ರಂಗಕರ್ಮಿ ಮಾಸ್ಟರ್​ ಹಿರಣ್ಣಯ್ಯ ಪಂಚಭೂತಗಳಲ್ಲಿ ಲೀನ

ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ನಯ್ಯ ಇಂದು (ಗುರುವಾರ) ವಿಧಿವಶರಾಗಿದ್ದು ಇವರ ಅಂತ್ಯ ಸಂಸ್ಕಾರ ಬನಶಂಕರಿಯ ಚಿತಾಗಾರದಲ್ಲಿ ಸಂಜೆ ನೆರವೇರಿದೆ.
ರಂಗಕರ್ಮಿ ಮಾಸ್ಟರ್​ ಹಿರಣ್ಣಯ್ಯ ಪಂಚಭೂತಗಳಲ್ಲಿ ಲೀನ
ರಂಗಕರ್ಮಿ ಮಾಸ್ಟರ್​ ಹಿರಣ್ಣಯ್ಯ ಪಂಚಭೂತಗಳಲ್ಲಿ ಲೀನ
Updated on
ಬೆಂಗಳೂರು: ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ನಯ್ಯ ಇಂದು (ಗುರುವಾರ) ವಿಧಿವಶರಾಗಿದ್ದು ಇವರ ಅಂತ್ಯ ಸಂಸ್ಕಾರ ಬನಶಂಕರಿಯ ಚಿತಾಗಾರದಲ್ಲಿ ಸಂಜೆ ನೆರವೇರಿದೆ.
ಸ್ಮಾರ್ಥ ಬ್ರಾಹ್ಮಣ ಸಂಒರದಾಯದಂತೆ ಅಂತ್ಯಕ್ರಿಯೆ ನಡೆದಿದ್ದು ಪುತ್ರರಾದ ಬಾಬು ಹಿರಣ್ಣಯ್ಯ, ಶ್ರೀಕಾಂತ್​ ಹಿರಣ್ಣಯ್ಯ ಮತ್ತು ಗುರುನಾಥ್​ ಹಿರಣ್ಣಯ್ಯ ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಕಳಸಾಪುರದ ಶ್ರೀನಿವಾಸ ಶಾಸ್ತ್ರಿಗಳು ಅಂತ್ಯಕ್ರಿಯೆಯ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಕೇವಲ ಕುಟುಂಬ ವರ್ಗ ಹಾಗೂ ಹತ್ತಿರದ ಆತ್ಮೀಯರ ಸಮ್ಮುಖದಲ್ಲಿ ಅಂತ್ಯಕ್ರಿಯೆಯ ವಿಧಿಗಳು ನೆರವೇರಿದವು. 
ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಿರಣ್ಣಯ್ಯ ಅದಕ್ಕಾಗಿ ಚಿಕ್ತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಯಕೃತ್ತು (ಲಿವರ್) ಸಮಸ್ಯೆಯೂ ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಕೆಂಗೇರಿ ಸಮೀಪದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. 
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಅವರಿಗೆ 85  ವರ್ಷ ವಯಸ್ಸಾಗಿತ್ತು. ಲಂಚಾವತಾರ, ನಡುಬೀದಿ ನಾರಾಯಣ ಮೊದಲಾದ ನಾಟಕಗಳು, ಋಣಮುಕ್ತಳು ಆನಂದ ಸಾಗರ’, ‘ಕೇರ್ ಆಫ್ ಫುಟ್ ಪಾತ್’ ನಂ.73 ಶಾಂತಿ ನಿವಾಸ, ಗಜ ಇದೇ ಮೊದಲಾದ ಚಿತ್ರಗಳಲ್ಲಿ ಸಹ ನಟಿಸಿದ್ದರು. ಸಮಾಜದ ಪಿಡುಗುಗಳಿಗೆ ವಿಡಂಬನೆಯ ಚುಚ್ಚುಮದ್ದು ನೀಡುವುದು ಅವರ  ವೈಶಿಷ್ಟ್ಯವಾಗಿತ್ತು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com