ಬದುಕಿನ ವಿಡಂಬನೆಯ ಹಾಸ್ಯ ಚಿತ್ರ 'ಸ್ಟೀಲ್ ಪಾತ್ರೆ ಸಾಮಾನ್': ಅರವಿಂದ್ ಕೌಶಿಕ್

ಶಾರ್ದೂಲ ಚಿತ್ರದ ಬಿಡುಗಡೆಗೆ ಅರವಿಂದ್ ಕೌಶಿಕ್ ಸಿದ್ಧವಾಗಿದ್ದರೂ ಕೂಡ ಅವರ ಮುಂದಿನ ಚಿತ್ರದ ಶೂಟಿಂಗ್...
ಜಯಂತ್ ಪಿ ಬೆಲ್ಲೂರು, ಶ್ರಾವಣ್ ಐತಾಳ್ ಮತ್ತು ಮನೋಜವಮ್ ಆತ್ರೇಯ
ಜಯಂತ್ ಪಿ ಬೆಲ್ಲೂರು, ಶ್ರಾವಣ್ ಐತಾಳ್ ಮತ್ತು ಮನೋಜವಮ್ ಆತ್ರೇಯ
Updated on
ಶಾರ್ದೂಲ ಚಿತ್ರದ ಬಿಡುಗಡೆಗೆ ಅರವಿಂದ್ ಕೌಶಿಕ್ ಸಿದ್ಧವಾಗಿದ್ದರೂ ಕೂಡ ಅವರ ಮುಂದಿನ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಸ್ಟೀಲ್ ಪಾತ್ರೆ ಸಾಮಾನ್ ಎಂದು ಹೆಸರಿಡಲಾಗಿದ್ದು ಇದೊಂದು ಕಾಮಿಡಿ ಚಿತ್ರ. ಜೀವನದ ಬಗ್ಗೆ ವಿಡಂಬನಾತ್ಮಕ ಹಾಸ್ಯ ಚಿತ್ರದಲ್ಲಿರಲಿದೆ ಎನ್ನುತ್ತಾರೆ ನಿರ್ದೇಶಕರು.
ಚಿತ್ರದ ಫಸ್ಟ್ ಸ್ಟಿಲ್ ನ್ನು ಬಿಡುಗಡೆ ಮಾಡಿರುವ ಅರವಿಂದ್ ಕೌಶಿಕ್ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದರು. ಇಂದಿನ ಯುವಜನಾಂಗ ಜೀವನದಲ್ಲಿ ಆಯ್ಕೆ ಮಾಡಿಕೊಳ್ಳುವಾಗ ಯಾವ ರೀತಿ ಗೊಂದಲಕ್ಕೊಳಗಾಗುತ್ತಾರೆ ಮತ್ತು ಒತ್ತಡವನ್ನು ಹೇಗೆ ಎದುರಿಸುತ್ತಾರೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಸಮಾಜ ಯುವಜನರನ್ನು ತಮ್ಮ ಪಾಡಿಗೆ ಇರಲು ಬಿಡುವುದಿಲ್ಲ. ಚಿತ್ರದಲ್ಲಿ ಮೂರು ಮುಖ್ಯ ಪಾತ್ರಗಳ ಹೆಸರೇ ಸ್ಟೀಲ್, ಪಾತ್ರೆ ಮತ್ತು ಸಾಮಾನ್ ಎಂದರು ಅರವಿಂದ್ ಕೌಶಿಕ್, ಚಿತ್ರ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.
ಸತ್ವ ಮೀಡಿಯಾ ಮತ್ತು ಸಿವಿಆರ್ ಸಿನೆಮಾಸ್ ನಿರ್ಮಿಸುತ್ತಿರುವ ಚಿತ್ರದಲ್ಲಿ ಬಹುತೇಕರು ಹೊಸ ಮುಖಗಳು, ಮನೋಜವಾಮ್ ಆತ್ರೇಯ, ಶ್ರಾವಣ್ ಐತಾಳ್, ಜಯಂತ್ ಪಿ ಬೆಲ್ಲೂರು ಮತ್ತು ಸಂಜನಾ ಬುರ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೇಕಡಾ 60 ಭಾಗ ಚಿತ್ರೀಕರಣ ಮುಗಿದಿದ್ದು ಚಿತ್ರದ ಫಸ್ಟ್ ಲುಕ್ ಯುಗಾದಿಗೆ ಬಿಡುಗಡೆಯಾಗಲಿದೆ. ಅರ್ಜುನ್ ರಾಮು ಸಂಗೀತ, ಮನೋಹರ್ ಯಪ್ಲಾರ್ ಕ್ಯಾಮರಾ ಮತ್ತು ಶಿವರಾಜ್ ಮೆಹು ಸಂಕಲನವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com