೆ ಬರೆದ ಕಥೆ ಕೊನೆಗೂ ಚಿತ್ರವಾಗಿ ಮೂಡಿಬಂದಿದೆ. ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ನಟ ರಘುನಂದನ್ 2003ರಲ್ಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಈ ಸಿನಿಮಾ ಆಧಾರಿತ ನಿಜ ಜೀವನದ ಘಟನೆಯನ್ನಾಧರಿಸಿದ್ದು ಮೂರು ಭಾಗಗಳಲ್ಲಿ ಕ್ರೈಂ ಸ್ಟೋರಿಯಾಗಿ ಪ್ರಸಾರವಾಗಿತ್ತು.
ಕ್ರೈಂ ಸ್ಟೋರಿ ಗುರುನಂದನ್ ಗಮನವನ್ನು ಬಹಳ ಸೆಳೆಯಿತು. ಕ್ರೈಂ ಸ್ಟೋರಿ ಬರೆದಿದ್ದ ಚಂದ್ರ ಬಾರ್ಕೊರೇ ಅವರಿಂದ ಸಿಡಿ ಪಡೆದು ಅದನ್ನು ಸಿನಿಮಾ ಮಾಡಲು ಯತ್ನಿಸುತ್ತಿದ್ದರು. ಗುರುನಂದನ್ ಸಿಡಿಯನ್ನು ನಿರ್ದೇಶಕ ಶ್ರೀಧರ್ ಅವರ ಕೈಗಿತ್ತರು. ಅದು 2014ರಲ್ಲಿ ನನ್ನ ಬಳಿ ಬಂತು. ಗುರುನಂದನ್ ನನ್ನು ನಂತರ ನಾನು ಜಿಮ್ ನಲ್ಲಿ ಭೇಟಿ ಮಾಡಿ ಸಿನಿಮಾ ಬಗ್ಗೆ ಚರ್ಚಿಸಿದ್ದೆ. ಹೀಗೆ ನನ್ನ ಮತ್ತು ಗುರುನಂದನ್ ಜೋಡಿಯಲ್ಲಿ ಚಿತ್ರ ತಯಾರಾಯಿತು ಎನ್ನುತ್ತಾರೆ ರಘುರಾಮ್.
ಕೊಲ್ಲ ಪ್ರವೀಣ್ ನಿರ್ಮಾಣದ ಮಿಸ್ಸಿಂಗ್ ಬಾಯ್ ಚಿತ್ರದಲ್ಲಿ ಜೊನಾಥನ್ ಎಂಬ ಹುಡುಗ ಕಾಣೆಯಾದ ಬಗ್ಗೆ ಮತ್ತು ಇನ್ಸ್ ಪೆಕ್ಟರ್ ಲವಕುಮಾರ್ ಬಗ್ಗೆ ವಿವರಿಸಲಾಗಿದೆ. ನಿಜ ಜೀವನ ಘಟನೆಯನ್ನಾಧರಿಸಿದ ಚಿತ್ರವನ್ನು ತೆರೆ ಮೇಲೆ ತರುವುದು ಕಷ್ಟವಾಯಿತು. ತೆರೆಯ ಮೇಲೆ ಕಥೆ ಮಾಡುವುದು ಕಷ್ಟವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ವಿಷಯದಿಂದ ಆಚೀಚೆ ಹೋಗಬಾರದು ಎಂದು ಇನ್ಸ್ ಪೆಕ್ಟರ್ ಜೊತೆ ಒಡಂಬಡಿಕೆಯಾಗಿತ್ತು ಎನ್ನುತ್ತಾರೆ ರಘುರಾಮ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com