'ಅಮರ್ 'ಅಭಿಷೇಕ್ ಗೆ ಸ್ಯಾಂಡಲ್ ವುಡ್ ನಲ್ಲಿ ದೊಡ್ದ ಬ್ರೇಕ್ ನೀಡಲಿದೆ: ನಾಗಶೇಖರ್

ಖ್ಯಾತ ನಿರ್ದೇಶಕ ನಾಗಶೇಖರ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ನ ಚೊಚ್ಚಲ ಚಿತ್ರ "ಅಮರ್" ನಿರ್ದೇಶನ ಮಾಡಿದ್ದಾರೆ. ಆದರೆ ಇದೇನೂ ಸುಲಭ ಆಯ್ಕೆಯಾಗಿರಲಿಲ್ಲ.
'ಅಮರ್ 'ಅಭಿಷೇಕ್ ಗೆ ಸ್ಯಾಂಡಲ್ ವುಡ್ ನಲ್ಲಿ ದೊಡ್ದ ಬ್ರೇಕ್ ನೀಡಲಿದೆ: ನಾಗಶೇಖರ್
'ಅಮರ್ 'ಅಭಿಷೇಕ್ ಗೆ ಸ್ಯಾಂಡಲ್ ವುಡ್ ನಲ್ಲಿ ದೊಡ್ದ ಬ್ರೇಕ್ ನೀಡಲಿದೆ: ನಾಗಶೇಖರ್
ಖ್ಯಾತ ನಿರ್ದೇಶಕ ನಾಗಶೇಖರ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ನ ಚೊಚ್ಚಲ ಚಿತ್ರ "ಅಮರ್" ನಿರ್ದೇಶನ ಮಾಡಿದ್ದಾರೆ. ಆದರೆ ಇದೇನೂ ಸುಲಭ ಆಯ್ಕೆಯಾಗಿರಲಿಲ್ಲ. ನಾಗಶೇಖರ್ ಗಿಂತಲೂ ಮುನ್ನ ಅನೇಕ ನಿರ್ದೇಶಕರು ಅಭಿಷೇಕ್ ಅವರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದರು. ಆದರೆ ಅದಾವುದೂ ಸಫಲವಾಗಿರಲಿಲ್ಲ. ಆದರೆ ಈಗ ನಾಗಶೇಖರೀ ಜವಾಬ್ದಾರಿಯನ್ನು ಅವರ ಹೆಗಲ ಮೇಲೆ ಹೊತ್ತಿದ್ದಾರೆ.
"ಅಭಿಷೇಕ್ ಅಂಬರಿಶ್  ಚೊಚ್ಚಲ ಚಿತ್ರಕ್ಕೆ ನಾನು ಆಕ್ಷನ್ ಕಟ್ ಹೇಳುತ್ತಿರುವುದು ನನಗೆ ಅತೀವ ಸಂತಸವನ್ನು ತಂದಿದೆ. ಹಾಗೆಯೇ ನನ್ನ ಪಾಲಿಗೊಂದು ಅಚ್ಚರಿಯೂ ಆಗಿದೆ. ನಾನು ಹೈದರಾಬಾದ್ ನಲ್ಲಿದ್ದಾಗ ನನಗೆ ಈ ಆಫರ್ ಬಂದಿದ್ದು ಮೊದಲ ಬಾರಿಗೆ ಫೋನ್ ನಲ್ಲಿ ಕೇಳುಆಗ ನನಗೆ ಇದನ್ನೆಲ್ಲಾ ನಂಬಲೇ ಆಗಿರಲಿಲ್ಲ. ಏಕೆಂದರೆ ನಾನು ಈ ಹಿಂದೆ ರೆಬೆಲ್ ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ಸಾಕಷ್ಟು ನಿರ್ದೇಶಕರು ಪ್ರಯತ್ನಿಸಿದ್ದನ್ನು ಕೇಳಿ ತಿಳಿದಿದ್ದೆ" ನಾಗಶೇಖರ್ ಹೇಳುತ್ತಾರೆ.
"ಸ್ಕ್ರೀನ್ ಪ್ಲೇ ಸರಿಯಾಗಿ ಹಿಒಂದಾಣಿಕೆಯಾಗಲಿದೆ ಎಂದು ನಂಬಿಕೆ ಬಂದ ನಂತರವೇ ನಾನು ಅಭಿಷೇಕ್ ಅವರಿಗೆಹೇಳಿದ್ದೆ. ಈ ಕಥೆಯನ್ನು ಮೊದಲಿಗೆ ದಿ. ಅಂಬರೀಶ್, ಸುಮಲತಾ, ನಿರ್ಮಾಪಕ ಸಂದೇಶ್ ಹಾಗೂ ನಾಯಕ ನಟ ಅಭಿಷೇಕ್ ಕೇಳೀದ್ದರು." ನಾಗಶೇಖರ್ ಅವರ ಬಳಿಯಿದ್ದ 20 ಕಥೆಗಳ ಪೈಕಿ "ಅಮರ್" ಆಯ್ಕೆಯಾಗಿತ್ತು.
"ಅಂತಿಮ ಕಥೆ ಆಧರಿಸಿ ನಾನು ಚಿತ್ರಕಥೆ, ಸಂಭಾಷಣೆ ರಚಿಸಿದೆ.ಅದರಲ್ಲಿ ನಾನು ಚೆನ್ನೈನಲ್ಲಿ ಬರಹಗಾರ ವಿಜಿ ಅವರೊಂದಿಗೆ ಮೂರು ತಿಂಗಳು ಕಳೆದಿದ್ದೇನೆ "ಎಂದು ನಿರ್ದೇಶಕ ಹೇಳಿದ್ದಾರೆ.ಸಿನಿಮಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಸುಮಲತಾ ಉಪಸ್ಥಿತರಿದ್ದರು ಎನ್ನುವ ನಾಗಶೇಕರ್ "ತಾಯಿಗಿಂತ ಅವರಿಗೆ ಉತ್ತಮವಾಗಿ ತಿಳಿಹೇಳಬಲ್ಲವರಾರು?ಈ ಚಿತ್ರದ ಬಿಡುಗಡೆ ಅತ್ಯಂತ ಮುಖ್ಯವಾಗಿದೆ.ಅದರಲ್ಲಿಯೂ ಸುಮಲತಾ ಅವರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ.
"ವಾಸ್ತವವಾಗಿ, ಈ ಚಿತ್ರಕ್ಕಾಗಿ, ನಾವು ತಾಯಂದಿರ ಆಶೀರ್ವಾದ ಬೇಡುತ್ತೇವೆ. . ಸುಮಾಲಥಾ ಹೊರತುಪಡಿಸಿ, ನನ್ನ ತಾಯಿ ಸಹ ನನಗೆ ಬೆಂಬಲಕ್ಕೆ ನಿಂತಿದ್ದಾರೆ.ನಾನೊಂದು ದಂತಕಥೆಯಾಗಿರುವ ಅಂಬರೀಶ್ ಅವರ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ.ದನ್ನು ನಾನು ಜವಾಬ್ದಾರಿಯಾಗಿ ತೆಗೆದುಕೊಳ್ಳಬೇಕೆಂದು ನಾನು ಯಾವಾಗಲೂ ಭಾವಿಸುತ್ತೇನೆ.ಇದರೊಡನೆ ನಾಯಕ ನಟಿ ತಾನ್ಯಾಳ ತಾಯಿ ಡೆಬೋರಾ ಪೂರ್ವಾಂಕರ, ನಿರ್ಮಾಪಕರ ಪತ್ನಿ ಸಹ ಇದಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ"
ಚಿತ್ರ ಪ್ರೇಕ್ಷಕರಿಗೆ ಯಾವ ಮಟ್ಟದಲ್ಲಿ ಹಿಡಿಸಲಿದೆ, ಅದರ ಫಲಿತಾಂಶದ ಕುರಿತಂತೆ ಮಾತನಾಡಿದ ನಿರ್ದೇಶಕ ಅಭಿ ಮತ್ತು ನನ್ನ ನಡುವೆ ಉತ್ತಮ ಸ್ನೇಹ ಬೆಳೆದಿದೆ.ಇದು ನಮಗೆ ಚಲನಚಿತ್ರವನ್ನು ಉತ್ತಮಗೊಳಿಸಲು ಸಹಾಯ ಮಾಡಿದೆ ಎಂದಿದ್ದಾರೆ.ಚಲನಚಿತ್ರವು ಒಂದು ನೈಜಘಟನೆಯನ್ನಾಧರಿಸಿದೆ,.  "ಚಿತ್ರೀಕರಣದ ಸಮಯದಲ್ಲಿ 27 ದಿನ ಮಳೆಯಾಗಿತ್ತು, ಇನ್ನೂ ಸ್ವಿಡ್ಜರ್ಲೆಂಡ್ ನಲ್ಲಿ 20 ದಿನಗಳವರೆಗೆ  ನಾವು ಚಿತ್ರೀಕರಣ ನಡೆಸಿದ್ದೆವು. ವಿಶೇಷವೆಂದರೆ ಸ್ವಿಡ್ಜರ್ಲೆಂಡ್ ನಲ್ಲಿ ನಾವು 6°ಉಷ್ಣಾಂಶದಲ್ಲಿ ಶೂಟಿಂಗ್ ಮಾಡಿದ್ದರೆ ಮಲೇಷಿಯಾದಲ್ಲಿ  46°ಉಷ್ಣಾಂಶದಲ್ಲಿ ಚಿತ್ರೀಕರಣ ನಡೆಸಿದ್ದೆವು.ಈ ಎಲ್ಲಾ ಕ್ರೆಡಿತ್ ಚಿತ್ರದ ತಾಂತ್ರಿಕ ತಂಡಕ್ಕೆ ಹೋಗಬೇಕು. ಸತ್ಯ ಹೆಗ್ಡೆ, ಅರ್ಜುನ್ ಜನ್ಯ ಸಹ ನಮಗೆ ಉತ್ತಮ ಸಹಕಾರ ನೀಡಿದ್ದಾರೆ."
"ಚಿತ್ರನಿರ್ದೇಶಕನಾಗಿ ಪ್ರತಿ ಚಿತ್ರವೂ ನನ್ನ ಪಾಲಿಗೆ ಮಹತ್ವದ್ದಾಗಿರುತ್ತದೆ. ಆದರೆ ಅಭಿಷೇಕ್ ನ ಚೊಚ್ಚಲ ಚಿತ್ರವೆಂಬ ಕಾರಣಕ್ಕೆ ಈ ಚಿತ್ರಕ್ಕಾಗಿ ನಾನು ಸಾಕಷ್ಟು ಹೋಂವರ್ಕ್ ಮಾಡಿದ್ದೆ.  ಹೊಸ ನಟನಾಗಿ ಅಭಿಷೇಕ್  ಅವರಿಗೆ ಈ ಚಿತ್ರ ಆಕ್ಷನ್, ಲವ್, ಕಾಮಿಡಿ ಹೀಗೆ ನಾನಾ ಆಂಗಲ್ ನೊಡನೆ ಸಾಕಷ್ಟು ನಟನೆಯ ವ್ಯಾಪ್ತಿಯನ್ನು ನೀಡಿದೆ. ಅಮರ್ ಚಿತ್ರದಲ್ಲಿ ಅವರಿಗೆ ನವರಸಗಳನ್ನು ಅನ್ವೇಷಿಸುವ ಅವಕಾಶವಿತ್ತು. ಹಾಗೆಯೇ ಅವರೂ ಸಹ ತನ್ನ ಅತ್ಯುತ್ತಮ ಅಭಿನಯವನ್ನಿಲ್ಲಿ ಕೊಟ್ಟಿದ್ದಾರೆ"
'ಅಮರ್' ನಲ್ಲಿ ಅಂಬರೀಶ್ ಕಡೇಪಾತ್ರ
ನಾಗಶೇಖರ್ ನಿರ್ದೇಶನದ "ಅಮರ್" ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಕಟ್ಟಕಡೆಯ ಸಂಭಾಷಣೆ ಇದೆ. ಈ ಕಾರಣಕ್ಕಾಗಿ ನಾಗಶೇಖರ್ ತಮ್ಮನ್ನು ತಾವು ಅದೃಷ್ಟವಂತರೆಂದು ಭಾವಿಸುತ್ತಾರೆ.. "ನಾನು ಅವರ ವೃತ್ತಿಜೀವನದ ಕೊನೆಯ ಶಾಟ್  ತೆಗೆಯುವ ಅವಕಾಶ ಪಡೆದಿದ್ದೆ. ಜವಾಬ್ದಾರಿಯುತ ತಂದೆಯಾಗಿ, ಅವರು ತಮ್ಮ ಮಗನ ಅಭಿನಯದ ಬಗ್ಗೆ ಮತ್ತು ಚಿತ್ರದ ಮೊದಲಾರ್ಧವನ್ನು ವೀಕ್ಷಿಸಿದರು. ಸ್ವಿಡ್ಜರ್ಲೆಂಡ್  ಶೂಟಿಂಗ್ ತುಣುಕುಗಳನ್ನು ಅವರಿಗೆ ತೋರಿಸಬೇಕೆಂದು ನಾನು ಬಯಸಿದ್ದೆನು, ಮತ್ತು ನಾನು ಅವರು  ನಿಧನಹೊಂದಿದ ದಿನ ಭೇಟಿ ಕೊಟ್ತಾಗ ಅವರು ಅಸ್ವಸ್ಥರಾಗಿದ್ದನ್ನು ಸಹ ಗಮನಿಸಿದ್ದೆ. ಜತೆಗೆ ನಾನು ಕೆಲವೇ ದಿನಗಳಲ್ಲಿ ಮರಳಿ ಭೇಟಿಯಾಗುವುದಾಗಿಯೂ ಹೇಳಿದ್ದೆ." ನಾಗಶೇಖರ್ ನೆನಪಿಸಿಕೊಳ್ಳುತ್ತಾರೆ.
ಉದ್ಯಮಿಯಿಂದ 1 ಲಕ್ಷ ರೂ. ಬೆಲೆಯ ಟಿಕೆಟ್ ಖರೀದಿ
ರೆಬೆಲ್ ಪುತ್ರ ಅಭಿಷೇಕ್ ನಟನೆಯ "ಅಮರ್" ಚುತ್ರದ ಮೊದಲ ದಿನದ ಪ್ರದರ್ಶನದ 1 ಲಕ್ಷ ರೂಬೆಲೆಯ ಟಿಕೆಟ್ ಗಳನ್ನು ದಾವಣಗೆರೆ ಮೂಲದ ಉದ್ಯಮಿ ಮಂಜುನಾಥ್ ಖರೀದಿಸಿರುವುದು ವಿಶೇಷ. ದಿವಂಗತ ನಟ ಮತ್ತು ರಾಜಕಾರಣಿ ಅಂಬರೇಶ್ ಅವರ ಅಭಿಮಾನಿಯಾಗಿರುವ ಮಂಜುನಾಥ್ ಸಂದೇಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಿಸಿದ ಈ ಚಿತ್ರದ ಟಿಕೆಟ್ ಕರೀದಿಸಿದ್ದಾರೆ. ಚಿತ್ರವು ಇದೇ 31 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com