ಸಿನಿಮಾ ಸುದ್ದಿ
ಶೂಟಿಂಗ್ ಮುಗಿಸಿದ 'ರಾಜು ಜೇಮ್ಸ್ ಬಾಂಡ್', ಸೆಪ್ಟೆಂಬರ್ ನಲ್ಲಿ ತೆರೆಗೆ
ರಾಜು ಜೇಮ್ಸ್ ಬಾಂಡ್ ಚಿತ್ರದ ನಿರ್ದೇಶನವನ್ನು ದೀಪಕ್ ಮಡುವನಹಳ್ಳಿ ಮೇ 24ಕ್ಕೆ ಸಂಡೂರಿನಲ್ಲಿ...
ರಾಜು ಜೇಮ್ಸ್ ಬಾಂಡ್ ಚಿತ್ರದ ನಿರ್ದೇಶನವನ್ನು ದೀಪಕ್ ಮಡುವನಹಳ್ಳಿ ಮೇ 24ಕ್ಕೆ ಸಂಡೂರಿನಲ್ಲಿ ಮುಗಿಸಿದ್ದಾರೆ. ಕೊನೆಯ 12 ದಿನಗಳ ಶೂಟಿಂಗ್ ಶೆಡ್ಯೂಲ್ ನಲ್ಲಿ ಸಂಭಾಷಣೆಯ ಭಾಗವನ್ನು ಪೂರ್ಣಗೊಳಿಸಿದೆ.
ಮಾಸ್ ಮಾಡ ಮತ್ತು ಮುರಳಿ ಮಾಸ್ಟರ್ ಫೈಟಿಂಗ್ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಗುರುನಂದನ್ ಮತ್ತು ಹೊಸಬ ನಾಯಕಿ ಮೃದುಲಾ ನಟಿಸಿದ್ದು ಅಕ್ಷದ ಪಟೇಲ್ ವಿಶೇಷ ಹಾಡಿನಲ್ಲಿದ್ದಾರೆ,
ಚಿತ್ರದಲ್ಲಿ ಚಿಕ್ಕಣ್ಣ, ಅಚ್ಯುತ್ ಕುಮಾರ್, ಜೈ ಜಗದೀಶ್, ಮಂಜುನಾಥ್ ಹೆಗ್ಡೆ, ವಿಜಯ್ ಚೆಂಡೂರು ಚಿತ್ರದಲ್ಲಿದ್ದಾರೆ, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದಾರೆ. ಕರ್ಮ ಬ್ರೊ ಬ್ಯಾನರ್ ನಡಿ ಮಂಜುನಾಥ್ ವಿಶ್ವಕರ್ಮ ಮತ್ತು ಕಿರಣ್ ಬಾರ್ತೂರು ನಿರ್ಮಿಸಿದ್ದಾರೆ.