ಮತ್ತೊಮ್ಮೆ ಆಕ್ಷನ್ ಕಟ್ ಹೇಳಲು ರಮೇಶ್ ಅರವಿಂದ್ ತಯಾರು, ಚಿತ್ರಕ್ಕೆ ರಚಿತಾ ನಾಯಕಿ?

ನಟ, ನಿರ್ದೇಶಕ, ಟಿವಿ ಕಾರ್ಯಕ್ರಮ ನಿರೂಪಕ ಈಗೆ ನಾನಾ ಬಗೆಯಲ್ಲಿ ಪಾತ್ರವಹಿಸುವ ರಮೇಶ್ ಅರವಿಂದ್ ಕನ್ನಡದ ನಾಡಿನ ಬಹುಮುಖ ಪ್ರತಿಭೆ ಎಂದರೆ ತಪ್ಪಲ್ಲ.ಅವರೇನೇ ಮಾಡಿದರೂ ಅತ್ಯುತ್ತಮವಾದದ್ದನ್ನೇ ಮಾಡುತ್ತಾರೆ....
ರಮೇಶ್ ಅರವಿಂದ್
ರಮೇಶ್ ಅರವಿಂದ್
Updated on
ನಟ, ನಿರ್ದೇಶಕ, ಟಿವಿ ಕಾರ್ಯಕ್ರಮ ನಿರೂಪಕ ಈಗೆ ನಾನಾ ಬಗೆಯಲ್ಲಿ ಪಾತ್ರವಹಿಸುವ ರಮೇಶ್ ಅರವಿಂದ್ ಕನ್ನಡದ ನಾಡಿನ ಬಹುಮುಖ ಪ್ರತಿಭೆ ಎಂದರೆ ತಪ್ಪಲ್ಲ. ಅವರೇನೇ ಮಾಡಿದರೂ ಅತ್ಯುತ್ತಮವಾದದ್ದನ್ನೇ ಮಾಡುತ್ತಾರೆ ಎನ್ನುವುದು ಅವರ ಚಿತ್ರಗಳನ್ನು ನೋಡಿದ ಪ್ರೇಕ್ಷಕರಿಗೆ ಮನದಟ್ಟಾಗಿದೆ. ಅವರು ತಾವು ಕೆಲಸ ಮಾಡುವ ಪ್ರತಿ ನಿಮಿಷವನ್ನೂ ಅಮೂಲ್ಯವೆಂದು ಭಾವಿಸಿದ್ದಾರೆ. ಇದೀಗ ಅವರು ನಡೆಸಿಕೊಡುತ್ತಿರುವ "ವೀಕೆಂಡ್ ವಿತ್ ರಮೇಶ್ ಸೀಜನ್ 4" ಮತ್ತು ಈ ಹಿಂದಿನ "ಕನ್ನಡದ ಕೋಟ್ಯಾಧಿಪತಿ" ಸೀಜನ್ ಗಳಿಂಡ ಕಿರುತೆರೆಯಲ್ಲಿಯೂ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.
ನಿರ್ದೇಶಕರಾಗಿ ರಮೇಶ್ ಅರವಿಂದ್ ಇದಾಗಲೇ ಕನ್ನಡದಲ್ಲಿ "ಕ್ವೀನ್", ತೆಲುಗಿನಲ್ಲಿ ":ಬಟರ್ ಫ್ಲೈ" ಹಾಗೂ ತಮಿಳಿನಲ್ಲಿ ಇನ್ನಷ್ಟೇ ತೆರೆಕಾಣಬೇಕಾಗಿರುವ "ಪ್ಯಾರೀಸ್ ಪ್ಯಾರೀಸ್" ಚಿತ್ರಗಳ ಮೂಲಕ ತಮ್ಮ ಹೆಗ್ಗುರುತು ಮೂಡಿಸಿದ್ದಾರೆ. ನಟನಾ ಕ್ಷೇತ್ರಕ್ಕೆ ಬಂದರೆ ಇತ್ತೀಚೆಗೆ ಶಮಿಕಾ ಎಂತರ್ ಪ್ರೈಸಸ್ ನಿರ್ಮಾಣದ "ಭೈರಾದೇವಿ" ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ.
ಆದರೆ ರಮೇಶ್ ಯಾವತ್ತೂ ಖಾಲಿ ಕುಳಿತಿರುವ ವ್ಯಕ್ತಿಯಲ್ಲ. ಅವರಾಗಲೇ ತಮ್ಮ ಮುಂದಿನ ಯೋಜನೆಗಳ ತಯಾರಿಯಲ್ಲಿದ್ದಾರೆ. ಈ ಯೋಜನೆಯಲ್ಲಿ ರಮೇಶ್ ಅರವಿಂದ್ ತಾವು ನಾಯಕ ನಟನಾಗಿರುವುದು ಮಾತ್ರವಲ್ಲದೆ ನಿರ್ದೇಶನವನ್ನೂ ಮಾಡಲಿದ್ದಾರೆ. ಆದರೆ ಈ ಸಂಬಂಧ ಇನ್ನಷ್ಟು ವಿವರ ತಿಳಿಯಲು ಅವರ ಅಭಿಮಾನಿಗಳು ಜೂನ್ 10ರವರೆಗೆ ಕಾಯಲೇಬೇಕು.
ರಮೇಶ್ ನಿರ್ದೇಶನದ ಚಿತ್ರಕ್ಕೆ ರಚಿತಾ ರಾಮ್ ನಾಯಕಿ?
ರಮೇಶ್ ಅರವಿಂದ್ ತಮ್ಮ ಮುಂದಿನ ಯೋಜನೆಯು ಇನ್ನೂ ನಿರ್ಮಾಣ ಪೂರ್ವ ಹಂತ ೯ಪ್ರಿ ಪ್ರೊಡಕ್ಷನ್) ದಲ್ಲಿದೆ ಎಂದಿದ್ದಾರೆ.ಆದರೆ ಮೂಲಗಳ ಪ್ರಕಾರ ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದಾರೆ. ಅದರಲ್ಲಿ ಒಬ್ಬರು ರಚಿತಾ ರಾಮ್ ಆಗಿರುವ ಸಾಧ್ಯತೆ ಇದೆ. ನಟಿ ರಚಿತಾ ತಮ್ಮ ಅಭಿನಯದ "ಐ ಲವ್ ಯು" ಹಾಗೂ "ರುಸ್ತುಮ್" ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದು ಸಧ್ಯ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ "ಆನಂದ್" ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.
ಒಂದೊಮ್ಮೆ ಇದೇ ನಿಜವಾದಲ್ಲಿ ವಿಮರ್ಶಕರ ಮೆಚ್ಚುಗೆ ಪಡೆದಿದ್ದ "ಪುಷ್ಪಕ ವಿಮಾನ" ಚಿತ್ರದ ನಂತರ ಮತ್ತೊಮ್ಮೆ ರಮೇಶ್-ರಚಿತಾ ಜೋಡಿ ತೆರೆ ಮೇಲೆ ಒಂದಾಗಿ ಕಾಣಿಸಿಕೊಳ್ಲಲಿದೆ. "ಪುಷ್ಪಕ ವಿಮಾನ" ಚುತ್ರದಲ್ಲಿ ರಚಿತಾ ರಮೇಶ್ ಅರವಿಂದ ಅವರ ಪುತ್ರಿಯಾಗಿ ಅಭಿನಯಿಸಿದ್ದರು.
ಅಲ್ಲದೆ ರಮೇಶ್ ನಿರ್ದೇಶನದಲ್ಲಿ ರಚಿತಾ ಪಾಲಿಗಿದು ಚೊಚ್ಚಲ ಚಿತ್ರವಾಗಲಿದೆ. ಪ್ರೇಕ್ಷಕರು ರಚಿತಾ ಈ ಚಿತ್ರದಲ್ಲಿ ಯಾವ ಬಗೆಯ ಪಾತ್ರ ವಹಿಸಲಿದ್ದಾರೆಂದು ಕಾತುರದಿಂದ ನಿರೀಕ್ಷೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com