ಕಳೆದ ವಾರವಷ್ಟೇ ಧರ್ಮ ಕೀರ್ತಿರಾಜ್ ಅಭಿನಯದ ಚಾಣಾಕ್ಷ ಚಿತ್ರ ಬಿಡುಗಡೆಯಾಗಿದ್ದು ನಟ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದು ಚಿತ್ರಕ್ಕೆ ಖಡಕ್ ಎಂದು ಶೀರ್ಷಿಕೆ ಇಡಲಾಗಿದೆ.
ಕಳೆದ ವಾರವಷ್ಟೇ ಧರ್ಮ ಕೀರ್ತಿರಾಜ್ ಅಭಿನಯದ ಚಾಣಾಕ್ಷ ಚಿತ್ರ ಬಿಡುಗಡೆಯಾಗಿದ್ದು ನಟ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದು ಚಿತ್ರಕ್ಕೆ ಖಡಕ್ ಎಂದು ಶೀರ್ಷಿಕೆ ಇಡಲಾಗಿದೆ.
ಕಳೆದ ಬುಧವಾರ ಚಿತ್ರದ ಮುಹೂರ್ತ ನೆರವೇರಿದ್ದು ಸದ್ಯ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಚಿತ್ರವನ್ನು ರಾಜರತ್ನ ನಿರ್ದೇಶಿಸಿದ್ದು ಅನುಷಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದೀಗ ಚಿತ್ರಕ್ಕೆ ಉದ್ಘರ್ಘ ಚಿತ್ರದ ವಿಲನ್ ಕಬೀರ್ ದುಹಾನ್ ಸಿಂಗ್ ರನ್ನು ಕರೆತಂದಿದ್ದಾರೆ. ವಾಲಿ ಮತ್ತು ಸಿದ್ದರಾಮಯ್ಯ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಕೃಪಾಕರ್ ಸಂಗೀತ ಸಂಯೋಜಿಸುತ್ತಿದ್ದು ಶಂಕರ್ ಛಾಯಾಗ್ರಹಣವಿದೆ.