ಜೋಡೆತ್ತು ಸಿಕ್ಕಿದ್ದು ಯಾರಿಗೆ? ಕಳ್ಳೆತ್ತು ಹಿಡ್ಕೊಂಡವರು ಯಾರು? ನಿಖಿಲ್ ಎಲ್ಲಿದ್ದೀಯಪ್ಪಾ? ಯಾರ ಪಾಲು?

ಮಂಡ್ಯ ಲೋಕಸಭೆ ಚುನಾವಣೆ ವೇಳೆ ಸದ್ದು ಮಾಡಿದ್ದ ಜೋಡೆತ್ತು, ಕಳ್ಳೆತ್ತು, ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಟೈಟಲ್ ಗಳಿಗಾಗಿ ಹಲವು ನಿರ್ಮಾಪಕರು ಕರ್ನಾಟಕ ಚಲನಚಿತ್ರ .
ದರ್ಶನ್ (ಸಂಗ್ರಹ ಚಿತ್ರ)
ದರ್ಶನ್ (ಸಂಗ್ರಹ ಚಿತ್ರ)
ಮಂಡ್ಯ ಲೋಕಸಭೆ ಚುನಾವಣೆ ವೇಳೆ ಸದ್ದು ಮಾಡಿದ್ದ  ಜೋಡೆತ್ತು, ಕಳ್ಳೆತ್ತು, ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಟೈಟಲ್ ಗಳಿಗಾಗಿ ಹಲವು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆನ್ನುಬಿದ್ದಿದ್ದರು. 
ನಿರ್ಮಾಪಕ ಎಂ,ಜಿ ರಾಮಮೂರ್ತಿ ಅವರ ಚೈತ್ರ ಕುಟೀರ ಬ್ಯಾನರ್ ಅಡಿಯಲ್ಲಿ ಜೋಡೆತ್ತು ಟೈಟಲ್ ನೋಂದಣಿಯಾಗಿದೆ, ನಾನು ಮೊದಲು ಜೋಡೆತ್ತು ಟೈಟಲ್ ಗಾಗಿ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದೆ, ಹೀಗಾಗಿ ನನಗೆ ಸಿಗಲು ಸಾಧ್ಯವಾಯಿತು, ಟೈಟಲ್ ಗೆ ಹೊಂದುವಂತ ಕಥೆಗಾಗಿ ಬೆಂಗಳೂರು ಮತ್ತು ಚೆನ್ನೈ ಬರಹಗಾರರು ಸಿದ್ಧತೆ ನಡೆಸುತ್ತಿದ್ದಾರೆ.
ಎಲ್ಲವು ಅಂದಕೊಂಡಂತೆ ಎಲ್ಲವೂ ನಡೆದರೇ ದರ್ಶನ್ ಸಿನಿಮಾ ನಾಯಕರಾಗುತ್ತಾರೆ, ಇದೊಂದು ಮಲ್ಟಿ ಸ್ಟಾರ್ ಸಿನಿಮಾ ಆಗಲಿದೆ, ಇದು ದರ್ಶನ್ ಅವರ 55ನೇ ಸಿನಿಮಾ ಆಗಲಿದೆ,ದರ್ಶನ್ ನಿರ್ಧಾರದ ನಂತರ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಮಮೂರ್ತಿ ಹೇಳಿದ್ದಾರೆ. ಸಿನಿಮಾದಲ್ಲಿ ರಾಜಕೀಯ ಕಥೆ ಇರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಥೆ ಬೋರ್ಡ್ ಗೆ ಬಂದ ಮೇಲೆ ನಿರ್ಧಾರವಾಗುತ್ತದೆ.
ಇನ್ನೂ ನಿಖಿಲ್ ಎಲ್ಲಿದ್ದಿಯಪ್ಪಾ ಟೈಟಲ್ ಗೆ ಭಾರೀ ಡಿಮ್ಯಾಂಡ್ ಇದ್ದು, ನಿರ್ಮಾಪಕ ಎ ಗಣೇಶ್, ನಿಖಿಲ್ ಎಲ್ಲಿದ್ದೀಯಪ್ಪಾ ಬದಲಿಗೆ ಎಲ್ಲಿದ್ದೀಯಪ್ಪ ಎಂಬ ಟೈಟಲ್ ರಿಜಿಸ್ಟಾರ್ ಮಾಡಿಸಿದ್ದಾರೆ. ಎರಡು ತಿಂಗಳ ಹಿಂದೆಯೇ ಟೈಟಲ್ ನೋಂದಾಯಿಸಿದ್ದೇನೆ, ಇದಕ್ಕೆ ಯಾವುದೇ ರಾಜಕೀಯ ನಂಟಿರುವುದಿಲ್ಲ,ಇದು ತಂದೆ ಮಗನ ಸೆಂಟಿ ಮೆಂಟ್ ಇರುವ ಕಥೆ ಇದಾಗಿರುತ್ತದೆ.
17 ಕೋಟಿ ರು ಬಜೆಟ್ ನಲ್ಲಿ  ಈ ಸಿನಿಮಾ ತಯಾರಾಗಲಿದೆ, ತೆಲುಗು ಸಿನಿಮಾ ರಂಗದ ಹಲವು ನಿರ್ದೇಶಕರನ್ನು ಸಂಪರ್ಕಿಸಿದ್ದೇನೆ, ಫಲಿತಾಂಶ ಬರುವವರೆಗೂ ಕಾದು ನಂತರ ಪ್ರಕಟಿಸುತ್ತೇನೆ, ಶ್ರೀಮುರುಳಿ, ರಕ್ಷಿತ್ ಶೆಟ್ಟಿ ಮತ್ತು ರವಿ ಚಂದ್ರನ್ ಗಣೇಶ್ ಮನಸ್ಸಿನಲ್ಲಿದ್ದಾರೆ, ಶಿವರಾಜ್ ಕುಮಾರ್ ಅವರನ್ನು ನಾಯಕನಾಗಿಸುವ ಚಿಂತೆ ಕೂಡ ಇದೆ ಎಂದು ಹೇಳಿದ್ದಾರೆ.
ಇನ್ನೂ ನಿರ್ಮಾಪಕ ವಿಜಯ್ ಕುಮಾರ್ ಅವರಿಗೆ ಕಳ್ಳೆತ್ತು ಟೈಟಲ್ ಸಿಕ್ಕಿದೆ, ಕೆಲಸ ಆರಂಭಿಸುವ ಮುನ್ನ ಫಲಿತಾಂಶಕ್ಕಾಗಿ ವಿಜಯ್ ಕುಮಾರ್ ಕಾಯುತ್ತಿದ್ದಾರೆ.
ಇನ್ನೂ ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ಕೂಡ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಲಾಗಿದೆ,.2015ರಲ್ಲಿ ರಚನೆಯಾದ ಹೊಸ ಸಿನಿಮಾ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್ ರಿಜಿಸ್ಟಾರ್ ಮಾಡಿಸಿದ್ದಾರೆ. ಅವರೇ ನಿರ್ದೇಶಿಸಿ ನಿರ್ಮಾಣ ಮಾಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com