ಹಸೆಮಣೆ ಏರಿದ ಪುಟ್ಟಗೌರಿ ಮಹೇಶ್, ಗೆಳತಿಯೊಡನೆ ನಟ ರಕ್ಷ್ ವಿವಾಹ
ಸಿನಿಮಾ ಸುದ್ದಿ
ಹಸೆಮಣೆ ಏರಿದ ಪುಟ್ಟಗೌರಿ ಮಹೇಶ್, ಗೆಳತಿಯೊಡನೆ ನಟ ರಕ್ಷ್ ವಿವಾಹ
"ಪುಟ್ಟಗೌರಿ ಮದುವೆ" ಯಲ್ಲಿ ಮಹೇಶ್ ಪಾತ್ರ ಮಾಡಿ ಮನೆಮಾತಾಗಿದ್ದ ನಟ ರಕ್ಷ್ ತಮ್ಮ ಆತ್ಮೀಯ ಗೆಳತಿಯೊಡನೆ ಸಪ್ತಪದಿ ತುಳಿದಿದ್ದಾರೆ.
ಬೆಂಗಳೂರು: "ಪುಟ್ಟಗೌರಿ ಮದುವೆ" ಯಲ್ಲಿ ಮಹೇಶ್ ಪಾತ್ರ ಮಾಡಿ ಮನೆಮಾತಾಗಿದ್ದ ನಟ ರಕ್ಷ್ ತಮ್ಮ ಆತ್ಮೀಯ ಗೆಳತಿಯೊಡನೆ ಸಪ್ತಪದಿ ತುಳಿದಿದ್ದಾರೆ.
ಭಾನುವಾರ (ಮೇ 26) ರಂದು ಬೆಂಗಳೂರಿನ ಅರಮನೆ ಮೈದಾನದ ಶೀಶ್ ಮಹಲ್‍ನಲ್ಲಿ ರಕ್ಷ್ ಮತ್ತು ಅನುಷಾ ವಿವಾಹ ಸಂಭ್ರಮದಿಂದ ನೆರವೇರಿದೆ.
ರಕ್ಷ್ ವಿವಾಹಕ್ಕೆ ಅವರ ಕುಟುಂಬ ವರ್ಗ, ಆಪ್ತೇಷ್ಟರು ಆಗಮಿಸಿದ್ದಲ್ಲದೆ ನಟಿ ರಂಜನಿ ರಾಘವನ್, ಅನುಪಮಾ ಗೌಡ ಮತ್ತಿತರರೂ ಬಂದು ಶುಭ ಹಾರೈಸಿದ್ದಾರೆ.
ಕೆಲವೇ ದಿನಗಳ ಹಿಂದೆ ರಕ್ಷಿತ್ ಎಂಬ ಹೆಸರನ್ನು ರಕ್ಷ್ ಎಂದು ಬದಲಿಸಿಕೊಂಡಿದ್ದ ಈ ನಟ ಸದ್ಯ "ಗಟ್ಟಿಮೇಳ" ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.


